ಬಾಳೆ ಎಲೆ ಊಟಕ್ಕೆ ಇಷ್ಟೊಂದು ಶಕ್ತಿ ಇದೆಯಾ..?; ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?
ಭಾರತೀಯ ವೈದ್ಯ ಪದ್ಧತಿಯಲ್ಲಿ ಗಿಡಮೂಲಿಕೆಗಳಿಗೆ ಹೆಚ್ಚಿನ ಮಹತ್ವವಿದೆ.. ದೇಹದ ಆರೋಗ್ಯಕ್ಕೆ ಲಾಭ ನೀಡುವ ಇಂತಹ ಮೂಲಿಕೆಗಳನ್ನು ಬೇರೆ ಬೇರೆ ರೂಪದಲ್ಲಿ ನಾವು ಉಪಯೋಗಿಸುತ್ತಿರುತ್ತೇವೆ.. ಅದರಲ್ಲಿ ಬಾಳೆ ಎಲೆ ಊಟ ಕೂಡ ಒಂದು… ಬಹುತೇಕ ಶುಭ ಸಮಾರಂಭಗಳು, ಹಬ್ಬಗಳ ಸಮಯದಲ್ಲಿ ನಾವು ಬಾಳೆ ಎಲೆ ಊಟ ಮಾಡುತ್ತೇವೆ.. ಯಾಕಂದ್ರೆ ನಮ್ಮ ಆಯುರ್ವೇದದಲ್ಲಿ ಬಾಳೆಗಿಡಕ್ಕೆ ವಿಶೇಷವಾದ ಮಹತ್ವವಿದೆ.. ಬಾಳೆಹಣ್ಣನ್ನು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.. ಇದು ದೇಹಕ್ಕೆ ಶಕ್ತಿ ತುಂಬುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.. ಈ ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಗಟ್ಟಿಮುಟ್ಟಾಗಿ ಇರಿಸುತ್ತದೆ..
ಇನ್ನು ಬಾಳೆ ಎಲೆ ಕೂಡಾ ನಮ್ಮ ಆಹಾರ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ.. ಶುಭ ಸಮಾರಂಭ, ಹಬ್ಬಗಳಲ್ಲಿ ನಾವು ತಪ್ಪದೆ ಬಾಳೆ ಎಲೆ ಊಟ ಮಾಡುತ್ತೇವೆ.. ಈ ಬಾಳೆ ಎಲೆ ಊಟದಿಂದಲೂ ಅನೇಕ ಆರೋಗ್ಯ ಪ್ರಯೋಜನಗಳಿವೆ.. ಬಾಳೆ ಎಲೆಗಳಲ್ಲಿ ನೈಸರ್ಗಿಕ ಕಬ್ಬಿಣದ ಅಂಶವಿದೆ.. ಹೀಗಾಗಿ ಬಾಳೆ ಎಲೆಗಳಲ್ಲಿ ಆಹಾರ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಳೆ ಎಲೆಗಳಲ್ಲಿರುವ ಔಷಧೀಯ ಗುಣಗಳಿಂದ ದೇಹಕ್ಕೆ ಲಾಭವಾಗುತ್ತದೆ.. ಬಾಳೆ ಎಲೆಯಲ್ಲಿ ಅಡುಗೆ ಮಾಡುವುದರಿಂದ ಖಾದ್ಯಗಳ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುತ್ತದೆ.. ಬಾಳೆ ಎಲೆಗಳು ನೈಸರ್ಗಿಕ ಸೋಂಕುನಿವಾರಕ ಎಂದು ಹೇಳಲಾಗುತ್ತದೆ. ಅವು ಆಹಾರದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ..
ಬಾಳೆ ಎಲೆಗಳಲ್ಲಿ ಪಾಲಿಫಿನಾಲ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಂತಹ ನಮ್ಮ ದೇಹಕ್ಕೆ ಬೇಕಾಗುವಂತಹ ಅಗತ್ಯ ಪೋಷಕಾಂಶಗಳಿವೆ. ಬಾಳೆ ಎಲೆಯಲ್ಲಿ ಆಹಾರವನ್ನು ಬಡಿಸಿದಾಗ, ಎಲೆಯಲ್ಲಿರುವ ಈ ಕೆಲವು ಪೋಷಕಾಂಶಗಳು ಆಹಾರದಲ್ಲಿ ಹೀರಲ್ಪಡುತ್ತವೆ. ಕೆಲವು ಸಿಂಥೆಟಿಕ್ ಪ್ಲೇಟ್‌ಗಳಿಗೆ ಹೋಲಿಸಿದರೆ ಬಾಳೆ ಎಲೆಗಳಲ್ಲಿ ಮಾಡುವ ಆಹಾರದಲ್ಲಿ ಯಾವುದೇ ವಿಷ ಅಥವಾ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದಿಲ್ಲ.
ಬಾಳೆ ಎಲೆಯಲ್ಲಿ ಆಹಾರವನ್ನು ಸೇವಿಸುವುದು ಜೀರ್ಣಕ್ರಿಯೆಗೆ ಉತ್ತಮ ಎಂದು ತಜ್ಞರು ಹೇಳುತ್ತಾರೆ.. ಬಾಳೆ ಎಲೆಗಳಲ್ಲಿರುವ ಪಾಲಿಫಿನಾಲ್‌ಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ.. ಈ ಮೂಲಕ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ. ಅವು ನಮ್ಮ ದೇಹದಲ್ಲಿನ ಪ್ರೀ ರಾಡಿಕಲ್ಗಳೊಂದಿಗೆ ಹೋರಾಡುತ್ತವೆ ಮತ್ತು ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಬಾಳೆ ಎಲೆಗಳು ಪಾಲಿಫಿನಾಲ್ ಆಕ್ಸಿಡೇಸ್ ಅನ್ನು ಹೊಂದಿರುತ್ತವೆ, ಇದು ಪಾರ್ಕಿನ್ಸನ್ ಕಾಯಿಲೆಯನ್ನು ಹೋಗಲಾಡಿಸುವ ಕಿಣ್ವವಾಗಿದೆ.
ಬಾಳೆ ಎಲೆಗಳ ರಸವನ್ನು ಕೆಮ್ಮು ಮತ್ತು ಶೀತವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇವುಗಳನ್ನು ಸೇವಿಸುವುದರಿಂದ ಸಾಮಾನ್ಯ ಸೋಂಕುಗಳಿಂದ ಶೀಘ್ರ ಪರಿಹಾರ ದೊರೆಯುತ್ತದೆ. ಬಾಳೆ ಎಲೆಗಳನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಯಾವುದೇ ಚರ್ಮ ಸಂಬಂಧಿ ಸಮಸ್ಯೆ ಇದ್ದರೆ ಬಾಳೆ ಎಲೆಯ ಪೇಸ್ಟ್ ತಕ್ಷಣವೇ ಕಡಿಮೆಯಾಗುತ್ತದೆ.