HealthLifestyle

ತಲೆ ದಿಂಬಿಲ್ಲದೆ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಂತೆ!

ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆ ನಿದ್ದೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ.. ದೇಹಕ್ಕೆ ನಿದ್ದೆಯ ಮೂಲಕ ಸೂಕ್ತ ವಿಶ್ರಾಂತಿ ಸಿಕ್ಕಿದರೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.. ನಿದ್ರಾಹೀನತೆ, ಆಲಸ್ಯ ಹೆಚ್ಚಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಆದರೆ ಇಂತಹ ಸಮಸ್ಯೆ ದೀರ್ಘಾವಧಿಯಲ್ಲಿ ದೊಡ್ಡ ಅಪಾಯವಾಗಿ ಪರಿಣಮಿಸಬಹುದು.. ತಜ್ಞರ ಪ್ರಕಾರ, ಕೆಲವು ಸಣ್ಣ ಅಭ್ಯಾಸಗಳು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು.
ಇದನ್ನೂ ಓದಿ; ಮಹಿಳೆಯರಿಗೆ ಮುಖದ ಕೂದಲು ಏಕೆ ಬೆಳೆಯುತ್ತದೆ..?

ರಾತ್ರಿಯಲ್ಲಿ ತಲೆದಿಂಬು ಇಲ್ಲದೆ ಮಲಗುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.. ಆದ್ರೆ, ಚಿಕ್ಕಂದಿನಿಂದ ತಲೆದಿಂಬು ಇಟ್ಟುಕೊಂಡೇ ನಿದ್ದೆ ಮಾಡುತ್ತಾ ಬಂದಿರುವುದರಿಂದ ಅದು ಅಭ್ಯಾಸವಾಗಿರುತ್ತದೆ.. ಹೀಗಾಗಿ, ಈ ಅಭ್ಯಾಸ ಮರೆಯವುದಕ್ಕೆ ಕಷ್ಟವಾಗುತ್ತದೆ.. ಹೀಗಾಗಿ ತೆಳ್ಳಗಿನ ದಿಂಬನ್ನು ಕೆಲಕಾಲ ಬಳಸಿ ನಂತರ ದಿಂಬು ಇಲ್ಲದೆ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಬಹುದು.. ಇದರಿಂದಾಗಿ ನಮಗೆ ಹಲವಾರು ರೀತಿಯಲ್ಲಿ ಆರೋಗ್ಯದ ಲಾಭಗಳನ್ನು ನೀಡುತ್ತದೆ..

ಇದನ್ನೂ ಓದಿ; ಶಬ್ದ ಮಾಲಿನ್ಯ ಸೈಲೆಂಟಾಗಿ ನಮ್ಮ ಪ್ರಾಣ ತೆಗೆಯುತ್ತಂತೆ!

ದಿಂಬಿನೊಂದಿಗೆ ಮಲಗಬೇಕಾದವರು ಕೆಲವು ರೀತಿಯ ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಮುಖದ ಮೇಲೆ ಮೊಡವೆಗಳು ಉಂಟಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ತಲೆದಿಂಬು ಇಲ್ಲದೆ ಮಲಗುವುದು ಮೊಡವೆಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ದಿಂಬಿನ ಮೇಲೆ ಮಲಗುವಾಗ, ದಿಂಬಿಗೆ ಮುಖ ಅಂಟಿಕೊಂಡಿರುತ್ತದೆ. ಇದು ನಿಮ್ಮ ಮುಖದ ಮೇಲೆ ಬ್ಯಾಕ್ಟೀರಿಯಾ ಮತ್ತು ಕೊಳೆ ಹರಡುತ್ತದೆ. ಈ ಸಂದರ್ಭದಲ್ಲಿ, ಮೊಡವೆಗಳು ಮುಖದ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.. ಮೊಡವೆಗಳಲ್ಲದೆ, ಇದು ಮುಖದ ಮೇಲೆ ಸುಕ್ಕುಗಳನ್ನು ಉಂಟುಮಾಡುತ್ತದೆ. ತ್ವಚೆಯನ್ನು ಕಾಪಾಡಿಕೊಳ್ಳಲು ಬಯಸುವವರು ತಲೆದಿಂಬು ಇಲ್ಲದೆ ಮಲಗಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ; ಮೊಸರಿನೊಂದಿಗೆ ಬೆಲ್ಲ ಸೇರಿಸಿ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?

ದಿಂಬು ಇಲ್ಲದೆ ಮಲಗುವುದರಿಂದ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು. ದಿಂಬು ಇಲ್ಲದೆ ಮಲಗುವುದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ದಿಂಬು ಇಲ್ಲದೆ ಮಲಗುವುದು ನಿದ್ರಾಹೀನತೆಯಂತಹ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.

ನಿಮಗೂ ತಲೆದಿಂಬು ಹಿಡಿದು ಮಲಗುವ ಅಭ್ಯಾಸವಿದ್ದರೆ ತಲೆಯನ್ನು ತುಂಬಾ ಎತ್ತರಕ್ಕೆ ಎತ್ತುವ ಬದಲು ಚಿಕ್ಕ ದಿಂಬನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ. ತುಂಬಾ ಎತ್ತರದ ದಿಂಬನ್ನು ಬಳಸುವುದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯಲ್ಲಿ ನೋವು ಉಂಟಾಗುತ್ತದೆ.. ನೀವು ದಿಂಬು ಇಲ್ಲದೆ ಮಲಗಿದಾಗ ನಿಮ್ಮ ಬೆನ್ನುಮೂಳೆಯು ನೇರವಾಗಿರುತ್ತದೆ.. ದಿಂಬು ತಲೆಯ ಕೆಳಗೆ ಇದ್ದರೆ, ಅದು ಬೆನ್ನುಮೂಳೆಯ ಮೇಲೆ ಪರಿಣಾಮ ಬೀರುತ್ತದೆ..

ಇದನ್ನೂ ಓದಿ; ನದಿಗೆ ಉರುಳಿಬಿತ್ತು ಎಸ್‌ಯುವಿ ಕಾರು; ನಾಲ್ವರ ದುರ್ಮರಣ, ಇಬ್ಬರು ನಾಪತ್ತೆ!

Share Post