Astrology

ವೃಷಭ ರಾಶಿಯಲ್ಲಿ ಗುರು ಸಂಚಾರ; ಇತರ ಐದು ರಾಶಿಗಳಿಗೂ ಧನಯೋಗ!

ಜ್ಯೋತಿಷ್ಯದಲ್ಲಿ ಗುರು ಗ್ರಹ ಪ್ರಮುಖ ಪಾತ್ರ ವಹಿಸುತ್ತದೆ.. ಗುರು ಯಾವ ರಾಶಿಯಲ್ಲಿರುತ್ತದೋ ಆ ರಾಶಿಯವರಿಗೆ ಹಲವಾರು ಶುಭ ಫಲಗಳು ದೊರೆಯುತ್ತವೆ.. ಆದ್ರೆ ವೃಷಭ ರಾಶಿಯಲ್ಲಿ ಗುರುವಿನ ಸಂಚಾರವಿದ್ದರೆ, ವೃಷಭ ರಾಶಿಯ ಜೊತೆಗೆ ಬೇರೆ ಹಲವು ರಾಶಿಗಳಿಗೆ ಕೂಡಾ ಒಳ್ಳೆಯದಾಗುತ್ತದೆ.. ಹಲವಾರು ಶುಭಯೋಗಗಳು ಪ್ರಾಪ್ತವಾಗುತ್ತವೆ.. 2025ರ ಮೇ ಅಂತ್ಯದವರೆಗೆ ವೃಷಭ ರಾಶಿಯಲ್ಲಿ ಗುರುವಿನ ಸಂಚಾರವಿದೆ.. ಇದರಿಂದಾಗಿ ಸುಮಾರು ರಾಶಿಗಳವರಿಗೆ ಹಲವಾರು ರೀತಿಯಲ್ಲಿ ಒಳ್ಳೆಯದಾಗುತ್ತದೆ.. ಈ ಕೆಳಗಿನ ರಾಶಿಗಳವರಿಗೆ ಗುರುವಿನ ಒಳ್ಳೆಯ ದೃಷ್ಟಿಯಿಂದಾಗಿ ಉತ್ತಮ ಫಲಗಳು ದೊರೆಯುವುದು ನಿಶ್ಚಿಯ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಹೇಳುತ್ತಿದ್ದಾರೆ..

ಇದನ್ನೂ ಓದಿ; ಪ್ರೇಯಸಿಗಾಗಿ ಪತ್ನಿ, ಇಬ್ಬರು ಮಕ್ಕಳನ್ನು ಕೊಂದ ಫಿಸಿಯೋಥೆರಪಿಸ್ಟ್‌!

ವೃಷಭ;
ವೃಷಭ ರಾಶಿಯಲ್ಲಿ ಮುಂದಿನ ಮೇವರೆಗೆ ಗುರುವಿನ ಸಂಚಾರವಿರುತ್ತದೆ.. ಹೀಗಾಗಿ ಇವರು ಮುಟ್ಟಿದ್ದೆಲ್ಲಾ ಚಿನ್ನವೇ.. ಉದ್ಯೋಗದಲ್ಲಿ ಬಡ್ತಿ ಬೇಕೆಂದವರಿಗೆ ಇದು ಈಡೇರುವ ಸಮಯ.. ಸಮಾಜದಲ್ಲಿ ಕೂಡಾ ಉತ್ತಮ ಗೌರವ ಸಿಗುತ್ತದೆ.. ಹೋದಲ್ಲೆಲ್ಲಾ ನಿಮಗೆ ಸನ್ಮಾನ, ಗೌರವಗಳು ಸಿಗುತ್ತವೆ.. ವಿಐಪಿಗಳ ಸಂಪರ್ಕ ಸಿಕ್ಕಿ, ವ್ಯವಹಾರ ವೃದ್ಧಿಸಿಕೊಳ್ಳಲು ಅನುಕೂಲವಾಗುತ್ತದೆ.. ಮನೆ ಕಟ್ಟುವ, ಗೃಹಪ್ರವೇಶ ಮಾಡುವ ಮುಂತಾದ ಬಹುದಿನಗಳ ಆಸೆಗಳು ಕೂಡಾ ಈಡೇರುತ್ತವೆ.. ಹಠಾತ್ತಾಗಿ ಅಪಾರವಾದ ಹಣಕಾಸಿನ ಆಗಮನವಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಕಷ್ಟು ಉತ್ತಮವಾಗುತ್ತದೆ.. ನಿಮ್ಮ ಮಕ್ಕಳ ಆರೋಗ್ಯ, ವಿದ್ಯಾಭ್ಯಾಸದಲ್ಲೂ ಸಾಕಷ್ಟು ಪ್ರಗತಿ ಕಾಣಲಿದ್ದಾರೆ..

