HealthLifestyle

ಮೊಸರಿನೊಂದಿಗೆ ಬೆಲ್ಲ ಸೇರಿಸಿ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?

ತುಂಬಾ ಜನ ಮೊಸರಿಗೆ ಸಕ್ಕರೆ ಕಲಸಿಕೊಂಡು ತಿನ್ನುತ್ತಾರೆ.. ಹೋಟೆಲ್‌ನಲ್ಲಿ ಊಟಕ್ಕೆ ಹೋದರೆ ಮೊಸರು, ಸಕ್ಕರೆ ಕೊಡುತ್ತಾರೆ.. ಆದ್ರೆ ಸಕ್ಕರೆ ಬದಲಾಗಿ ಬೆಲ್ಲ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.. ಹೌದು, ಮೊಸರು ಮತ್ತು ಬೆಲ್ಲ ಮಿಕ್ಸ್‌ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.. ಮೊಸರಿನಲ್ಲಿ ಹಲವಾರು ಆರೋಗ್ಯಕ್ಕೆ ಒಳ್ಳೆಯದಾಗುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತೆ.. ಇವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.. ಇದಲ್ಲದೆ, ಇದು ಕ್ಯಾಲ್ಸಿಯಂ ಹೊಂದಿದ್ದು, ಅನೇಕ ಕಾಲೋಚಿತ ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತದೆ.. ಮೊಸರಿಗೆ ಬೆಲ್ಲವನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು..

ಇದನ್ನೂ ಓದಿ; ನದಿಗೆ ಉರುಳಿಬಿತ್ತು ಎಸ್‌ಯುವಿ ಕಾರು; ನಾಲ್ವರ ದುರ್ಮರಣ, ಇಬ್ಬರು ನಾಪತ್ತೆ!

೧. ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ.. ಮೊಸರಿನೊಂದಿಗೆ ಬೆಲ್ಲವನ್ನು ಸೇವಿಸಿದರೆ ದೇಹದಲ್ಲಿ ರಕ್ತಹೀನತೆ ಉಂಟಾಗುವುದಿಲ್ಲ, ಬದಲಾಗಿ ರಕ್ತ ವೃದ್ಧಿಯಾಗುತ್ತದೆ..  ಇದು ದೇಹದ ದೌರ್ಬಲ್ಯವನ್ನು ಹೋಗಲಾಡಿಸಿ, ದೇಹಕ್ಕೆ ಶಕ್ತಿ ನೀಡುತ್ತದೆ..

೨. ಮೊಸರನ್ನು ಬೆಲ್ಲದ ಜೊತೆ ತಿಂದರೆ ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ.. ಇದರಿಂದ ಗ್ಯಾಸ್ಟ್ರಿಕ್‌ ಮತ್ತು ಅಸಿಡಿಟಿ ಸಮಸ್ಯೆ ಉಂಟಾಗುವುದಿಲ್ಲ.. ಇದು ಹೊಟ್ಟೆಯ ಉಬ್ಬರಕ್ಕೆ ಪರಿಹಾರ ನೀಡುತ್ತದೆ.. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ..

ಇದನ್ನೂ ಓದಿ; ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಇನ್ನಿಲ್ಲ

೩. ಮೊಸರಿಗೆ ಬೆಲ್ಲವನ್ನು ಸೇರಿಸಿ ಸೇವಿಸುವುದರಿಂದ ಋತುಚಕ್ರದ ನೋವು ನಿವಾರಣೆಯಾಗುತ್ತದೆ.. ಮುಟ್ಟಿನ ಸೆಳೆತದ ಸಮಯದಲ್ಲಿ ಮಹಿಳೆಯರು ಮೊಸರಿನೊಂದಿಗೆ ಬೆಲ್ಲವನ್ನು ಸೇವಿಸಬಹುದು.. ಇದು ಹೊಟ್ಟೆಯ ಸೆಳೆತವನ್ನು ನಿವಾರಿಸುತ್ತದೆ..

೪. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಅನೇಕ ಜನರು ಋತುಮಾನದ ಕಾಯಿಲೆಗಳಿಗೆ ಒಳಗಾಗುತ್ತಾರೆ.. ಅಂತಹ ಪರಿಸ್ಥಿತಿಯಲ್ಲಿ, ಮೊಸರು ಮತ್ತು ಬೆಲ್ಲದ ಸೇವನೆಯು ಈ ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ..

ಇದನ್ನೂ ಓದಿ; ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲರಿಗೂ ನ್ಯಾಯ; ಡಿ.ಕೆ.ಶಿವಕುಮಾರ್

Share Post