InternationalLifestyle

ಯುವತಿಯರು ಒಳ ಉಡುಪು ಈ ಬೇಲಿ ಮೇಲೆ ಹಾಕಿದ್ರೆ ಒಳ್ಳೆ ಗಂಡ ಸಿಗ್ತಾನಂತೆ..!

ನ್ಯೂಜಿಲೆಂಡ್; ಮೂಢನಂಬಿಕೆಗಳು ಭಾರತದಲೇ ಹೆಚ್ಚು ಅಂದುಕೊಂಡಿದ್ದೇವೆ.. ಆದ್ರೆ ಪ್ರಪಂಚದ ಎಲ್ಲಾ ಭಾಗಗಳಲ್ಲೂ ವಿಚಿತ್ರ ವಿಚಿತ್ರ ಮೂಢನಂಬಿಕೆಗಳಿವೆ.. ಪ್ರಪಂಚ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಕೂಡಾ ಇಂತಹ ನಂಬಿಕೆಗಳು ಮಾತ್ರ ಮರೆಯಾಗುತ್ತಿಲ್ಲ.. ಇನ್ನೂ ಹೆಚ್ಚಾಗುತ್ತಲೇ ಇವೆ.. ಅಂದಹಾಗೆ ನಾವು ಹೇಳ್ತಾ ಇರೋದು ನ್ಯೂಜಿಲೆಂಡ್‌ನಲ್ಲಿರುವ ಇಂದು ವಿಚಿತ್ರ ಮೂಢನಂಬಿಕೆ ಬಗ್ಗೆ.. ಇಲ್ಲಿನ ಒಂದು ಸ್ಥಳದಲ್ಲಿರುವ ತಂತಿ ಬೇಲಿ ಮೇಲೆ ಯುವತಿಯರು ತಾವು ಧರಿಸಿರುವ ಒಳಉಡುಪು ತೆಗೆದು ನೇತುಹಾಕಿ ಹೋದರೆ ಒಳ್ಳೆಯ  ಗಂಡ ಸಿಗ್ತಾನಂತೆ.. ಇಂತಹದೊಂದು ನಂಬಿಕೆ ಇಲ್ಲಿ ಹೆಚ್ಚು ಗಾಢವಾಗಿದ್ದು, ಯುವತಿಯರು ಈಗಲೂ ಇದನ್ನು ಪಾಲಿಸುತ್ತಿದ್ದಾರೆ..

ಇದನ್ನೂ ಓದಿ; ಈ ದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು..!

ಬೇಲಿ ಮೇಲೆ ಬ್ರಾಗಳನ್ನು ನೇತುಹಾಕುವ ಯುವತಿಯರು..!

ನ್ಯೂಜಿಲೆಂಡ್‌ನ ಸೆಂಟ್ರಲ್‌ ಒಡಾಗೋದ ಕಾರ್ಡೋನಾದಲ್ಲಿ ಒಂದು ಸ್ಥಳ ಇದೆ.. ಈ ಸ್ಥಳದಲ್ಲಿ ಇಂದು ಒಂದು ವಿಚಿತ್ರ ಆಚರಣೆ ನಡೆಯುತ್ತಿದೆ.. ಇಲ್ಲಿರುವ ಕಬ್ಬಿಣದ ತಂತಿ ಬೇಲಿ ಮೇಲೆ ಯುವತಿಯರು ತಾವು ಧರಿಸಿರುವ ಬ್ರಾಗಳನ್ನು ತೆಗೆದು ನೇತು ಹಾಕ್ತಾರೆ.. ಹಾಗೆ ಮಾಡುವುದರಿಂದ ಯುವತಿಯರಿಗೆ ಒಳ್ಳೆಯ ಗಂಡ ಸಿಗುತ್ತಾನಂತೆ.. ವಿಚಿತ್ರ ಆದರೂ ಸತ್ಯ.. ಬಟಾಬಯಲಲ್ಲೇ ಯುವತಿಯರು ಹೀಗೆ ಬ್ರಾ ತೆಗೆದು ಅಲ್ಲಿ ನೇತುಹಾಕ್ತಾರೆ.. ಇದರ ಫೋಟೋಗಳನ್ನು ತೆಗೆಯಲು ಯುವಕರು ಕೂಡಾ ಅಲ್ಲಿ ನೆರೆದಿರುತ್ತಾರೆ..

