HealthLifestyle

ಶಬ್ದ ಮಾಲಿನ್ಯ ಸೈಲೆಂಟಾಗಿ ನಮ್ಮ ಪ್ರಾಣ ತೆಗೆಯುತ್ತಂತೆ!

ಪರಿಸರ ಮಾಲಿನ್ಯದಿಂದಾಗಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.. ವಾಯು ಮಾಲಿನ್ಯ, ಜಲ ಮಾಲಿನ್ಯದಿಂದಾಗಿ ಹಲವಾರು ಕಾಯಿಲೆಗಳು ನಮಗೆ ವಕ್ಕರಿಸುತ್ತಿವೆ.. ಇನ್ನು ಶಬ್ದ ಮಾಲಿನ್ಯ ಕೂಡಾ ಮನುಷ್ಯನ ಸೈಲೆಂಟ್‌ ಕಿಲ್ಲರ್‌ ಅಂತ ತಜ್ಞ ವೈದ್ಯರು ಹೇಳುತ್ತಿದ್ದಾರೆ..

ಇದನ್ನೂ ಓದಿ; ಮೊಸರಿನೊಂದಿಗೆ ಬೆಲ್ಲ ಸೇರಿಸಿ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?

ಹೌದು,  ಶಬ್ಧ ಮಾಲಿನ್ಯ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದೆ.. ನಾವು ಬೆಳಗ್ಗೆ ಎದ್ದಾನಿಂದ ರಾತ್ರಿ ಮಲಗುವವರೆಗೂ ಜನರ ಕಿವಿಗೆ ಶಬ್ದ ಕೇಳಿಸುತ್ತಲೇ ಇರುತ್ತದೆ.. ಇದರಿಂದಾಗಿ ಮನುಷ್ಯ ಕಿರಿಕಿರಿ ಅನುಭವಿಸುತ್ತಲೇ ಜೀವನ ನಡೆಸುತ್ತಿರುತ್ತಾನೆ.. ನಗರ ಪ್ರದೇಶಗಳಲ್ಲಿ ವಾಹನಗಳ ಕರ್ಕಶ ಶಬ್ದ ಕೇಳಿ ಜನ ರೋಸಿಹೋಗಿದ್ದಾರೆ.. ಹೀಗೆ ಶಬ್ಧದ ಮಟ್ಟ ಹೆಚ್ಚಾದರೆ ನಮ್ಮ ಶ್ರವಣ ಶಕ್ತಿ ಕಡಿಮೆಯಾಗುತ್ತದೆ.. ಮಾನಸಿಕ ಒತ್ತಡ ಉಂಟಾಗಿ ಮಾನಸಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ.. ಅಷ್ಟೇ ಅಲ್ಲ, ಈ ಶಬ್ದ ಮಾಲಿನ್ಯದಿಂದ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗುತ್ತದೆ..

ಇದನ್ನೂ ಓದಿ; ನದಿಗೆ ಉರುಳಿಬಿತ್ತು ಎಸ್‌ಯುವಿ ಕಾರು; ನಾಲ್ವರ ದುರ್ಮರಣ, ಇಬ್ಬರು ನಾಪತ್ತೆ!

೧. ವಾಹನಗಳ ಕರ್ಕಶ ಶಬ್ದದಿಂದಾಗಿ  ಹೃದಯ ಕಾಯಿಲೆ ಬರುತ್ತದೆ ಎಂಬುದಕ್ಕೆ ಹಲವಾರು ಪುರಾವೆಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ.. ಈ ರೀತಿಯ ಶಬ್ದ ಮಾಲಿನ್ಯವು ಹೃದಯ ರೋಗಿಗಳಿಗೆ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ..

೨.  ರಸ್ತೆ ಸಂಚಾರದ ವೇಳೆ ಉಂಟಾಗುವ ಶಬ್ದದಲ್ಲಿ ಪ್ರತಿ 10 ಡೆಸಿಬಲ್ ಹೆಚ್ಚಳಕ್ಕೆ, ಮಧುಮೇಹ ಮತ್ತು ಹೃದಯಾಘಾತ ಸೇರಿದಂತೆ ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಶೇಕಡಾ 3.2 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.

೩. ವಿಶೇಷವಾಗಿ ರಾತ್ರಿ ನಿದ್ರೆಗೆ ಭಂಗ ತರುವ ಸಂಚಾರ ದಟ್ಟಣೆಯಿಂದ ರಕ್ತನಾಳಗಳಲ್ಲಿ ಒತ್ತಡ ಉಂಟು ಮಾಡುವ ಹಾರ್ಮೋನ್ ಗಳ ಪ್ರಮಾಣ ಹೆಚ್ಚಿ ಅಧಿಕ ರಕ್ತದೊತ್ತಡ ಹಾಗೂ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು.

೪. ವಾಹನದ ಶಬ್ದವು ಹೃದಯ ಕಾಯಿಲೆಗೆ ಅಪಾಯಕಾರಿ ಅಂಶವಾಗಿದೆ ಎಂಬುದಕ್ಕೆ ತಜ್ಞರು ಹಲವು ಬಲವಾದ ಪುರಾವೆಗಳನ್ನು ಒದಗಿಸಿದ್ದಾರೆ..

ಇದನ್ನೂ ಓದಿ; ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಇನ್ನಿಲ್ಲ

೫. ರಸ್ತೆ, ರೈಲು ಮತ್ತು ವಾಯು ಸಂಚಾರದಿಂದ ಶಬ್ದವನ್ನು ಕಡಿಮೆ ಮಾಡಲು ಸ್ಥಳೀಯ ಅಧಿಕಾರಿಗಳು ಅಳವಡಿಸಿಕೊಳ್ಳಲು ಕೆಲವು ತಂತ್ರಗಳನ್ನು ಸಂಶೋಧಕರು ಸೂಚಿಸಿದ್ದಾರೆ.

೬. ಜನನಿಬಿಡ ಪ್ರದೇಶಗಳಲ್ಲಿ ಜನನಿಬಿಡ ರಸ್ತೆಗಳಲ್ಲಿ ಶಬ್ಧ ತಡೆಗೋಡೆಗಳನ್ನು ಅಳವಡಿಸುವ ಮೂಲಕ ಶಬ್ದ ತಡೆಗಳನ್ನು 10 ಡೆಸಿಬಲ್‌ಗಳಷ್ಟು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ

೭. ಶಬ್ದವನ್ನು ಕಡಿಮೆ ಮಾಡುವ ಡಾಂಬರು ಬಳಸಿ ರಸ್ತೆಗಳನ್ನು ನಿರ್ಮಿಸುವುದರಿಂದ ಶಬ್ದದ ಮಟ್ಟವನ್ನು ಮೂರರಿಂದ ಆರು ಡೆಸಿಬಲ್‌ಗಳಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.

೮. ಚಾಲನೆಯ ವೇಗವನ್ನು ಮಿತಿಗೊಳಿಸಲು ಮತ್ತು ಕಡಿಮೆ ಶಬ್ದದ ಟೈರ್‌ಗಳ ಬಳಕೆಯನ್ನು ಉತ್ತೇಜಿಸಲು ತಜ್ಞರು ಸಲಹೆ ನೀಡಿದ್ದಾರೆ..

Share Post