HealthLifestyle

ನಾನೇ ಸುರಸುಂದರಾಂಗ, ಹುಡುಗಿಯರೆಲ್ಲಾ ನನ್ನೇ ಪ್ರೀತಿಸ್ತಾರೆ; ಹುಡುಗನೊಬ್ಬನ ವಿಚಿತ್ರ ಭ್ರಮಾ ಕಾಯಿಲೆ!

ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಒಂದು ರೀತಿಯಲ್ಲಿ ಮಾನಸಿಕ ಅಸ್ವಸ್ಥರೇ.. ಪ್ರತಿಯೊಬ್ಬರೋ ಯಾವುದೋ ಒಂದು ವಿಷಯದಲ್ಲಿ ವಿಚಿತ್ರವಾಗಿ ವರ್ತನೆ ತೋರುತ್ತಾರೆ.. ಅದರಲ್ಲೂ ಒಂದಷ್ಟು ವಿಚಿತ್ರ ಮನುಷ್ಯರ ವರ್ತನೆಗಳು ತೀರಾ ಹುಬ್ಬೇರಿಸುವಂತಿರುತ್ತವೆ.. ತಮ್ಮಷ್ಟಕ್ಕೆ ತಾವೇ ಏನೇನೋ ಊಹೆ ಮಾಡಿಕೊಳ್ಳುತ್ತಿರುತ್ತಾರೆ.. ತಾವೇ ಎಲ್ಲರಿಗಿಂತ ಒಳ್ಳೆಯವರು, ತಾವೇ ಎಲ್ಲರಿಗೂ ಸುರಸುಂದರರು, ಎಲ್ಲರಿಗೂ ಶ್ರೇಷ್ಠ ಎಂದು ಹೇಳಿಕೊಳ್ಳುತ್ತಿದ್ದಾರೆ.. ಇದರ ಎಕ್ಸ್‌ಟ್ರೀಮ್‌ ಗೀಳು ಇಲ್ಲೊಬ್ಬ ಯುವಕನಿಗಿದೆ.. ಆತನ ಭ್ರಮೆ ನೋಡಿದರೆ ನೀವು ಮೂರ್ಛೇ ಹೋಗುತ್ತೀರಿ..

ಇದನ್ನೂ ಓದಿ; ಹೋಟೆಲ್‌ ಕೋಣೆ, ಆರು ಯುವಕರು, ಒಂದೇ ಹುಡುಗಿ; ಅಲ್ಲಿ ನಡೆದಿದ್ದೇನು..?

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಯುವಕ;

ಚೀನಾದ 20 ವರ್ಷದ ಯುವಕ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ..  ಆತ ತಾನೊಬ್ಬ ಸುರಸುಂದರಾಂಗ ಎಂದು ತಾವಾಗಲೂ ಫೀಲ್‌ ಆಗುತ್ತಾನೆ.. ಎಲ್ಲಾ ಹುಡುಗಿಯರೂ ನನ್ನನ್ನೇ ಇಷ್ಟಪಡುತ್ತಾರೆ.. ನನ್ನ ಕಾಲೇಜಿನ ಎಲ್ಲಾ ಹುಡುಗಿಯರೂ ನನ್ನ ಹಿಂದೇನೇ ಬೀಳುತ್ತಾರೆ.. ನನ್ನನ್ನೇ ಪ್ರೀತಿ ಮಾಡುತ್ತಿದ್ದಾರೆ ಎಂದು ಆತ ಯಾವಾಗಲೂ ಫೀಲ್‌ ಆಗುತ್ತಿರುತ್ತಾನೆ.. ಇದೊಂದು ಭ್ರಮೆಯಾಗಿದ್ದು, ಆ ಭ್ರಮಾ ಕಾಯಿಲೆಯಲ್ಲೇ ಆ ಯುವಕ ಬದುಕು ಸಾಗಿಸುತ್ತಿದ್ದಾನೆ..

ಇದನ್ನೂ ಓದಿ; ನಿಮ್ಮ ಸಂಗಾತಿಯ ವರ್ತನೆ ಹೀಗಿದ್ದರೆ ಇನ್ನೊಂದು ಅಫೇರ್‌ ಇದೆ ಎಂದರ್ಥ!