ಇದನ್ನೂ ಓದಿ; ಸಿಗ್ನಲ್‌ ಬಳಿ ತೃತೀಯಲಿಂಗಿಗಳು ಭಿಕ್ಷೆ ಬೇಡುವಂತಿಲ್ಲ; ಹೊಸ ರೂಲ್‌

1999ರಿಂದ ಈ ಮೂಢನಂಬಿಕೆ ಶುರು;

ಈ ಮೂಢನಂಬಿಕೆ ಶತಮಾನಗಳ ಕಾಲದ್ದಂತೂ ಅಲ್ಲ.. ಇತ್ತೀಚಿನ ದಶಕಗಳಲ್ಲಿ ಶುರುವಾದ ಪದ್ಧತಿ.. 1999ರಿಂದ ಇಲ್ಲಿ ಈ ಪದ್ಧತಿ ನಡೆದುಕೊಂಡುಬಂದಿದೆ.. ಇದೊಂದು ಪ್ರವಾಸಿ ತಾಣ ಕೂಡಾ ಹೌದು.. ಇಲ್ಲಿ ಯುವತಿಯರೇ ಹೆಚ್ಚಾಗಿ ಬರುತ್ತಾರೆ.. ಇಲ್ಲಿಗೆ ಬರುವ ಯುವತಿಯರು ಒಳ್ಳೆಯ ಗಂಡ ಸಿಗಲೆಂದು ಬಯಸಿಯೇ ಇಲ್ಲಿಗೆ ಬರುತ್ತಾರೆ.. ದೂರದೂರುಗಳಿಂದಲೂ ಯುವತಿಯರು ಇಲ್ಲಿಗೆ ಬರುತ್ತಾರೆ.. ಈ ಯುವತಿಯರು ಚಿತ್ರಗಳನ್ನು ತೆಗೆದು ಯುವಕರು ಕೂಡಾ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ..

ಇದನ್ನೂ ಓದಿ; ಡಿಕೆಶಿ ಮಿಡ್‌ನೈಟ್‌ ಆಪರೇಷನ್‌; 400 ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

ರಾತ್ರೋರಾತ್ರಿ ಕಾಣಿಸಿಕೊಂಡ ಬ್ರಾಗಳು..!;

1999ಕ್ಕೂ ಮೊದಲು ಇದು ಕೇವಲ ಪ್ರವಾಸಿ ತಾಣವಾಗಿತ್ತು.. ಆದ್ರೆ  1999ರಲ್ಲಿ ರಾತ್ರೋರಾತ್ರಿ ಇಲ್ಲಿ ನೂರಾರು ಬ್ರಾಗಳು ಕಾಣಿಸಿಕೊಂಡವು.. ಅವುಗಳನ್ನು ತೆಗೆದುಹಾಕಿದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದವು.. ಇದಾದ ಮೇಲೆ ದಾರಿಯಲ್ಲಿ ಹೋಗುವವರೆಲ್ಲಾ ಇಲ್ಲಿ ಬ್ರಾಗಳನ್ನು ನೇತುಹಾಕಲು ಶುರು ಮಾಡಿದರು.. ಹಾಗೆ, ಈ ಮೂಢನಂಬಿಕೆ ಗಾಢವಾಗುತ್ತಾ ಹೋಯಿತು.. ಹೀಗಾಗಿ ಈ ಬೇಲಿಗೆ ಬ್ರಾಡೋನಾ ಎಂದು ಮರು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ; ಡಿಕೆಶಿ ದರ್ಪದ ಮಾತಿಗೆ ವಿನಮ್ರತೆಯಿಂದ ಉತ್ತರ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಇಲ್ಲಿ ತಮ್ಮ ಬ್ರಾಗಳನ್ನು ನೇತುಹಾಕುವ ಮಹಿಳೆಯರು ಯಾವಾಗಲೂ ತಮ್ಮ ಆಯ್ಕೆಯ ಜೀವನ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಈ ತಂತಿಗೆ ಬ್ರಾ ನೇತು ಹಾಕಿದರೆ ಪ್ರೀತಿಸಿದ ವ್ಯಕ್ತಿ ಜೀವನ ಸಂಗಾತಿಯಾಗಿ ಸಿಗುತ್ತಾನೆ ಎಂಬುದು ಅಲ್ಲಿನ ಜನರ ನಂಬಿಕೆ. ಒಳ್ಳೆಯ ಪತಿ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ಇಲ್ಲಿ ಬ್ರಾಗಳನ್ನು ಕಟ್ಟುತ್ತಾರೆ.. ಇನ್ನು ಇಲ್ಲಿ ಹುಂಡಿಯನ್ನೂ ಇಟ್ಟಿದ್ದು, ಇಲ್ಲಿ ಸಂಗ್ರಹವಾಗುವ ಹಣವನ್ನು ಸ್ತನ ಕ್ಯಾನ್ಸರ್‌ ರೋಗಿಗಳ ಕಲ್ಯಾಣಕ್ಕೆ ಬಳಸಲಾಗುತ್ತಿದೆ..

ಇದನ್ನೂ ಓದಿ; ಎಂ.ಎಸ್‌.ಧೋನಿ ಮಾಜಿ ಬ್ಯುಸಿನೆಸ್‌ ಪಾರ್ಟನರ್‌ ಅರೆಸ್ಟ್‌!

 

Share Post