Health

ಕಾಫಿ ಹೀಗೆ ಕುಡಿದರೆ ದೇಹದಲ್ಲಿನ ಕೊಬ್ಬು ಬೆಣ್ಣೆಯಂತೆ ಕರಗಿಹೋಗುತ್ತೆ..!

ನಮ್ಮ ಸಮಾಜದಲ್ಲಿ ಕಾಫಿ ಪ್ರಿಯರು ಕೋಟ್ಯಂತರ ಮಂದಿದ್ದಾರೆ.. ಕಾಫಿ ಇಲ್ಲದೆ ಅವರಿಗೆ ದಿನ ಶುರುವಾಗುವುದೇ ಇಲ್ಲ.. ದಿನವೆಲ್ಲಾ ಕಾಫಿ ಸಿಕ್ಕರೂ ಅವರು ಕುಡಿಯುತ್ತಲೇ ಇರುತ್ತಾರೆ.. ಸ್ವಲ್ಪ ಒತ್ತಡ ಹೆಚ್ಚಾಯಿತು ಅಂದ್ರೆ ಕಾಫಿ ಕುಡಿದು ನಿರಾಳರಾಗುತ್ತಾರೆ.. ನೀವೂ ಕೂಡಾ ಕಾಫಿ ಪ್ರಿಯರಾಗಿದ್ದರೆ ನಿಮಗೆ ಈಗ ಒಂದು ಸಿಹಿ ಸುದಿ ಇದೆ.. ಯಾಕಂದ್ರೆ ಬೆಳಗ್ಗೆ ಎದ್ದ ತಕ್ಷಣ ಕುಡಿಯುವ ಒಂದು ಕಪ್‌ ಕಾಫಿ ಅತ್ಯಂತ ಪ್ರಯೋಜನಕಾರಿಯಂತೆ.. ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತಂತೆ.. ಅಷ್ಟೇ ಏಕೆ ದೇಹದಲ್ಲಿನ ಕೊಬ್ಬನ್ನು ಕೂಡಾ ಕರಗಿಸುತ್ತದಂತೆ..!

ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!

ಬ್ಲ್ಯಾಕ್‌ ಕಾಫಿ ಅತ್ಯಂತ ಉಪಯುಕ್ತ ಪಾನೀಯ;

ಕಪ್ಪು ಅಥವಾ ಬ್ಲಾಕ್‌ ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ ಎಂದು ತಜ್ಞರು ಹೇಳುತ್ತಾರೆ.. ಇದರಿಂದಾಗಿ ಕಾಫಿ ನಮಗೆ ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ.. ಇನ್ನು ಮಧುಮೇಹವನ್ನೂ ಬರದಂತೆ ತಡೆಯುತ್ತದಂತೆ.  ಬ್ಲ್ಯಾಕ್‌ ಕಾಫಿ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ, ನಮ್ಮ ದೇಹದ ತೂಕ ನಷ್ಟಕ್ಕೆ ಇದು ತುಂಬಾ ಉಪಯುಕ್ತವಾಗಿದೆ. ಒಂದು ಕಪ್ ಕಪ್ಪು ಕಾಫಿ ಕೇವಲ ಎರಡು ಕ್ಯಾಲೋರಿಗಳನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ..

ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

ತೂಕ ಇಳಿಸಬೇಕು ಅಂದ್ರೆ ಏನು ಮಾಡಬೇಕು..?:

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಕುಡಿಯುವ ಕಾಫಿಗೆ ಸಕ್ಕರೆ, ಮೊಲಾಸಸ್, ಹಾಲು, ಚಾಕೊಲೇಟ್ ಸಿರಪ್ ಅಥವಾ ವೆನಿಲ್ಲಾ ಮುಂತಾದವನ್ನು ಸೇರಿಸಬಾರದು. ಕಾಫಿಯಲ್ಲಿರುವ ಕೆಫೀನ್ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕ್ಯಾಲೊರಿಗಳನ್ನು ಸುಡುವಲ್ಲಿ ಸಹ ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಬ್ಲ್ಯಾಕ್‌ ಕಾಫಿ ಮಾತ್ರ ಕುಡಿಯುವುದು ಒಳ್ಳೆಯದು.

ಇದನ್ನೂ ಓದಿ; ಸೀರೆ ಕ್ಯಾನ್ಸರ್‌; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್‌!

ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ನಿಯಂತ್ರಿಸಬಹುದು!;

ಕಾಫಿಯಲ್ಲಿರುವ ಕೆಫೀನ್ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಹಾಗಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ಇಂದಿನಿಂದ ಬೆಳಗ್ಗೆ ಒಂದು ಕಪ್ ಬ್ಲ್ಯಾಕ್ ಕಾಫಿ ಕುಡಿಯಲು ಆರಂಭಿಸಿ. ಇದರಿಂದ ನಿಮ್ಮ ದೇಹದಲ್ಲಿನ ಕೊಬ್ಬು ಕರಗಲು ಶುರು ಮಾಡುತ್ತದೆ..

ಇದನ್ನೂ ಓದಿ; ಮೊಸರನ್ನು ಹೀಗೆ ಸೇವಿಸಿದರೆ ಕೊಲೆಸ್ಟ್ರಾಲ್‌ ನಿಯಂತ್ರಿಸಬಹುದು!

ಕ್ಲೋರೊಜೆನಿಕ್‌ ಆಮ್ಲದಿಂದ ತೂಕ ಇಳಕೆ;

ಕಾಫಿಯಲ್ಲಿರುವ ಕ್ಲೋರೊಜೆನಿಕ್ ಆಮ್ಲವು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ ವಸ್ತುಗಳನ್ನು ಒಳಗೊಂಡಿದೆ. ಈ ಆಮ್ಲವು ದೇಹವು ಗ್ಲೂಕೋಸ್ ಅನ್ನು ತಯಾರಿಸುವ ವಿಧಾನವನ್ನು ನಿಧಾನಗೊಳಿಸುತ್ತದೆ.

ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!

Share Post