CrimeLifestyleNational

ವಿಚ್ಛೇದನಕ್ಕೆ ಆರು ತಿಂಗಳು ಅವಶ್ಯಕತೆ ಇಲ್ಲ; ಸುಪ್ರೀಂ ಕೋರ್ಟ್‌

ದೆಹಲಿ; ದಾಂಪತ್ಯದಲ್ಲಿನ ಕಲಹ ಸರಿಪಡಿಸಲಾಗದ ಸಂದರ್ಭಗಳಿದ್ದರೆ, ವಿವಾಹ ಕಾನೂನಿನಡಿಯಲ್ಲಿ ಆರು ತಿಂಗಳ ನಿಬಂಧನೆಯನ್ನು ಬದಿಗಿಟ್ಟು ವಿಚ್ಛೇದನ ನೀಡುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಹೇಳಿದೆ.

ಸಂವಿಧಾನದ 142ನೇ ವಿಧಿ ಈ ಅಧಿಕಾರವನ್ನು ನೀಡಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಹೇಳಿದೆ. ”ಯಾವುದೇ ಸಂದರ್ಭದಲ್ಲೂ ಪತಿ-ಪತ್ನಿಯಾಗಿ ಒಂದಾಗುವ ಸಾಧ್ಯತೆ ಇಲ್ಲ ಎಂಬುದು ಸಾಬೀತಾದಾಗ ಈ ಅವಕಾಶ ಇದೆ. ದಾಂಪತ್ಯದಲ್ಲಿ ಸರಿಪಡಿಸಲಾಗದ ಪರಿಸ್ಥಿತಿಗಳಿದ್ದರೆ, ಮದುವೆಯನ್ನು ರದ್ದುಪಡಿಸುವ ಸಾಧ್ಯತೆಯಿದೆ. ಆ ಸಮಯದಲ್ಲಿ ಆರು ತಿಂಗಳ ಅವಧಿಯಿಂದಲೂ ವಿನಾಯಿತಿ ನೀಡುವ ಅಧಿಕಾರವಿದೆ’’ ಎಂದು ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಸಂಪೂರ್ಣ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅಂತಹ ಪ್ರಕರಣಗಳಲ್ಲಿ ವಿಚ್ಛೇದನ ನೀಡಲು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಚಲಾಯಿಸಬಹುದು ಎಂದು ಪೀಠ ಹೇಳಿದೆ.

Share Post