ಬದಲಾಗ್ತಿದೆಯಾ ಶಿವಮೊಗ್ಗ ರಾಜಕಾರಣದ ಚಿತ್ರಣ; ತೆರೆಮರೆಯ ತಂತ್ರಗಾರಿಕೆ ಏನು..?
ಶಿವಮೊಗ್ಗ; ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣ ಬದಲಾಗುತ್ತಿದೆಯಾ..?, ಬಂಗಾರಪ್ಪರ ಮಗಳು ಗೀತಾ ಶಿವರಾಜ್‌ಕುಮಾರ್ ಬಗ್ಗೆ ಒಲವು ಹೆಚ್ಚಾಗ್ತಿದೆಯಾ..?, ಕಾಂಗ್ರೆಸ್‌ನ ಸೈಲೆಂಟ್ ಆಪರೇಷನ್ ಬಿಜೆಪಿ ಅತಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಲಿದೆಯಾ..? ಇಂತಹ ಹತ್ತು ಹಲವು ಪ್ರಶ್ನೆಗಳು ಏಳಲು ಶುರುವಾಗಿದೆ.. ಗೀತಾ ಶಿವರಾಜ್‌ಕುಮಾರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ ಮತ್ತೆ ಬಿ.ವೈ.ರಾಘವೇಂದ್ರ ಸಂಸದರಾಗೋದು ಫಿಕ್ಸ್ ಎಂದು ಹೇಳಲಾಗುತ್ತಿತ್ತು.. ಆದ್ರೆ ಕಾಲಕ್ರಮೇಣ ಚಿತ್ರಣ ಬದಲಾದಂತೆ ಕಾಣುತ್ತಿವೆ..
ಇದನ್ನೂ ಓದಿ; ಹಿಂದೂ ಸಂಸ್ಕೃತಿ ಮೇಲೆ ಕಾಂಗ್ರೆಸ್ ಕಾಕದೃಷ್ಟಿ; ಜೆಡಿಎಸ್ ಆಕ್ರೋಶ
ಹಂಚಿಹೋಗಿದ್ದ ಮತಗಳ ಕ್ರೋಢೀಕರಣ;
ಬಿಜೆಪಿಯವರು ಗೀತಾ ಶಿವರಾಜ್‌ಕುಮಾರ್ ಪ್ರಬಲ ಪ್ರತಿಸ್ಪರ್ಧಿಯೇ ಅಲ್ಲ ಎಂದು ಹೇಳುತ್ತಾ ಬರುತ್ತಿದ್ದಾರೆ.. ಇನ್ನೊಂದೆಡೆ ಈಶ್ವರಪ್ಪ ಅವರು ಗೀತಾ ಶಿವರಾಜ್‌ಕುಮಾರ್ ಡಮ್ಮಿ ಕ್ಯಾಂಡಿಡೇಟ್ ಎಂದು ಹೇಳಿದ್ದಾರೆ.. ಇದೊಂದು ರೀತಿಯಲ್ಲಿ ಬಂಗಾರಪ್ಪ ಅಭಿಮಾನಿಗಳ ಸ್ವಾಭಿಮಾನಕ್ಕೆ ಹೊಡೆತ ಬಿದ್ದಂತಾಗಿದೆ.. ಹೀಗಾಗಿ ಬಂಗಾರಪ್ಪ ಅಭಿಮಾನಿಗಳಯ ಸೈಲೆಂಟಾಗಿ ಸಂಘಟನೆ ಶುರು ಮಾಡಿದ್ದಾರೆ.. ಈ ಬಾರಿ ಗೀತಾ ಶಿವರಾಜ್‌ಕುಮಾರ್ ರೂಪದಲ್ಲಿ ಬಂಗಾರಪ್ಪ ಅವರೇ ಸ್ಪರ್ಧೆ ಮಾಡುತ್ತಿದ್ದಾರೆ.. 2009ರ ಸೋಲಿಗೆ ಸೇಡು ತೀರಿಸಿಕೊಳ್ಳಲು ಇದು ಸಕಾಲ ಎಂಬ ವಿಚಾರ ಮುನ್ನೆಲೆಗೆ ತರುತ್ತಿದ್ದಾರೆ.. ಇನ್ನೊಂದೆಡೆ ಬಂಗಾರಪ್ಪ ಅವರು ಪ್ರಬಲವಾಗಿದ್ದಾಗ, ಈಡಿಗರು, ಹಿಂದುಳಿದ ವರ್ಗದವರು, ಲಂಬಾಣಿ ಸೇರಿ ದಲಿತ ವರ್ಗದ ಎಲ್ಲಾ ಸಮುದಾಯದವರು, ಮುಸ್ಲಿಮರು ಬಂಗಾರಪ್ಪ ಕೈಹಿಡಿಯುತ್ತಿದ್ದರು.. ನಂತರದ ದಿನಗಳ ಈ ಮತಗಳು ಹರಿದು ಹಂಚಿಹೋಗಿದ್ದರು.. ಆದ್ರೆ, ಈ ಬಾರಿ ಈ ಎಲ್ಲಾ ಮತಗಳನ್ನು ಬಂಗಾರಪ್ಪರ ಸೋಲಿನ ಸೇಡು ತೀರಿಸಿಕೊಳ್ಳಲು ಒಂದು ಮಾಡುವ ಪ್ರಯತ್ನ ನಡೆಯುತ್ತಿದೆ..
ಇದನ್ನೂ ಓದಿ; ಕೊಂಡ ಹಾಯ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ!
ಬಿಜೆಪಿಯ ನಿರ್ಲಕ್ಷ್ಯ ಮುಳುವಾಗುತ್ತಾ..?;
ಹಾಗೆ ನೋಡಿದರೆ ಮೊದಲಿಗೆ ಗೀತಾ ಶಿವರಾಜ್‌ಕುಮಾರ್ ಗಿಂತ ಬಿ.ವೈ.ರಾಘವೇಂದ್ರಗೆ ಹೆಚ್ಚಿನ ಒಲವಿತ್ತು.. ಆದ್ರೆ, ಯಾವಾಗ, ಅತಿಯಾದ ಆತ್ಮವಿಶ್ವಾಸ ತೋರಿಸುತ್ತಾ ಬಂದರೋ ಅದರಿಂದ ರಾಜಕೀಯ ಚಿತ್ರಣ ಬದಲಾದಂತೆ ಭಾಸವಾಗುತ್ತಿದೆ.. ಇನ್ನೊಂದೆ ಹೇಳಬೇಕು ಎಂದರೆ, ನಾವು ಶಿವಮೊಗ್ಗದಲ್ಲಿ ಹೆಚ್ಚು ಅಭಿವೃದ್ಧಿ ಮಾಡಿದೇವೆ.. ಹೀಗಾಗಿ ಜನ ನಮಗೆ ಮತ ಹಾಕೇ ಹಾಕುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವನ್ನು ಯಡಿಯೂರಪ್ಪ ಕುಟುಂಬ ಇಟ್ಟುಕೊಂಡಿದೆ.. ಇದರ ಜೊತೆಗೆ ಎದುರಾಳಿಗಳು ನಮಗೆ ಸಮಾನರಲ್ಲ ಎಂಬ ನಿರ್ಲಕ್ಷ್ಯ ಭಾವನೆ ಹೆಚ್ಚಾದಂತೆ ಕಾಣುತ್ತಿದೆ.. ಆದ್ರೆ ಬಿಜೆಪಿಯವರ ಅತಿಯಾದ ಆತ್ಮವಿಶ್ವಾಸ ಹಾಗೂ ಎದುರಾಳಿಗಳ ಬಗ್ಗೆ ನಿರ್ಲಕ್ಷ್ಯ ಧೋರಣೆಯೇ ಶಿವಮೊಗ್ಗದಲ್ಲಿ ರಾಜಕೀಯ ಚಿತ್ರಣ ಬದಲಾಗಲು ದಾರಿ ಮಾಡಿಕೊಡುತ್ತಿದೆಯಾ ಎಂಬ ಅನುಮಾನ ಕಾಡುತ್ತಿವೆ.. ಇನ್ನೊಂದೆಡೆ ಈಶ್ವರಪ್ಪ ಅವರನ್ನು ಕೂಡಾ ಸುಲಭವಾಗಿ ತೆಗೆದುಕೊಳ್ಳಲಾಗಿತ್ತು.. ಬಂಡಾಯ ಸ್ಪರ್ಧೆ ಮಾಡುವುದಾಗಿ ಹೇಳಿದಾಗ ಅಷ್ಟೇನೂ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ.. ಈಗ ಈಶ್ವರಪ್ಪ ಸ್ಪರ್ಧೆ ಗ್ಯಾರೆಂಟಿಯಾಗಿದೆ.. ಈಶ್ವರಪ್ಪ ಮೋದಿ ಹೆಸರಲ್ಲೇ ಮತ ಕೇಳುತ್ತಿರುವುದರಿಂದ ಅವರ ಪಡೆಯುವ ಮತಗಳೆಲ್ಲವೂ ಬಿಜೆಪಿಗೆ ಮೈನಸ್ ಆಗಲಿವೆ..
ಇದನ್ನೂ ಓದಿ; ಪ್ಲೇ ಆಫ್ ಪ್ರವೇಶಿಸುತ್ತಾ ಆರ್‌ಸಿಬಿ..?; ಎಂಟ್ರಿ ಆಗ್ತಾರಾ ಸ್ಟಾರ್ ಪ್ಲೇಯರ್..?
ಯಾಕೆ ಕಾಂಗ್ರೆಸ್‌ಗೆ ಸವಾಲಾಗುತ್ತಾ ಬಂದಿದೆ..?
2008ಕ್ಕೂ ಮೊದಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಗಾರಪ್ಪ ಕುಟುಂಬಕ್ಕೆ ಒಳ್ಳೆಯ ವಾತಾವರಣವಿತ್ತು.. ಬಂಗಾರಪ್ಪ ಅವರು ಯಾವುದೇ ಪಾರ್ಟಿಯಿಂದ ಸ್ಪರ್ಧೆ ಮಾಡಿದರೂ ಅನಾಯಾಸವಾಗಿ ಗೆಲ್ಲುತ್ತಿದ್ದರು.. ಯಾರೇ ಎದುರಾಳಿಯಾದರೂ ಬಂಗಾರಪ್ಪ ಅವರು ಸುಲಭವಾಗಿ ಗೆಲುವು ಸಾಧಿಸುತ್ತಿದ್ದರು.. ಆದ್ರೆ 2008ರಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾಯಿತು.. ಈ ವೇಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರಗಳನ್ನು ಸೇರಿಸಲಾಯಿತು.. ಈ ಭಾಗದಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ಬಂಗಾರಪ್ಪ ಕುಟುಂಬಕ್ಕೆ ಮುಳುವಾಗುತ್ತಾ ಬಂತು.. ಆದರೂ ಕೂಡಾ ಬಂಗಾರಪ್ಪ ಫ್ಯಾಮಿಲಿ ನಿರಂತರವಾಗಿ ಬಿಗ್ ಫೈಟ್ ನೀಡುತ್ತಲೇ ಬಂದಿದೆ.. 2009ರಲ್ಲಿ ಬಂಗಾರಪ್ಪ ಅವರು ಕೇವಲ 50 ಸಾವಿರ ಮತಗಳ ಅಂತರದಿಂದ ಸೋತಿದ್ದರು.. 2018ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿಯೂ ಮಧು ಬಂಗಾರಪ್ಪ ಅವರು ರಾಘವೇಂದ್ರ ವಿರುದ್ಧ ದೊಡ್ಡ ಸೆಣಸಾಟ ನಡೆಸಿದ್ದರು.. ಆದ್ರೆ ಆಗಲೂ ಮಧು ಬಂಗಾರಪ್ಪ ಕೇವಲ 52 ಸಾವಿರ ಮತಗಳ ಅಂತರದಿಂದ ಸೋತಿದ್ದರು.. ಬಂಗಾರಪ್ಪ ಕುಟುಂಬ ಎದುರಿಸಲೆಂದೇ ಯಡಿಯೂರಪ್ಪ ಅವರು ಕ್ಷೇತ್ರ ಮರು ವಿಂಗಡಣೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿರುವ ಕ್ಷೇತ್ರಗಳನ್ನು ಶಿವಮೊಗ್ಗಕ್ಕೆ ಕ್ಷೇತ್ರಕ್ಕೆ ಸೇರಿಸುವಂತೆ ಮಾಡಿದ್ದರು ಎಂಬ ಆರೋಪವೂ ಇದೆ..
