CinemaCrimeHealth

25 ದಿನದಲ್ಲಿ 10 ಕೆಜಿ ತೂಕ ಕಳೆದುಕೊಂಡ ನಟ ದರ್ಶನ್‌..!

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ದರ್ಶನ್‌ ಬಂಧನವಾಗಿ ಒಂದು ತಿಂಗಳಾಗುತ್ತಾ ಬಂದಿದೆ.. ಕಳೆದ 25 ದಿನಗಳಿಂದಲೂ ದರ್ಶನ್‌ ಪೊಲೀಸ್‌ ಕಸ್ಟಡಿ ಹಾಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.. ದಿನವೂ ಪೌಷ್ಠಿಕ ಆಹಾರ, ವ್ಯಾಹಾಮ ಮಾಡುತ್ತಿದ್ದ ದರ್ಶನ್‌ಗೆ ಈಗ ಏನೂ ಸಿಗುತ್ತಿಲ್ಲ.. ಜೊತೆಗೆ ಮಾನಸಿಕವಾಗಿಯೂ ಕುಸಿದಿದ್ದಾರೆ.. ಈ ಹಿನ್ನೆಲೆಯಲ್ಲಿ ಅವರ ತೂಕದಲ್ಲಿ ವ್ಯತ್ಯಾಸ ಆಗಿದೆ ಎಂದು ತಿಳಿದುಬಂದಿದೆ.. ಕಳೆದ 25 ದಿನಗಳಲ್ಲಿ ಅವರು ಸಾಕಷ್ಟು ಸೊರಗಿದ್ದು, 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ..

ಜೈಲಿನಲ್ಲಿ ಇತರ ಕೈದಿಗಳಿಗೆ ನೀಡುವ ಆಹಾರವನ್ನೇ ದರ್ಶನ್‌ ಕೂಡಾ ಸೇವಿಸುತ್ತಿದ್ದಾರೆ.. ಜೊತೆಗೆ ಚಿಂತೆಯಲ್ಲಿ ಮುಳುಗಿದ್ದಾರೆ.. ಈ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಸೊರಗಿದ್ದಾರೆ ಎಂದು ತಿಳಿದುಬಂದಿದೆ.. ಮಾಹಿತಿಗಳ ಪ್ರಕಾರ ದರ್ಶನ್‌ ಅವರು ಬಂಧನವಾದಾಗಿನಿಂದ ಇಲ್ಲಯವರೆಗೆ 10 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ..

 

Share Post