Politics

ಮೋದಿ ಬೆಂಗಳೂರು ರೋಡ್‌ ಶೋ ರದ್ದು; ಮಂಗಳೂರು ಸಮಾವೇಶವೂ ಇಲ್ಲ!

ಬೆಂಗಳೂರು; ಈಗಾಗಲೇ ಎರಡು ಬಾರಿ ರಾಜ್ಯದಲ್ಲಿ ಸಮಾವೇಶ ನಡೆಸಿರುವ ಮೋದಿ ಮತ್ತೆ ಏಪ್ರಿಲ್‌ 14ರಂದು ರಾಜ್ಯಕ್ಕೆ ಬರುತ್ತಿದ್ದಾರೆ… ಮೈಸೂರು, ಬೆಂಗಳೂರು ಹಾಗೂ ಮಂಗಳೂರು ಗಳಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ.. ಆದ್ರೆ ಈಗಾಗಲೇ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ..

ಇದನ್ನೂ ಓದಿ; ಎಮರ್ಜೆನ್ಸಿ ಅಂತೇಳಿ ಹೋದ ಉದ್ಯೋಗಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಕಂಡಳು!

ಬೆಂಗಳೂರು ರೋಡ್‌ ಶೋ, ಮಂಗಳೂರು ಸಮಾವೇಶ ರದ್ದು;

ಮಂಗಳೂರಿನಲ್ಲಿ ಏಪ್ರಿಲ್‌ 14ರಂದು ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.. ಆದ್ರೆ ಕಾರಣಾಂತರಗಳಿಂದ ಅದನ್ನು ರದ್ದು ಮಾಡಲಾಗಿದೆ.. ಅದರ ಬದಲು ಮಂಗಳೂರಿನಲ್ಲಿ ಬರೀ ರೋಡ್‌ ಶೋ ಮಾಡಲು ತೀರ್ಮಾನ ಮಾಡಲಾಗಿದೆ.. ಇನ್ನು ಅಂದು ಬೆಂಗಳೂರಿನಲ್ಲಿ ನಡೆಯುವ ರೋಡ್‌ ಶೋನಲ್ಲಿ ಮೋದಿ ಪಾಲ್ಗೊಳ್ಳಬೇಕಾಗಿತ್ತು.. ಆದ್ರೆ ಅದನ್ನು ರದ್ದು ಮಾಡಲಾಗಿದೆ.. ಈಗ ಹೊಸ ರೂಟ್‌ ಮ್ಯಾಪ್‌ ನೀಡಲಾಗಿದ್ದು, ಮೋದಿಯವರು ಮೈಸೂರಿನ ನಂತರ ನೇರವಾಗಿ ಮಂಗಳೂರಿಗೆ ಹೋಗಲಿದ್ದಾರೆ..

ಇದನ್ನೂ ಓದಿ; 28 ಕ್ಷೇತ್ರಗಳಲ್ಲೂ ಬಿಜೆಪಿ- ಜೆಡಿಎಸ್ ಗೆಲುವು ಖಚಿತ: ವಿಜಯೇಂದ್ರ

ಮಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ;

ಮಂಗಳೂರಿನ ಗೋಲ್ಡ್‌ ಪಿಂಚ್‌ ಸಿಟಿ ಮೈದಾನದಲ್ಲಿ ಬೃಹತ್‌ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.. ಆದ್ರೆ ಕಾರಣಾಂತರಗಳಿಂದ ಈ ಮೋದಿ ಸಮಾವೇಶ ರದ್ದು ಮಾಡಲಾಗಿದೆ.. ಅದರ ಬದಲಾಗಿ ಸುಮಾರು 2.5 ಕಿಲೋ ಮೀಟರ್‌ ರೋಡ್‌ ಶೋ ನಡೆಸಲಿದ್ದಾರೆ.. ಇದಕ್ಕೆ ರೂಟ್‌ ಮ್ಯಾಪ್‌ ಸಿದ್ಧ ಮಾಡಲಾಗಿದೆ.. ಜೊತೆಗೆ ರೋಡ್‌ ಶೋಗೆ ಬೇಕಾದ ಸಿದ್ಧತೆಗಳನ್ನು ಬಿಜೆಪಿ ವತಿಯಿಂದ ಕೈಗೊಳ್ಳಲಾಗುತ್ತಿದೆ..

ಇದನ್ನೂ ಓದಿ; ಬೇಸಿಗೆಯಲ್ಲಿ ಸನ್‌ಸ್ಕ್ರೀನ್‌ ಹಚ್ಚದಿದ್ದರೆ ಚರ್ಮದ ಕ್ಯಾನ್ಸರ್‌ ಬರುತ್ತಾ..?