ಇದನ್ನೂ ಓದಿ; ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಬಿಜೆಪಿ ಅಭ್ಯರ್ಥಿ!
ಬೈಂದೂರು ಬಿಟ್ಟು ಎಲ್ಲಾ ಕಡೆ ಉತ್ತಮ ವಾತಾವರಣ;
ಈ ಬಾರಿ ಚನ್ನಗಿರಿ ಹಾಗೂ ಹೊನ್ನಾಳಿಯಲ್ಲಿ ಕಾಂಗ್ರೆಸ್‌ಗೆ ಅದರಲ್ಲೂ ಬಂಗಾರಪ್ಪ ಅವರ ಮಗಳು ಎಂಬ ಕಾರಣಕ್ಕೆ ಉತ್ತಮ ವಾತಾವರಣ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ.. ಬೈಂದೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.. ಇಲ್ಲಿ ಆಗುವ ಮೈನಸ್ ಮತಗಳನ್ನು ಬೇರೆ ಕ್ಷೇತ್ರಗಳಲ್ಲಿ ಸರಿದೂಗಿಸುವಂತಾದರೆ ಗೀತಾ ಶಿವರಾಜ್‌ಕುಮಾರ್ ಗೆಲ್ಲಲು ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ.. ಬೈಂದೂರು ಕ್ಷೇತ್ರದಲ್ಲಿ ಈಶ್ವರಪ್ಪ ಅವರು ಹೆಚ್ಚು ಮತಗಳನ್ನು ಗಳಿಸಿದಷ್ಟೂ ಗೀತಾ ಶಿವರಾಜ್‌ಕುಮಾರ್‌ಗೆ ಲಾಭ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ಗಂಡ-ಹೆಂಡತಿ ಜಗಳದಲ್ಲಿ ಬಾಮೈದ ಕೊಲೆಯಾಗಿ ಹೋದ!
ಎಲ್ಲಾ ಮನಸ್ತಾಪ ಬಿಟ್ಟು ಒಂದಾಗ್ತಿರುವ ಈಡಿಗ ಮತಗಳು;
ಈ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಡಿಗ, ಬಿಲ್ಲವ ಮತಗಳು ಹೆಚ್ಚಿವೆ… ಬಂಗಾರಪ್ಪ ಅವರಿದ್ದಾಗ ಈಡಿಗ ಮತಗಳು ಸಾಲಿಡ್ ಆಗಿ ಬಂಗಾರಪ್ಪ ಅವರಿಗೆ ಬರುತ್ತಿದ್ದರು.. ಆದ್ರೆ ಇತ್ತೀಚೆಗೆ ಅವು ಡಿವೈಡ್ ಆಗುತ್ತಿವೆ.. ಆದ್ರೆ ಈ ಬಾರಿ ಈಡಿಗ ಮತಗಳು ಒಂದಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.. 2009ರ ಸೋಲಿನ ಸೇಡು ತೀರಿಸಿಕೊಳ್ಳಬೇಕೆಂದು ಈಡಿಗರು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಇದಕ್ಕೆ ಇತರೆ ಹಿಂದುಳಿದವರು, ಮುಸ್ಲಿಮರು ಹಾಗೂ ದಲಿತರು ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ಹಬ್ಬದ ರಾತ್ರಿಯೇ ಭೀಕರ ಅಪಘಾತ; ಬಸ್ ಅಪಘಾತದಲ್ಲಿ 11 ಮಂದಿ ದುರ್ಮರಣ!