Politics

ಡಾ.ಸಿ.ಎನ್‌.ಮಂಜುನಾಥ್‌ ಪರ ಪ್ರಚಾರ ಮಾಡಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ!

ತುಮಕೂರು; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಪರ ಪ್ರಚಾರ ನಡೆಸಿದ್ದಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.. ತುಮಕೂರು ಜಿಲ್ಲೆ ಕುಣಿಗಲ್‌ ಕ್ಷೇತ್ರ ಕೂಡಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.. ಇಲ್ಲಿ ಜೆಡಿಎಸ್‌ ಬೆಂಬಲಿತ ಗ್ರಾಪಂ ಸದಸ್ಯ ಮಂಜುನಾಥ್‌ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.. ಕಾಂಗ್ರೆಸ್‌ನವರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ; ಬದಲಾಗ್ತಿದೆಯಾ ಶಿವಮೊಗ್ಗ ರಾಜಕಾರಣದ ಚಿತ್ರಣ; ತೆರೆಮರೆಯ ತಂತ್ರಗಾರಿಕೆ ಏನು..?

ಕೆಂಪನಹಳ್ಳಿಯಲ್ಲಿ ಮಂಜುನಾಥ್‌ ಮೇಲೆ ಹಲ್ಲೆ!;

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ಈ ಘಟನೆ ನಡೆದಿದೆ.. ಇದೇ ಗ್ರಾಮದ ಬೋರೇಗೌಡ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಮಂಜುನಾಥ್‌ ಆರೋಪ ಮಾಡಿದ್ದಾರೆ.. ಹಲ್ಲೆಯಿಂದಾಗಿ ಗ್ರಾಪಂ ಸದಸ್ಯ ಮಂಜುನಾಥ್‌ ತಲೆಗೆ ಪೆಟ್ಟಾಗಿದೆ.. ಮಾತನಾಡಬೇಕೆಂದು ಮಂಜುನಾಥ್‌ ಅವರನ್ನು ಬೋರೇಗೌಡ ಹಾಗೂ ಬೆಂಬಲಿಗರು ಕರೆದಿದ್ದರಂತೆ.. ಹೀಗಾಗಿ ಮಂಜುನಾಥ್‌ ಅವರು ಹೋಗುತ್ತಿದ್ದಾಗ, ಪಂಚಪಾಳ್ಯದ ಬಳಿ ಬರುತ್ತಿದ್ದಂತೆ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿರುವ ಮಂಜುನಾಥ್ ಅವರಿಗೆ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ; ಹಿಂದೂ ಸಂಸ್ಕೃತಿ ಮೇಲೆ ಕಾಂಗ್ರೆಸ್ ಕಾಕದೃಷ್ಟಿ; ಜೆಡಿಎಸ್ ಆಕ್ರೋಶ

ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರ;

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ.. ಡಾ.ಸಿ.ಎನ್‌.ಮಂಜುನಾಥ್‌ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಡಿ.ಕೆ.ಸುರೇಶ್‌ಗೆ ಸವಾಲಾಗಿದೆ.. ಮೂರು ಬಾರಿ ಗೆದ್ದಿರುವ ಡಿ.ಕೆ.ಸುರೇಶ್‌ ಮತ್ತೊಮ್ಮೆ ಗೆಲ್ಲಲು ತಂತ್ರಗಾರಿಕೆ ನಡೆಸುತ್ತಿದ್ದಾರೆ… ಈ ನಡುವೆ ಎರಡೂ ಕಡೆಯಿಂದ ಗಲಾಟೆ, ಗದ್ದಲಗಳು ನಡೆಯುತ್ತಿವೆ.. ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ವೇಳೆಯೂ ಇಂತಹದ್ದೊಂದು ಪ್ರಕರಣ ನಡೆದಿತ್ತು.. ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಬಿಜೆಪಿಯ ಮೂವರು ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ; ಕೊಂಡ ಹಾಯ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ!

 

Share Post