ಮಹಿಳೆಯರಿಗೆ ಮುಖದ ಕೂದಲು ಏಕೆ ಬೆಳೆಯುತ್ತದೆ..?
ಇತ್ತೀಚೆಗೆ ಉತ್ತರ ಪ್ರದೇಶದ 10 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಪ್ರಾಚಿ ನಿಗಮ್ ಎಂಬ ವಿದ್ಯಾರ್ಥಿನಿ ಟಾಪರ್ ಆಗಿ ಹೊರಹೊಮ್ಮಿದ್ದರು.. ಆದ್ರೆ ಇದೇ ಸಂದರ್ಭದಲ್ಲಿ ಈ ವಿದ್ಯಾರ್ಥಿನಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಳು.. ಇದಕ್ಕೆ ಕಾರಣ ಆಕೆಯ ಮುಖದ ಮೇಲೆ ಬೆಳೆದಿರುವ ಕೂದಲು.. ಗಂಡಸರಂತೆ ಮೀಸೆ, ಗಡ್ಡ ಬೆಳೆದಿರುವುದರಿಂದ ಪ್ರಾಚಿ ನಿಗಮ್ ಟ್ರೋಲ್‌ಗೆ ಒಳಗಾಗಿದ್ದಳು..
ಹಾಗಾದರೆ ಮಹಿಳೆಯರ ಮುಖದ ಮೇಲೆ ಏಕೆ ಕೂದಲು ಬೆಳೆಯುತ್ತದೆ..? ಅದಕ್ಕೆ ಕಾರಣ ಏನು..? ಇದು ಯಾವುದಾದರೂ ರೋಗದ ಲಕ್ಷಣವೇ..? ಈ ಬಗ್ಗೆ ತಿಳಿಯೋಣ ಬನ್ನಿ..
ಇದನ್ನೂ ಓದಿ; ಶಬ್ದ ಮಾಲಿನ್ಯ ಸೈಲೆಂಟಾಗಿ ನಮ್ಮ ಪ್ರಾಣ ತೆಗೆಯುತ್ತಂತೆ!
ಮಹಿಳೆಯರಿಗೆ ಮುಖದ ಕೂದಲು ಏಕೆ ಬೆಳೆಯುತ್ತದೆ..?
ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರ ಮುಖದ ಮೇಲೆ ಕೂದಲು ಅನುವಂಶಿಕ ಕಾರಣ ಎಂದು ಹೇಳಲಾಗುತ್ತದೆ.. ಕುಟುಂಬದ ಸದಸ್ಯರ ಮುಖದ ಮೇಲೆ ಹೆಚ್ಚು ಕೂದಲು ಇದ್ದರೆ ಅದು ಕುಟುಂಬದ ಇತರ ಮಹಿಳೆಯರ ಮೇಲೂ ಪರಿಣಾಮ ಬೀರುತ್ತದೆ.. ಇದರ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳು ಕೂಡಾ ಮಹಿಳೆಯರ ಮುಖದ ಮೇಲೆ ಕೂದಲು ಬೆಳೆಯಲು ಕಾರಣವಾಗುತ್ತದೆ..
ಇದನ್ನೂ ಓದಿ; ಮೊಸರಿನೊಂದಿಗೆ ಬೆಲ್ಲ ಸೇರಿಸಿ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್;
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅನ್ನು ಸಾಮಾನ್ಯವಾಗಿ ಪಿಸಿಓಎಸ್ ಎಂದು ಕರೆಯಲಾಗುತ್ತದೆ.. ಇದರಲ್ಲಿ, ಅಂಡಾಶಯದಲ್ಲಿ ಊತ ಸಂಭವಿಸುತ್ತದೆ ಮತ್ತು ಹಾರ್ಮೋನುಗಳು ಅಡ್ಡಿಪಡಿಸುತ್ತವೆ.. ಅಂತಹ ಸಂದರ್ಭಗಳಲ್ಲಿ, ಮಹಿಳೆಯರು ತಮ್ಮ ಮುಖದ ಮೇಲೆ ಕೂದಲು ಬರಲು ಪ್ರಾರಂಭವಾಗುತ್ತದೆ..
ಇದನ್ನೂ ಓದಿ; ನದಿಗೆ ಉರುಳಿಬಿತ್ತು ಎಸ್‌ಯುವಿ ಕಾರು; ನಾಲ್ವರ ದುರ್ಮರಣ, ಇಬ್ಬರು ನಾಪತ್ತೆ!
ಪುರುಷರಲ್ಲಿ ಬೆಳವಣಿಗೆಯ ಹಾರ್ಮೋನ್;
ಹೆಚ್ಚಾಗಿ, ಪುರುಷ ಹಾರ್ಮೋನ್ ‘ಟೆಸ್ಟೋಸ್ಟೆರಾನ್’ ಸ್ತ್ರೀ ದೇಹದಲ್ಲಿ ಹೆಚ್ಚಾಗುತ್ತದೆ.. ಈ ಕಾರಣದಿಂದಾಗಿ, ಮುಖ ಮತ್ತು ದೇಹದ ಇತರ ಭಾಗಗಳಲ್ಲಿ ಹೆಚ್ಚು ಕೂದಲು ಬೆಳೆಯುತ್ತದೆ.. ಈ ಲಕ್ಷಣಗಳು ತೀವ್ರತೆ ಹೆಚ್ಚಾದಾಗ ಮಹಿಳೆಯರ ಧ್ವನಿಯಲ್ಲೂ ಬದಲಾವಣೆ ಕಂಡುಬರುತ್ತದೆ.. ಕೆಲವು ಮಹಿಳೆಯರು ಹಾರ್ಮೋನ್ ಥೆರಪಿ ತೆಗೆದುಕೊಳ್ಳುವಾಗಲೂ ಮುಖದ ಕೂದಲು ಬೆಳೆಯಲು ಪ್ರಾರಂಭಿಸುತ್ತಾರೆ.. ಸ್ತ್ರೀ ದೇಹದಲ್ಲಿ ಅಗತ್ಯವಾದ ಕಿಣ್ವಗಳ ಕೊರತೆಯಿಂದಾಗಿ, ಪುರುಷ ಹಾರ್ಮೋನುಗಳು ಹೆಚ್ಚಾಗುತ್ತವೆ.. ಇದರಿಂದಾಗಿ ಮಹಿಳೆಯರಲ್ಲಿ ಕೂದಲು ಬೆಳವಣಿಗೆಯ ಸಮಸ್ಯೆ ಉಂಟಾಗುತ್ತದೆ..