ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುತ್ತಿದ್ದ ಯೋಧ ಕುಸಿದುಬಿದ್ದು ಸಾವು!
ಭೋಪಾಲ್; ಮಕ್ಕಳ ಎದುರು ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಗೀತೆಗೆ ನೃತ್ಯ ಮಾಡುತ್ತಿದ್ದ ಯೋಧರೊಬ್ಬರು ಕುಸಿದುಬಿದ್ದಿದ್ದಾರೆ.. ಸಡನ್ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ.. ಮಧ್ಯಪ್ರದೇಶದ ಇಂದೋರ್‌ನ ಫುತಿ ಕೋಠಿಯಲ್ಲಿನ ಯೋಗ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದೆ..
ನಿವೃತ್ತ ಯೋಧ ಬಲ್ವಿಂದರ್ ಸಿಂಗ್ ಛಾಬ್ರಾ ಎಂಬುವವರೇ ಸಾವನ್ನಪ್ಪಿದವರು.. ಅವರು ಯೋಗಾ ಕೇಂದ್ರದಲ್ಲಿ ಮಾ ತುಜೇ ಸಲಾಮ್ ಗೀತೆಗೆ ಹೆಜ್ಜೆ ಹಾಕುತ್ತಿದ್ದರು.. ಈ ವೇಳೆ ಸಡನ್ ಕುಸಿದುಬಿದ್ದಿದ್ದಾರೆ.. ಹಾಗೇ ಉರುಳಿಕೊಂಡು ಮಲಗಿದ್ದಾರೆ.. ಇದನ್ನು ನೋಡುತ್ತಿದ್ದವರು ನೃತ್ಯದ ಒಂದು ಭಾಗ ಇರಬಹುದು ಎಂದು ಹಾಗೇ ಚಪ್ಪಾಳೆ ಹೊಡೆಯುತ್ತಿದ್ದರು.. ಆದ್ರೆ ಸ್ವಲ್ಪ ಸಮಯ ಕಳೆದರೂ ಮೇಲಕ್ಕೆ ಏಳದೇ ಇದ್ದುದನ್ನು ಗಮನಿಸಿ ಪರೀಕ್ಷೆ ಮಾಡಿದ್ದಾರೆ..
ಆಗ ಮಾಜಿ ಯೋಧ ಅಸ್ವಸ್ಥರಾಗಿ ಬಿದ್ದಿರುವುದು ಗೊತ್ತಾಗಿದೆ.. ಆದ್ರೆ ಉಸಿರಾಡುತ್ತಿದ್ದುದನ್ನು ಗಮನಿಸಿದ ಯೋಗಾ ಸೆಂಟರ್ ನವರು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.. ನಿವೃತ್ತ ಯೋಧ ಬಲ್ವಿಂದರ್ ಸಿಂಗ್ ಅವರಿಗೆ 2008ರಲ್ಲಿ ಬೈಪಾಸ್ ಸರ್ಜರಿಯನ್ನು ಮಾಡಲಾಗಿತ್ತು ಎಂದು ತಿಳಿದುಬಂದಿದೆ.