ಸೆಲ್ಫಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ!!
ಯಾರಾದರೂ ಪದೇ ಪದೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಹೋದಲ್ಲೆಲ್ಲಾ ಫೋನ್ ಹೊರೆತೆಗೆದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ ಅವರನ್ನು ಗೇಲಿ ಮಾಡೋದನ್ನು ನೋಡಿರುತ್ತೇನೆ.. ಏನು ಸೆಲ್ಫಿ ಹುಚ್ಚಪ್ಪ ಇವರಿಗೆ ಎಂದು ಬೈಯ್ಯುವುದನ್ನೂ ನೋಡಿದ್ದೇವೆ.. ಇದರ ಮಧ್ಯೆಯೂ ಸೆಲ್ಫಿ ತೆಗೆಯುವವರು ಕಡಿಮೆಯಾಗುತ್ತಿಲ್ಲ.. ಎಲ್ಲಿ ಹೋದರೂ ಅಲ್ಲೊಂದು ಸೆಲ್ಫಿ ಇರಲೇಬೇಕು.. ಆದ್ರೆ ಈ ಸೆಲ್ಫಿ ತೆಗೆಯುವುದು ಆರೋಗ್ಯಕ್ಕೆ ಒಳ್ಳೆಯದಂತೆ..!
ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!
ಸೆಲ್ಫಿ ತೆಗೆಯವುದರಿಂದ ಆರೋಗ್ಯಕ್ಕೆ ಒಳ್ಳೆಯದಂತೆ!;
ಈಗ ಎಲ್ಲಾ ಸ್ಮಾರ್ಟ್ ಫೋನ್‌ಗಳಲ್ಲೂ ಮುಂದಿನ ಕ್ಯಾಮರಾ ಇದೆ.. ಇನ್ನು ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಗಳಿವೆ.. ಹಾಗಿದ್ಮೇಲೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳದೆ ಇದ್ದರೆ ಆಗುತ್ತಾ..? ಎಲ್ಲರೂ ಅದೇ ಕೆಲಸ ಮಾಡೋದು.. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಟ್ರೆಂಡಿಂಗ್ ಆಗಿದೆ. ಆದ್ರೆ ಪದೇ ಪದೇ ಸೆಲ್ಫಿ ತೆಗೆಯುವುದು ಒಂದು ಗೀಳು ಎಂದು ಹೇಳಲಾಗುತ್ತಿತ್ತು.. ಆದ್ರೆ ಈ ರೀತಿ ಸೆಲ್ಫಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ; ಸೀರೆ ಕ್ಯಾನ್ಸರ್; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್!
ಒತ್ತಡದಿಂದ ದೂರವಾಗಬಹುದು..!;
ನೀವು ಕೆಲಸದ ಒತ್ತಡದಲ್ಲೋ, ಬೇರೆ ಇನ್ನೇನೋ ಕಾರಣಕ್ಕೆ ಒತ್ತಡದಲ್ಲಿದ್ದರೆ ಸೆಲ್ಫಿ ತೆಗೆಯುವುದರಿಂದ ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಬಹುದಂತೆ.. ಹೌದು ತಜ್ಞರು ಹೇಳೋ ಪ್ರಕಾರ, ಸೆಲ್ಫಿ ತೆಗೆದುಕೊಳ್ಳುವುದು ಒತ್ತಡ ನಿವಾರಕವಂತೆ. ಯಾರೇ ಆಗಲೀ ಸೆಲ್ಫಿ ತೆಗೆದುಕೊಳ್ಳುವಾಗ ಅವರ ಮನಸು ಹಗುರವಾಗುತ್ತದೆ.. ಮನಸ್ಸಿನಲ್ಲಿ ಸಂತೋಷ ಮೂಡುತ್ತದೆ.. ನಿಮಗೇ ಗೊತ್ತಿಲ್ಲದೆ ನಿಮ್ಮ ಮುಖದಲ್ಲಿ ನಗು ಮೂಡಿರುತ್ತದೆ. ಇನ್ನು ಆ ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತೀರಿ.. ಅದಕ್ಕೆ ಲೈಕ್ಸ್, ಕಮೆಂಟ್ಸ್ ಬರುತ್ತವೆ.. ಇದರಿಂದ ಮತ್ತಷ್ಟು ಮಾನಸಿಕ ನೆಮ್ಮದಿ ಸಿಗುತ್ತದೆ..
ಇದನ್ನೂ ಓದಿ; ಮೊಸರನ್ನು ಹೀಗೆ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು!
ಮುಖದ ಸೌಂದರ್ಯ ಹೆಚ್ಚಿಸುತ್ತದೆ;
ನೀವು ಯಾವಾಗಲೂ ಸೆಲ್ಫಿ ತೆಗೆಯುವವರಾದರೆ ನೀವು ಯಾವಾಗಲೂ ಸುಂದರವಾಗಿರಲು ಪ್ರಯತ್ನಿಸುತ್ತೀರಿ.. ಮುಖದ ಸೌಂದರ್ಯವನ್ನು ಕಾಪಾಡುತ್ತೀರಿ.. ಯಾಕಂದ್ರೆ, ಫೋಟೋ ಚೆನ್ನಾಗಿ ಬರಲಿಲ್ಲ ಅಂದರೆ ನಿಮಗೆ ಬೇಜಾರಾಗುತ್ತದೆ.. ಹೀಗಾಗಿ, ಸೆಲ್ಫಿ ತೆಗೆಯುವವರು ಯಾವಾಗಲೂ ಸೌಂದರ್ಯದ ಕಡೆ ಹೆಚ್ಚಿನ ಗಮನ ಇಟ್ಟಿರುತ್ತಾರೆ.. ಮುಖದ ಆರೋಗ್ಯವನ್ನು ಕಾಪಾಡುತ್ತಿರುತ್ತಾರೆ.. ಯಾವಾಗಲೂ ಉತ್ತಮವಾಗಿ ಮುಖ ಕಾಣುತ್ತಿರುವಂತೆ ನೋಡಿಕೊಳ್ಳುತ್ತಾರೆ.. ಮುಖವನ್ನು ಫ್ರೆಶ್ ಆಗಿ ಇಟ್ಟುಕೊಳ್ಳುತ್ತಾರೆ..
ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?
ಮಾನಸಿಕವಾಗಿ ತುಂಬಾನೆ ಖುಷಿ ತರಿಸುತ್ತದೆ;
ನೀವು ನೋಡಿ ಬೇಕಾದರೆ ಯಾವಾಗಲೂ ಸೆಲ್ಫಿ ತೆಗೆದುಕೊಳ್ಳುವವರು ಮಾನಸಿಕವಾಗಿ ತುಂಬಾ ನೆಮ್ಮದಿಯಾಗಿರುತ್ತಾರೆ.. ಯಾಕಂದ್ರೆ ಅವರು ಎಲ್ಲವನ್ನೂ ಮರೆತು ಹೆಚ್ಚು ಸೆಲ್ಫಿ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ.. ಯಾವಾಗಲೂ ಸೆಲ್ಫಿಯಲ್ಲೇ ಇರುತ್ತಾರೆ.. ಸೆಲ್ಫಿ ತೆಗೆಯುವುದರಲ್ಲೇ ಅವರಿಗೆ ಖುಷಿ ಇರುತ್ತದೆ.. ಸೆಲ್ಫಿಗಾಗಿ ಖುಷಿಯಾಗಿರಬೇಕಾಗುತ್ತದೆ ಕೂಡಾ.. ಬೇಕಾದರೆ ನೀವು ಗಮನಿಸಿ, ಈ ಹಿಂದೆ ಕ್ಯಾಮರಾಗಳಿಂದ ತೆಗೆದು ಫೋಟೋಗಳು ಅಥವಾ ಬೇರೆ ಯಾರಾದರೂ ತೆಗೆದ ಫೋಟೋಗಳನ್ನು ನೋಡಿ ನೀವು ಅದರಲ್ಲಿ ಅಷ್ಟು ಖುಷಿಯಾಗಿ ಇರೋದಿಲ್ಲ.. ಹೀಗಾಗಿಯೇ ಕ್ಯಾಮರಾಮನ್‌ಗಳು ಯಾವಾಗಲೂ ಫೋಟೋ ತೆಗೆಯುವಾಗ ಸ್ಮೈಲ್ ಪ್ಲೀಸ್ ಅನ್ನೋದು.. ಆದ್ರೆ ನಾವೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ನಾವು ಸಂತೋಷದಿಂದಾನೇ ಇರುತ್ತೇವೆ..
ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!
ಸೆಲ್ಫಿ ತೆಗೆಯಬೇಕೆಂದರೆ ಖುಷಿ ಇರಬೇಕು;
ನಮಗೆ ಇಷ್ಟವಾದ್ದನ್ನು ಏನಾದರೂ ಮಾಡಬೇಕು ಅಂದ್ರೆ ಮನಸ್ಸು ಬರಬೇಕು.. ಮನಸ್ಸಿರಬೇಕು ಅಂದ್ರೆ ನಮ್ಮಲ್ಲಿ ಖುಷಿ ಇರರಬೇಕು.. ನಾವು ಜೇಬಿನಿಂದ ಮೊಬೈಲ್ ತೆಗೆದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದೇವೆ ಎಂದು ನಮ್ಮ ಹಗುರವಾಗಿದೆ ಎಂದೇ ಅರ್ಥ.. ನಮ್ಮ ಮನಸ್ಸಿನಲ್ಲಿ ಬೇರೆ ಯಾವ ವಿಚಾರಗಳೂ ಇಲ್ಲ.. ನಮ್ಮ ಮನಸ್ಸು ಸ್ವಚ್ಛವಾಗಿದೆ.. ಹೀಗಾಗಿ ನನಗೆ ನನ್ನ ಸ್ವಂತ ಫೋಟೋ ತೆಗೆಯಲು ಸಮಯ ಸಿಕ್ಕಿದೆ ಎಂದರ್ಥ..
ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?
ರೋಗಗಳ ತಡೆಗಟ್ಟುತ್ತದೆ;
ಸೆಲ್ಫಿ ತೆಗೆಯುವುದರಿಂದ ನಮ್ಮ ಮುಖದಲ್ಲಿ ವ್ಯತ್ಯಾಸವನ್ನು ಯಾವಾಗಲೂ ಗಮನಿಸುತ್ತಿರಬಹುದು.. ನೀವು ಯಾವಾಗಲೂ ಸೆಲ್ಫಿ ಕ್ಲಿಕ್ಕಿಸುವಾಗ, ಯಾವಾಗಲೂ ಫೋಟೋದಲ್ಲಿ ಮುಖ ಸುಕ್ಕುಗಟ್ಟಿದಂತೆ ಕಂಡರೆ, ಕಣ್ಣು ಸರಿ ಯಿಲ್ಲದಂತೆ ಅನಿಸಿದರೆ, ಫೋಟೋದಿಂದಾನೇ ನಮಗೆ ಏನೋ ಆರೋಗ್ಯ ಸಮಸ್ಯೆ ಆಗಿದೆ ಎಂದು ಗೊತ್ತಾಗುತ್ತದೆ. ಆಗ ನಾವು ವೈದ್ಯರನ್ನು ಸಂಪರ್ಕಿಸಿ ನಮ್ಮ ಸಮಸ್ಯೆಯನ್ನು ಪರೀಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ..