ಹೆಂಡತಿ ತವರಿಗೆ ಹೋದಾಗ ಗಂಡ ಮಾಡೋ ಕೆಲಸಗಳೇನು ಗೊತ್ತಾ..?
ಬೆಂಗಳೂರು; ಮದುವೆಗೂ ಮುಂಚೆ ಹುಡುಗರದ್ದಾಗಲೀ, ಹುಡುಗಿಯರದ್ದಾಗಲೀ ಲೈಫ್ ಸ್ಟೈಲ್ ಬೇರೆಯದೇ ರೀತಿ ಇರುತ್ತೆ.. ಅದ್ರಲ್ಲೂ ಹುಡುಗರು ಸ್ನೇಹಿತರ ಜೊತೆ ಸುತ್ತೋದು, ಪಾರ್ಟಿ ಮಾಡೋದು, ಫೋನ್‌ನಲ್ಲಿ ಗಂಟೆಗಟ್ಟಲೆ ಮಾತಾಡೋದು ಎಲ್ಲಾ ಇರುತ್ತೆ.. ಆದ್ರೆ ಮದುವೆಯಾದ ಮೇಲೆ ಇವೆಲ್ಲದಕ್ಕೂ ಬ್ರೇಕ್ ಬೀಳುತ್ತೆ.. ಹೆಚ್ಚಿನ ಗೃಹಸ್ಥರು ಕೆಲಸ ಆಯ್ತು, ತನ್ಮ ಮನೆಯಾಯ್ತು ಅಂತ ಇರುತ್ತಾರೆ.. ಆದ್ರೆ ಹೆಂಡತಿ ಹೆರಿಗೆಗೋ ಅಥವಾ ಇನ್ನಿತರೇ ಕಾರಣಕ್ಕೋ ತವರು ಮನೆಗೆ ಹೋದರೆ ಗಂಡಸರಿಗೆ ಹಬ್ಬ.. ಹಾಗಾದರೆ ಹೆಂಡತಿ ತವರಿಗೆ ಹೋದಾಗ ಗಂಡಸರು ಏನು ಮಾಡುತ್ತಾರೆ.. ಅವರ ಲೈಫ್ ಸ್ಟೈಲ್ ತಾತ್ಕಾಲಿಕವಾಗಿ ಹೇಗೆ ಬದಲಾಗುತ್ತದೆ..? ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ.. ಆ ಕುತೂಹಲ ತಣಿಸುವುದಕ್ಕಾಗಿಯೇ ಈ ಸ್ಟೋರಿ.. ಇತ್ತೀಚೆಗೆ ಈ ಬಗ್ಗೆ ಸಮೀಕ್ಷೆಯೊಂದು ನಡೆದಿದ್ದು, ಅದರ ವಿವರ ಇಲ್ಲಿದೆ..
ಇದನ್ನೂ ಓದಿ; ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಬೆಂಕಿ ಇಟ್ಟ ದುಷ್ಕರ್ಮಿಗಳು!
ಮದುವೆಯಾದ ಮೇಲೆ ಅನಗತ್ಯವಾಗಿ ಫೋನ್‌ನಲ್ಲಿ ಮಾತನಾಡುವುದು ಕಡಿಮೆಯಾಗುತ್ತದೆ.. ಅದ್ರಲ್ಲೂ ಸ್ನೇಹಿತರ ಜೊತೆ ಮಾತನಾಡುವುದಂತೂ ಇಲ್ಲವೇ ಇಲ್ಲ ಎಂಬ ಮಟ್ಟಿಗೆ ಇರುತ್ತದೆ.. ಆದ್ರೆ, ಹೆಂಡತಿ ಮನೆಯಲ್ಲಿ ಇಲ್ಲದಿದ್ದಾಗ ಗಂಡಸರಿಗೆ ಹಳೆಯ ಸ್ನೇಹಿತರು ನೆನಪಿಗೆ ಬರುತ್ತಾರೆ.. ಹೆಂಡತಿಗೆ ತವರಿಗೆ ಹೋದಾಗ ಮನೆಯಲ್ಲಿ ಯಾರೂ ಇಲ್ಲದೆ ಬೇಜಾರಾಗುತ್ತದಾದ್ದರಿಂದ ಹಳೆಯ ಸ್ನೇಹಿತರು ಜ್ಞಾಪಕಕ್ಕೆ ಬಂದು ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಾ ಕೂರುತ್ತಾರೆ.. ಸಂಸಾರದ ಜೀವನಶೈಲಿಯ ವಿಷಯಗಳನ್ನು ಚರ್ಚಿಸುತ್ತಾರೆ. ಜೊತೆಗೆ ಹೆಚ್ಚಿನ ಸಮಯ ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಲ್ಲಿ ಕಾಲ ಕಳೆಯುತ್ತಾರೆ.
ಇದನ್ನೂ ಓದಿ; ಮಹಿಳೆಯ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ, ಕ್ಷಣಾರ್ಧದಲ್ಲಿ ಸಾವು!; ಏನಿದು ವಿಚಿತ್ರ
ಇನ್ನು ಮನೆಯಲ್ಲಿ ಯಾರೂ ಇರುವುದಿಲ್ಲವಾದ್ದರಿಂದ ಸಮಯ ಕಳೆಯೋದು ಕಷ್ಟವಾಗುತ್ತದೆ.. ಹೀಗಾಗಿ ಗಂಡಸರು ವೆಬ್ ಸೀರೀಸ್, ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಾರೆ.. ಮೆಚ್ಚಿನ ಸಿನಿಮಾಗಳು, ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆಯುತ್ತಾರೆ.. ಇನ್ನೂ ಕೆಲವರು ಡ್ರಿಂಕ್ಸ್ ಮಾಡುವವರಿದ್ದರೆ ಅವರಿಗೆ ಹಬ್ಬ.. ಮನೆಗೆ ಎಣ್ಣೆ ತಂದು ದಿನವೂ ಪಾರ್ಟಿಗಳನ್ನು ಮಾಡುತ್ತಾರೆ..
ಇದನ್ನೂ ಓದಿ; ದಕ್ಷಿಣ ಕನ್ನಡದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಕತ್ರಿನಾ ಕೈಫ್ ಭೇಟಿ
ಹೆಂಡತಿ ಮನೆಯಲ್ಲಿದ್ದಾಗ, ಅವಳು ಮಾಡಿದ ಆಹಾರವನ್ನು ಮಾತ್ರ ತಿನ್ನಬೇಕು. ಆದರೆ ಹೆಂಡತಿ ಹೆರಿಗೆಗೆ ಹೋದಾಗ, ಅನೇಕ ಜನರು ಮನೆಯೂಟ ಮಾಡುವುದನ್ನು ನಿಲ್ಲಿಸುತ್ತಾರೆ. ಹೊರಗಿನ ಊಟಗಳಿಗೆ ಮೊರೆಹೋಗುತ್ತಾರೆ.. ಅದ್ರಲ್ಲೂ ನಾನ್‌ವೆಜ್ ಪ್ರಿಯರಾಗಿದ್ದರೆ, ದಿನವೂ ನಾನ್‌ವೆಜ್‌ಗೆ ಅಡಿಕ್ಟ್ ಆಗುತ್ತಾರೆ.