Lifestyle

Secretary Bird; ಇದು ಪ್ರಪಂಚದ most sexiest bird ಅಂತೆ..!

ಈ ಜಗತ್ತೇ ಒಂದು ಕೌತುಕ.. ಪ್ರಾಣಿ, ಪಕ್ಷಿ ಪ್ರಪಂಚವಂತೂ ಅಚ್ಚರಿಗಳ ಗಣಿ.. ಪಕ್ಷಿಲೋಕದಲ್ಲಿ ಒಮ್ಮೆ ನಾವು ಸಂಚರಿಸಿಬಿಟ್ಟರೆ ಸಾವಿರ ಸಾವಿರ ಸ್ಟೋರಿಗಳು ನಮನ್ನ ಚಕಿತಗೊಳಿಸುತ್ತವೆ.. ಹಕ್ಕಿಗಳ ಜೀವನ ವಿಧಾನವೇ ನಮ್ಮ ಮನಸ್ಸನ್ನ ಸೆಳೆದುಬಿಡುತ್ತೆ.. ಬೆಡಗಿಯರು ರ್ಯಾಂಪ್‌ ಮೇಲೆ ವಯ್ಯಾರದಿಂದ ಕ್ಯಾಟ್‌ ವಾಕ್‌ ಮಾಡೋದನ್ನು ನೋಡಿದ್ದೇವೆ.. ನಗರ ಪ್ರದೇಶದಲ್ಲಿ ಇಂತಹ ಮೋಹಕ ರ್ಯಾಂಪ್‌ ವಾಕ್‌ ಗಳು ಸಾಮಾನ್ಯವಾಗಿಬಿಟ್ಟಿವೆ..

ಮೋಸ್ಟ್‌ ಸೆಕ್ಸಿಯೆಸ್ಟ್‌ ಬರ್ಡ್‌ ಎಂದ ನೆಟ್ಟಿಗರು!

ಆದರೆ ತರುಣಿಯರ ನಡಿಗೆಯನ್ನೇ ನಾಚಿಸುವಂತೆ ಹಕ್ಕಿಯೊಂದು ಹೆಜ್ಜೆ ಹಾಕುತ್ತದೆ.. ಅದರ ನಡಿಗೆ ಎಂತವರನ್ನೂ ತನ್ನತ್ತ ಸೆಳೆಯುತ್ತದೆ.. ಹೀಗಾಗಿಯೇ ಸಾಮಾಜಿಕ ಜಾಲತಾಣದ ಮಂದಿ ಇದಕ್ಕೆ ವಿಶ್ವದ ಸೆಕ್ಸಿಯೆಸ್ಟ್‌ ಬರ್ಡ್‌ ಅಂತ ಹೆಸರಿಟ್ಟುಬಿಟ್ಟಿದ್ದಾರೆ.. ಅಂದಹಾಗೆ ಈ ಹಕ್ಕಿಯ ಹೆಸರು ಸೆಕ್ರೆಟರಿ ಬರ್ಡ್‌.. (secretary bird) ಆಫ್ರಿಕಾದಲ್ಲಿ ಹೆಚ್ಚುಕಂಡು ಬರುವ ಈ ಹಕ್ಕಿಯ ಫೋಟೋವೊಂದು ಕೆಲ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನೆಟ್ಟಿಗರು ಇದು ವಿಶ್ವದ ಮೋಸ್ಟ್‌ ಸೆಕ್ಸಿಯೆಸ್ಟ್‌ ಬರ್ಡ್‌ (most sexiest bird) ಎಂದು ಕರೆದಿದ್ದರು.

ಏನಿದು ಸೆಕ್ರೆಟರಿ ಬರ್ಡ್‌ ವಿಶೇಷತೆ..?

ಉದ್ದನೆಯ ಕಾಲು.. ಅಗಲವಾದ ರೆಕ್ಕೆ.. ವಯ್ಯಾರದ ನಡಿಗೆ.. ಮೋಹಕ ನೋಟ.. ಇಷ್ಟು ಸಾಕಲ್ಲವೇ ತನ್ನತ್ತ ಸೆಳೆಯಲು.. ಹೌದು, ಈ ಹಕ್ಕಿ ಪಕ್ಷಿ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ.. ಟ್ವಿಟ್ಟರ್ ಬಳಕೆದಾರ ಜೋರ್ಡಾನ್ ಬ್ಲಾಕ್ ಎಂಬಾತ ಈ ಸೆಕ್ರೆಟರಿ ಹಕ್ಕಿಯ ಚಿತ್ರವನ್ನು ಮೂರು ವರ್ಷದ ಹಿಂದೆ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು.. ಇದನ್ನು ನೋಡಿದ ಜನ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.. ಮನಮೋಹಕವಾಗಿ ಎಂದು ಹೊಗಳಿದ್ದರು.. ಇದು ನೋಡೋದಕ್ಕೆ ಮಾತ್ರ ಸುಂದರವಾಗಿಲ್ಲ.. ನಡಿಗೆಯಿಂದಷ್ಟೇ ಇದು ಫೇಮಸ್‌ ಕೂಡಾ ಅಲ್ಲ.. ಈ ಹಕ್ಕಿ ಶಿಕಾರಿಯಲ್ಲೂ ಪಳಗಿದೆ.. ಇಲಿ, ಹಾವು, ಮೊಲ, ಏಡಿ, ಆಮೆ, ಸಣ್ಣ ಪಕ್ಷಿಗಳು, ಪಕ್ಷಿ ಮೊಟ್ಟೆಗಳನ್ನು ಇದು ತಿನ್ನುತ್ತದೆ.. ಉದ್ದನೆಯ ಹಾಗೂ ಬಲಯುತ ಕಾಲುಗಳೇ ಈ ಹಕ್ಕಿಗೆ ಆಧಾರ.. ಎಂತಹ ಪ್ರಾಣಿಯನ್ನಾದರೂ ತನ್ನ ಕಾಲುಗಳನ್ನೇ ಹಿಡಿದು ಕೊಂದುಬಿಡುತ್ತೆ.. ಅದರಲ್ಲೂ ಹಾವುಗಳನ್ನು ಹಿಡಿಯೋದರಲ್ಲಿ ಇದು ಅತ್ಯಂತ ಚಾಣಾಕ್ಷ ಪ್ರಾಣಿ..

ಹಾವನ್ನು ಚಾಣಾಕ್ಷತನದಿಂದ ಇದು ಬೇಟೆಯಾಡುತ್ತೆ..!

ಕೆಲ ವರ್ಷಗಳ ಹಿಂದೆ ವಿಜ್ಞಾನಿಗಳು, ರಬ್ಬರ್ ಹಾವನ್ನು ಬಳಸಿ ಈ ಹಕ್ಕಿಯ ಶಿಕಾರಿಯ ಗುಣವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರು. ಕಾಲನ್ನೇ ಅಸ್ತ್ರವಾಗಿ ಬಳಸಿ ಈ ಹಕ್ಕಿ ಬೇಟೆಯಾಡುವ ಪರಿ ನಿಜಕ್ಕೂ ಅಚ್ಚರಿ.
ಸದ್ಯ ನೆಟ್ಟಿಗರು ಈ ಹಕ್ಕಿಯ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

ಈ ಸ್ಟೋರಿಯನ್ನೂ ಓದಿ;

https://kannada.newsx.com/lifestyle/love-horoscope-will-your-love-be-a-success-on-this-valentines-day-what-does-rashi-predict

Share Post