ಮಿಥುನ;
ಇವರಿಗೆ ಶುಭ ಸುದ್ದಿಗಳು ಸಾಕಷ್ಟು ಸಿಗುತ್ತವೆ.. ತೀರ್ಥಯಾತ್ರೆಗಳನ್ನು ಕೈಗೊಳ್ಳಲು ಉತ್ತಮ ಸಮಯ.. ಪೂಜೆ, ಪ್ರಾರ್ಥನೆಗಳ ಮೂಲಕ ಬಯಸಿದ್ದನ್ನು ತಮ್ಮದಾಗಿಸಿಕೊಳ್ಳಬಹುದು.. ಬಹುಕಾಲದಿಂದ ವಿವಾಹಕ್ಕೆ ಸಂಗಾತಿ ಸಿಗದೇ ಇದ್ದರೆ ಈಗ ಅದು ಕೈಗೂಡುತ್ತದೆ.. ವಿವಾಹ ಕಾರ್ಯಗಳೆಲ್ಲಾ ಈ ಸಮಯದಲ್ಲಿ ಪೂರ್ಣವಾಗುತ್ತವೆ.. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಕ್ಕೂ ಈಗ ಯೋಗವಿದೆ.. ಸಂತಾನ ಯೋಗ, ವಿದೇಶಕ್ಕೆ ಹೋಗಲು ಬಯಸುವವರಿಗೆ ಅವಕಾಶಗಳು ಸಿಗಲಿವೆ..

ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

ಸಿಂಹ;
ಸಿಂಹ ರಾಶಿಯವರಿಗೆ ಬಹುಕಾಲದಿಂದ ಕೈಗೂಡದಿದ್ದ ಉದ್ಯೋಗ ಬಡ್ತಿ ಈಗ ಸಿಗಲಿದೆ.. ಮೇಲಧಿಕಾರಿಗಳು ನಿಮಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದಾರೆ.. ಸಂಬಳ ಕೂಡಾ ಕೂಡಾ ಹೆಚ್ಚಾಗಲಿದ್ದು, ಇದರಿಂದ ಆರ್ಥಿಕ ಸಮಸ್ಯೆಗಳು ಕೂಡಾ ದೂರವಾಗುತ್ತವೆ.. ವ್ಯವಹಾರಗಳು ನಷ್ಟದಲ್ಲಿ ನಡೆಯುತ್ತಿದ್ದರೆ ಈಗ ಅವು ಲಾಭದತ್ತ ಸಾಗುತ್ತವೆ.. ಹೊಸ ಬ್ಯುಸಿನೆಸ್‌ ಮಾಡುವವರಿಗೆ, ತೀರ್ಥಯಾತ್ರೆಗಳನ್ನು ಕೈಗೊಳ್ಳುವುದಕ್ಕೆ ಇದು ಸೂಕ್ತವಾದ ಸಮಯವಾಗಿದೆ..

ತುಲಾ;
ತುಲಾ ರಾಶಿಯವರಿಗೆ ಈ ವರ್ಷದಲ್ಲಿ ದಿಢೀರ್‌ ಅಂತ ಹಣಕಾಸಿನ ಲಾಭವಾಗಲಿದೆ.. ಮನೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಮದುವೆ ಮುಂತಾದ ಶುಭ ಸಮಾರಂಭಗಳು ನಡೆಯಲಿವೆ.. ಮನೆ ಕಟ್ಟಿ ಗೃಹಪ್ರವೇಶಗಳೂ ನಡೆಯಲಿವೆ.. ಸಂತಾನಯೋಗವಿದ್ದು, ಮಕ್ಕಳ ಬೆಳವಣಿಗೆ ಕೂಡಾ ಉತ್ತಮವಾಗಿರುತ್ತದೆ.. ಹೊಸ ವ್ಯಾಪಾರ ವ್ಯವಹಾರ ಆರಂಭಿಸಬೇಕು ಎನ್ನುವವರಿಗೆ ಇದಕ್ಕಿಂತ ಸೂಕ್ತವಾದ ಸಮಯ ಬೇರೊಂದಿಲ್ಲ.. ಈ ಒಂದು ವರ್ಷದಲ್ಲಿ ತುಲಾ ರಾಶಿಯವರು ಯಾವುದೇ ವ್ಯಾಪಾರ-ವ್ಯವಹಾರ ನಡೆಸಿದರೂ ಕೂಡಾ ಅದರಲ್ಲಿ ಅತ್ಯಂತ ಯಶಸ್ಸು ಸಿಗಲಿದೆ.. ಆರೋಗ್ಯದಲ್ಲೂ ಸಾಕಷ್ಟು ಸುಧಾರಣೆ ಕಾಣಲಿದೆ..

