Politics

ಕೊಂಡ ಹಾಯ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಭಾರಿ ರಂಗೇರುತ್ತಿದೆ.. ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯ ಅಖಾಡದಲ್ಲಿದ್ದಾರೆ… ರಕ್ಷಾ ರಾಮಯ್ಯ ಶತಾಯಗತಾಯ ಗೆಲ್ಲಲೇಬೇಕೆಂದು ತಂತ್ರಗಾರಿಕೆ ನಡೆಸುತ್ತಿದ್ದಾರೆ.. ಸತತವಾಗಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.. ಜೊತೆಗೆ ದೇಗುಲಗಳಿಗೆ ಕೂಡಾ ಭೇಟಿ ನೀಡುತ್ತಿದ್ದಾರೆ.. ಇಂದು ಅವರು ಚೌಡೇಶ್ವರಿ ದೇಗುಲದಲ್ಲಿ ಕೊಂಡ ಹಾಯ್ದು, ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ..

ಇದನ್ನೂ ಓದಿ; ಪ್ಲೇ ಆಫ್‌ ಪ್ರವೇಶಿಸುತ್ತಾ ಆರ್‌ಸಿಬಿ..?; ಎಂಟ್ರಿ ಆಗ್ತಾರಾ ಸ್ಟಾರ್‌ ಪ್ಲೇಯರ್‌..?

ಯುಗಾದಿ ಹಿನ್ನೆಲೆಯಲ್ಲಿ ರಕ್ಷಾ ರಾಮಯ್ಯ ಅವರು ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು.. ಕೈವಾರ ಯೋಗಿ ನಾರೇಯಣ ದೇವಾಲಯ, ಘಾಟಿ ಸುಬ್ರಹ್ಮಣ್ಯ ದೇಗುಲ, ಯಲಹಂಕದ ಚೌಡೇಶ್ವರಿ ದೇಗುಲ ಹಾಗೂ ಮಧುರೈ ಶನೇಶ್ವರ ದೇಗುಲಕ್ಕೆ ಭೇಟಿ  ನೀಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ಅವರು ಚೌಡೇಶ್ವರಿ ದೇಗುಲದಲ್ಲಿ ಕೊಂಡ ಹಾಯ್ದು ನಾಡಿನಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥನೆ ಮಾಡಿದರು.. ಜೊತೆಗೆ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ; ನಾಳೆಯಿಂದ ಬೆಂಗಳೂರಿನಲ್ಲಿ ಮಳೆ; ರಾಜ್ಯದಲ್ಲಿ ಎಲ್ಲೆಲ್ಲಿ ವರುಣನ ಆರ್ಭಟ?

ಇನ್ನು ಇದೇ ವೇಳೆ ಎಂ.ಎಸ್.‌ ರಾಮಯ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಂ.ಆರ್.‌ ಜಯರಾಂ, ವಿಧಾನಪರಿಷತ್ ಸದಸ್ಯ ಎಂ.ಆರ್ ಸೀತಾರಾಂ ಅವರ ಜೊತೆ ಕೈವಾರದಲ್ಲಿ ಕಾಲಜ್ಞಾನಿ ಯೋಗಿ ನಾರೇಯಣ ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.

ಇದನ್ನೂ ಓದಿ; ಮೋದಿ ಬೆಂಗಳೂರು ರೋಡ್‌ ಶೋ ರದ್ದು; ಮಂಗಳೂರು ಸಮಾವೇಶವೂ ಇಲ್ಲ!

 

Share Post