ತಮಿಳುನಾಡಿನಲ್ಲಿ ಅಪಘಾತ; ರಾಜ್ಯದ ಮೂವರು ಪೊಲೀಸರ ದುರ್ಮರಣ
ಬೆಂಗಳೂರು; ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ.. ರಾಜ್ಯದಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಹಳೇ ಮೈಸೂರು ಭಾಗದ 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.. ಇದಕ್ಕಾಗಿ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ಸಕಲ ಸಿದ್ದತೆ ನಡೆಸುತ್ತಿದ್ದಾರೆ.. ಹೀಗಿರುವಾಗಲೇ ಅನಾಹುತವೊಂದು ನಡೆದಿದೆ.. ತಮಿಳುನಾಡಿನಲ್ಲಿ ಅಪಘಾತ ನಡೆದಿದ್ದು ರಾಜ್ಯದ ಅಧಿಕಾರಿಗಳು ಜೀವ ಕಳೆದುಕೊಂಡಿದ್ದಾರೆ.
ಮೂವರು ಪೊಲೀಸ್ ಅಧಿಕಾರಿಗಳ ಸಾವು;
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ತಮಿಳುನಾಡಿನಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು.. ರಾಜ್ಯದ ಐವರು ಪೊಲೀಸರು ಜೀಪ್ ನಲ್ಲಿ ತಮಿಳುನಾಡಿಗೆ ಹೋಗುತ್ತಿದ್ದರು.. ತಮಿಳುನಾಡಿನ ತಿರುವಣ್ಣಾಮಲೈ ಹಾಗೂ ದಿಂಡಿವನಂ ಹೆದ್ದಾರಿಯಲ್ಲಿ ಬಳಿ ಬಂದಗ ಇವರ ಜೀಪ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕರ್ನಾಟಕದ ಓರ್ವ ಅಧಿಕಾರಿ ಹಾಗೂ ಕಾನ್ಸ್‌ಟೇಬಲ್ ಸೇರಿ ಮೂವರು ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ;
KSRP ಅಸಿಸ್ಟೆಂಟ್ ಕಮಾಂಡೆಂಟ್ ಪ್ರಭಾಕರ್, ಕಾನ್ಸ್‌ಟೇಬಲ್ ವಿಠಲ್ ಹಾಗೂ ತಮಿಳುನಾಡು ಕಾನ್ಸ್‌ಟೇಬಲ್ ದಿನೇಶ್ ಹಾಗೂ ಮತ್ತೊಬ್ಬ ಅಧಿಕಾರಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.