ಧನು;
ಧನುರ್‌ ರಾಶಿಯವರಿಗೆ ಹಲವಾರು ದಿನಗಳಿಂದ ಹಣಕಾಸಿನ ಸಮಸ್ಯೆ ಕಾಡುತ್ತಿತ್ತು.. ಈಗ ಹಣಕಾಸಿನ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತವೆ.. ಅಷ್ಟೇ ಅಲ್ಲ, ಆಸ್ತಿ ವಿವಾದಗಳಿದ್ದರೆ ಅವು ಕೂಡಾ ಸಾಲ್ವ್‌ ಆಗುತ್ತವೆ.. ನಿಮ್ಮ ಆದಾಯ ವೃದ್ಧಿಯಾಗಲಿದ್ದು, ಕೈಹಾಕಿದ ಕೆಲಸಗಳಲ್ಲೆಲ್ಲಾ ಅಭಿವೃದ್ಧಿ ಕಾಣಬಹುದು.. ವಾಹನ ಯೋಗ ಸೇರಿದಂತೆ ಬಯಸಿದ ಆಸೆಗಳೆಲ್ಲಾ ಈಡೇರುವ ಸಮಯವಿದು..

ಇದನ್ನೂ ಓದಿ; ರೀಲ್ಸ್‌ ಮಾಡುವಾಗ ದುರಂತ; 300 ಅಡಿ ಫಾಲ್ಸ್‌ಗೆ ಬಿದ್ದು ಯುವತಿ ಸಾವು!

ಮೀನ;
ಮೀನ ರಾಶಿಯವರಿಗೆ ಮೂರನೇ ಸ್ಥಾನದಲ್ಲಿ ಗುರು ಸಂಚಾರ ಮಾಡುತ್ತಿದ್ದಾನೆ.. ಹೀಗಾಗಿ ಯಾವುದೇ ಪ್ರಯತ್ನ ಕೂಡಾ ಸಫಲತೆ ಕಾಣುತ್ತದೆ.. ಉದ್ಯೋಗ ಅಥವಾ ವ್ಯಾಪಾರದಲ್ಲಿ ಸಾಕಷ್ಟು ಲಾಭ ಬರಲಿದೆ.. ಅನಿರೀಕ್ಷಿತವಾಗಿ ನಿಮಗೆ ಹಣ ಬರಲಿದೆ.. ನೀವು ಬಯಸಿದವರೊಂದಿಗೆ ವಿವಾಹವಾಗುವ ಅವಕಾಶವೂ ಈ ವರ್ಷದಲ್ಲಿ ಸಿಗಲಿದೆ.. ಎರಡೂ ಮನೆಯವರು ಒಪ್ಪಿ ವಿಜೃಂಬಣೆಯಿಂದ ಮದುವೆ ನಡೆಯುತ್ತದೆ.. ಜನರ ಸಂಪರ್ಕ ಹೆಚ್ಚಿ ನಿಮ್ಮ ವಹಿವಾಟುಗಳು ಜಾಸ್ತಿಯಾಗುತ್ತವೆ.. ಶತ್ರುಗಳು ಕೂಡಾ ನಿಮಗೆ ಮಿತ್ರರಾಗುವುದರಿಂದ ನಿಮ್ಮ ವ್ಯವಹಾರ ತುಂಬಾ ಚೆನ್ನಾಗಿ ನಡೆಯುತ್ತದೆ..

Share Post