LifestyleSports

ಎಮರ್ಜೆನ್ಸಿ ಅಂತೇಳಿ ಹೋದ ಉದ್ಯೋಗಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಕಂಡಳು!

ರಜೆ ಬೇಕು ಅಂದಾಗ ಹುಷಾರಿಲ್ಲ, ಯಾರೋ ತೀರಿಕೊಂಡಿದ್ದಾರೆ ಎಂದು ಸುಳ್ಳು ಹೇಳುವ ಉದ್ಯೋಗಿಗಳನ್ನು ನೋಡಿದ್ದೇವೆ.. ಅದೇ ರೀತಿ ಮಹಿಳಾ ಉದ್ಯೋಗಿಯೊಬ್ಬಳು ಮನೆಯಲ್ಲಿ ಎಮರ್ಜೆನ್ಸಿ ಇದೆ ಎಂದು ಹೇಳಿ ರಜೆ ಪಡೆದುಹೋಗಿದ್ದಾಳೆ.. ಆದ್ರೆ ಆಕೆ ಹೋಗಿದ್ದು, ಐಪಿಎಲ್‌ ಮ್ಯಾಚ್‌ ನೋಡಲು.. ಆಕಯ ಬಾಸ್‌ ಮನೆಯಲ್ಲಿ ಅದೇ ಮ್ಯಾಚ್‌ ಟಿವಿಯಲ್ಲಿ ನೋಡಿದ್ದು, ಅದರಲ್ಲಿ ಮಹಿಳಾ ಉದ್ಯೋಗಿ ಕಂಡಿದ್ದಾಳೆ.. ಮುಂದೇನಾಯ್ತು ಅನ್ನೋದೇ ಕುತೂಹಲ..

ಇದನ್ನೂ ಓದಿ; 28 ಕ್ಷೇತ್ರಗಳಲ್ಲೂ ಬಿಜೆಪಿ- ಜೆಡಿಎಸ್ ಗೆಲುವು ಖಚಿತ: ವಿಜಯೇಂದ್ರ

ಟಿವಿಯಲ್ಲಿ ಕಂಡ ಮಹಿಳಾ ಉದ್ಯೋಗಿ;

ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖ್ನೋ ಸೂಪರ್ ಜೈಂಟ್ಸ್ ನಡುವೆ ಪಂದ್ಯ ನಡೆದಿತ್ತು.. ನೇಹಾ ದ್ವಿವೇದಿ ಎಂಬ ಮಹಿಳಾ ಉದ್ಯೋಗಿಗೆ ಆರ್‌ಸಿಬಿ ಅಂದ್ರೆ ಪಂಚಪ್ರಾಣ.. ಹೀಗಾಗಿ ಪಂದ್ಯ ನೋಡಲು ಟಿಕೆಟ್‌ ಖರೀದಿ ಮಾಡಿದ್ದಳು.. ಆದ್ರೆ ಆ ದಿನ ಕಚೇರಿ ಇತ್ತು.. ಏನಾದರೂ ಒಂದು ಸುಳ್ಳು ಹೇಳಿ ರಜೆ ಪಡೆದು ಕ್ರಿಕೆಟ್‌ ನೋಡಲು ಹೋಗಬೇಕಿತ್ತು.. ಹೀಗಾಗಿ ಆಕೆ ಮನೆಯಲ್ಲಿ ಎಮರ್ಜೆನ್ಸಿ ಇದೆ ಎಂದು ಹೇಳಿ ನೇರವಾಗಿ ಸ್ಟೇಡಿಯಂಗೆ ಹೋಗಿದ್ದಾಳೆ.. ಇತ್ತ ಸಂಜೆ ಮನೆಗೆ ಹೋದ ಬಾಸ್‌ ಟಿವಿ ಆನ್‌ ಮಾಡಿ ಕ್ರಿಕೆಟ್‌ ನೋಡಲು ಶುರು ಮಾಡಿದ್ದಾರೆ.. ಅದೇ ವೇಳೆಯೇ ಮಹಿಳಾ ಉದ್ಯೋಗಿ ಟಿವಿಯಲ್ಲಿ ಕಂಡಿದ್ದಾರೆ.

ಇದನ್ನೂ ಓದಿ; ಬೇಸಿಗೆಯಲ್ಲಿ ಸನ್‌ಸ್ಕ್ರೀನ್‌ ಹಚ್ಚದಿದ್ದರೆ ಚರ್ಮದ ಕ್ಯಾನ್ಸರ್‌ ಬರುತ್ತಾ..?

ಬಾಸ್‌ನಿಂದ ಬಂತು ಮೆಸೇಜ್‌;

ಮಹಿಳಾ ಉದ್ಯೋಗಿ ನೇಹಾ ಟಿವಿಯಲ್ಲಿ ಕಂಡಿದ್ದೇ ತಡ ಪಂದ್ಯ ಮಗಿದ ಮೇಲೆ ಬಾಸ್‌ ಆಕೆಗೆ ಮಸೇಜ್‌ ಮಾಡಿದ್ದಾರೆ.. ನೀವು ಆರ್‌ಸಿಬಿ ಅಭಿಮಾನಿಯೇ ಎಂದು ಬಾಸ್‌ ಕೇಳಿದ್ದಾರೆ.. ಅದಕ್ಕೆ ನೇಹಾ ಹೌದು, ಯಾಕೆ ಎಂದು ರಿಪ್ಲೈ ಮಾಡಿದ್ದಾಳೆ.. ಆಗ ಬಾಸ್‌ ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದೆ. ಕ್ಯಾಚ್‌ ಬಿಟ್ಟಾಗ ನೀವು ತುಂಬಾ ಬೇಸರದಲ್ಲಿದ್ದಿರಿ ಎಂದು ಮೆಸೇಜ್‌ ಮಾಡಿದ್ದಾರೆ. ಇದನ್ನು ನೋಡಿ ನೇಹಾ ಒಂದು ಕ್ಷಣ ಶಾಕ್‌ ಆಗಿದ್ದಾಳೆ.

ಇದನ್ನೂ ಓದಿ; ಶ್ರೀಗಳು ಆಶೀರ್ವಾದ ಮಾಡಿ, ವಿಭೂತಿ ಇಡ್ತಾರೆ ಅಷ್ಟೇ; ಡಿ.ಕೆ.ಶಿವಕುಮಾರ್‌

ಕೂಲ್‌ ಆಗಿ ತೆಗೆದುಕೊಂಡ ಬಾಸ್‌;

ಸುಳ್ಳು ಹೇಈಹೋಗಿದ್ದರೂ ಬಾಸ್‌ ಕೂಲ್‌ ಆಗಿ ತೆಗೆದುಕೊಂಡಿದ್ದಾರೆ.. ಇದರಿಂದಾಗಿ ನೇಹಾ ಕೂಡಾ ಖೂಷಿಯಾಗಿದ್ದಾಳೆ. ಈ ಬಗ್ಗೆ ಆಕೆಯೇ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾಳೆ.. ಸದ್ಯ ಈ ಪೋಸ್ಟ್​ಗೆ ಸಾವಿರಾರು ಲೈಕ್ಸ್‌ ಬಂದಿವೆ.. ಹಲವಾರು ರೀತಿಯಲ್ಲಿ ಕಮೆಂಟ್ಸ್‌ ಬರ್ತಿವೆ..

 

 

Share Post