ಏಪ್ರಿಲ್ 14ರ ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಮಂಗಳೂರಿಗೆ ಬರಲಿದ್ದಾರೆ.. ಮೊದಲಿಗೆ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.. ಅನಂತರ   ಲೇಡಿಹಿಲ್ ನಾರಾಯಣಗುರು ವೃತ್ತದಿಂದ ಹಂಪನಕಟ್ಟೆವರೆಗೆ ರೋಡ್‌ ಶೋ ನಡೆಯಲಿದೆ.. ಮಂಗಳೂರಿನ ಲೇಡಿಹಿಲ್ ನಾರಾಯಣ ಗುರು ಸರ್ಕಲ್ ನಿಂದ ಆರಂಭವಾಗಲಿರುವ ರೋಡ್‌ ಶೋ, ಲಾಲ್ ಭಾಗ್ ನ ಮಂಗಳೂರು ಪಾಲಿಕೆ ಕಚೇರಿ,  ಬಳ್ಳಾಲ್ ಭಾಗ್ ದಾಟಿ ಎಂ.ಜಿ ರಸ್ತೆಯಲ್ಲಿ ಸಾಗಲಿರೋ ರೋಡ್ ಶೋ, ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್ ತಲುಪಲಿದೆ.
ನಂತರ ಕೆ.ಎಸ್.ರಾವ್ ರಸ್ತೆ ಮೂಲಕ ಸಾಗಿ ಹಂಪನಕಟ್ಟೆ ಸಿಗ್ನಲ್ ಬಳಿ ರೋಡ್ ಶೋ ಅಂತ್ಯವಾಗಲಿದೆ.

ಇದನ್ನೂ ಓದಿ; ಶ್ರೀಗಳು ಆಶೀರ್ವಾದ ಮಾಡಿ, ವಿಭೂತಿ ಇಡ್ತಾರೆ ಅಷ್ಟೇ; ಡಿ.ಕೆ.ಶಿವಕುಮಾರ್‌

ಮೈಸೂರಿನಲ್ಲಿ ಸಾರ್ವಜನಿಕ ಸಮಾವೇಶ;

ಮೊದಲಿಗೆ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿ ನಡೆಯುವ ಬೃಹತ್‌ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.. ಏಪ್ರಿಲ್‌ 14ರ ಸಂಜೆ 4  ಗಂಟೆಗೆ ಮೈಸೂರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ.. ಇದನ್ನು ಮುಗಿಸಿಕೊಂಡು ಸಂಜೆ 6 ಗಂಟೆಗೆ ಮಂಗಳೂರಿಗೆ ಭೇಟಿ ಕೊಟ್ಟು ರೋಡ್‌ ಶೋ ನಡೆಸಲಿದ್ದಾರೆ.

ಇದನ್ನೂ ಓದಿ; ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರಂತೆ ಟೀಂ ಇಂಡಿಯಾ ಆಟಗಾರ ಎಂ.ಎಸ್‌.ಧೋನಿ!

ಬೆಂಗಳೂರಿನ ಮೋದಿ ರೋಡ್​ ಶೋ ರದ್ದು;

ಇನ್ನು ಏಪ್ರಿಲ್‌ 14ರಂದು ಬೆಂಗಳೂರಿನಲ್ಲೂ ರೋಡ್‌ ಶೋ ನಿಗದಿಯಾಗಿತ್ತು.. ಆದ್ರೆ ಸಮಯ ಸಾಕಾಗದ ಕಾರಣ ಇದನ್ನು ರದ್ದು ಮಾಡಲಾಗಿದೆ.. ಮೋದಿಯವರು ಏಪ್ರಿಲ್‌ 14 ರಂದು ಬೆಂಗಳೂರಿಗೆ ಬರುವುದಿಲ್ಲ.. ಬದಲಾಗಿ ಮೈಸೂರಿಗೆ ಬಂದು ಅಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.. ಅನಂತರ ಮಂಗಳೂರಿನಲ್ಲಿ ರೋಡ್‌ ಶೋ ಮಾಡಲಿದ್ದಾರೆ.. ಅಲ್ಲಿ ಯಾವುದೇ ಭಾಷಣ ಮಾಡುವುದಿಲ್ಲ.

ಇದನ್ನೂ ಓದಿ; ಸರ್ಕಾರಿ ಬಸ್‌ ಅಡ್ಡಗಟ್ಟಿ ಗೂಂಡಾಗಿರಿ; ಚಾಲಕ, ನಿರ್ವಾಹಕನ ಮೇಲೆ ಹಲ್ಲೆ!

Share Post