ಆತನಿಗಿರೋದು Delusional love disorder ..!;

ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಲಿಯು 20 ವರ್ಷದ ಯುವಕ ವಾಸ ಮಾಡುತ್ತಾನೆ.. ಈತನೇ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರೋದು.. ಈತನಿಗೆ Delusional love disorder ಇದೆ ಎಂದು ವೈದ್ಯರು ಹೇಳಿದ್ದಾರೆ.. ಹೀಗಾಗೀ ಲಿಯು, ಯಾವಾಗಲೂ ಭ್ರಮೆಯಲ್ಲಿರುತ್ತಾನೆ.. ನನಗಿಂತ ಸುರಸುಂದರಾಂಗ ಈ ಜಗತ್ತಿನಲ್ಲಿ ಯಾರೂ ಇಲ್ಲ.. ನಾನೇ ಅತ್ಯಂತ್ಯ ಸುಂದರ ವ್ಯಕ್ತಿ.. ಹೀಗಾಗಿಯೇ ನನ್ನ ಕಾಲೇಜಿನ ಯುವತಿಯರೆಲ್ಲಾ ನನ್ನನ್ನೇ ಲವ್‌ ಮಾಡುತ್ತಿದ್ದಾರೆ ಎಂದು ಆತ ಭಾವಿಸುತ್ತಾನೆ..

ಇದನ್ನೂ ಓದಿ; ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಲ; ದಲಿತ ಮತಗಳು ʻಕೈʼ ಹಿಡಿದರೆ ಬಿಜೆಪಿಗೆ ನಷ್ಟ!

ದಿನದಿಂದ ದಿನಕ್ಕೆ ಮಿತಿಮೀರಿದ ವರ್ತನೆ;

ಲಿಯು ವರ್ತನೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆಯಂತೆ.. ಆತನ ದೈನಂದಿನ ಜೀವನದ ಮೇಲೂ ಆತನ ವರ್ತನೆ ಪರಿಣಾಮ ಬೀರುತ್ತಿದೆ.. ಅದೇ ಭ್ರಮೆಯಲ್ಲಿ ಆತ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು, ಬ್ಯೂಟಿ ಮೇಲೆ ಹೆಚ್ಚು ನಿಗಾ ಇರಿಸಿವುದು, ತಾನು ಸುರಸುಂದರಾಂಗ ಎಂಬ ಭ್ರಮೆಯಲ್ಲೇ ಸರಿಯಾಗಿ ನಿದ್ದೆಯನ್ನೂ ಮಾಡದಿರುವುದು ಮಾಡುತ್ತಾನಂತೆ.. ಇದರಿಂದ ಲಿಯು ಕುಟುಂಬ  ತುಂಬಾನೇ ಚಿಂತೆಗೀಡಾಗಿದೆ. ಇದೀಗ ಆತ ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಶೀಘ್ರದಲ್ಲೇ ಗುಣಮುಖನಾಗುತ್ತಾನೆ ಎಂದು ವೈದ್ಯರು ಹೇಳುತ್ತಿದ್ದಾರೆ..

ಇದನ್ನೂ ಓದಿ; ಈ 5 ಸಲಹೆ ಅನುಸರಿಸಿದರೆ ಗಂಡ-ಹೆಂಡತಿ ನಡುವೆ ಜಗಳವೇ ಆಗಲ್ಲ!

ಮಾರ್ಚ್‌, ಏಪ್ರಿಲ್‌ನಲ್ಲಿ ಈ ಕಾಯಿಲೆ ಹೆಚ್ಚು;

ಈ Delusional love disorder ಎಂಬ ಮಾನಸಿಕ ಅಸ್ವಸ್ಥತೆ ಯಾವಾಗಲೂ  ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಡುವೆ ಸಂಭವಿಸುತ್ತದಂತೆ.. ಯಾಕಂದ್ರೆ ಈ ಸಮಯದಲ್ಲಿ ಹವಾಮಾನದಲ್ಲಿ ಬದಲಾವಣೆಗಳಾಗುತ್ತವೆ. ಈ ಕಾರಣದಿಂದಾಗಿ ಮನುಷ್ಯರ ದೇಹದಲ್ಲಿ ಎಂಡೋಕ್ರೈನ್ ಮಟ್ಟದಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಈ ಸಿಂಡ್ರೋಮ್‌ ಬರುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ.. ಸರಿಯಾಗಿ ನಿದ್ರೆ ಮಾಡದಿರುವುದು ಮತ್ತು ಲೈಂಗಿಕ ವ್ಯಸನಿಯಾಗುವ ಸಾಧ್ಯತೆಗಳು ಇದರಿಂದಾಗಿ ಹೆಚ್ಚಾಗುತ್ತವೆ ಎಂದು ಮನೋತಜ್ಞರು ಹೇಳಿದ್ದಾರೆ.

ಇದನ್ನೂ ಓದಿ; ಸ್ಕೂಟರ್‌ ಮೇಲೆ ಹಾರಿದ ಕೋಲೆ ಬಸವ; ಖ್ಯಾತ ಚೆಫ್‌ ರಘು ಕುಂದಾಪುರ ಬಚಾವ್‌!

 

Share Post