Politics

ಶಿವಮೊಗ್ಗದಲ್ಲಿ 2009ರ ಸೋಲಿನ ಸೇಡು ತೀರಿಸಿಕೊಳ್ತಾರಾ ಬಂಗಾರಪ್ಪ ಅಭಿಮಾನಿಗಳು..?

ಶಿವಮೊಗ್ಗ; ಎಸ್‌.ಬಂಗಾರಪ್ಪ… ಕರ್ನಾಟಕದಲ್ಲಿ ದೊಡ್ಡ ಹೆಸರು ಮಾಡಿದ್ದ ರಾಜಕಾರಣಿ… ವರ್ಣರಂಜಿತ ವ್ಯಕ್ತಿತ್ವದ ಬಂಗಾರಪ್ಪ ಅವರು ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದರು.. ಆದ್ರೆ ಕೊನೆಯ ದಿನಗಳಲ್ಲಿ ಅವರು ರಾಜಕೀಯವಾಗಿ ಹೆಚ್ಚು ಸೋಲು ಕಂಡರು.. ಅದರಲ್ಲೂ ಕೂಡಾ 2009ರಲ್ಲಿ ಶಿವಮೊಗ್ಗದ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಬಂಗಾರಪ್ಪ ಸೋಲು ಕಂಡಿದ್ದರು.. ಅಂದು ಬಂಗಾರಪ್ಪ ವಿರುದ್ಧ ರಾಘವೇಂದ್ರ ಅವರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.. ಅಂದು ಮಧು ಬಂಗಾರಪ್ಪ ಹಾಗೂ ಕುಮಾರ ಬಂಗಾರಪ್ಪ ವೈಮಸ್ಯ ಮರೆತು ಒಟ್ಟಿಗೆ ಬಂಗಾರಪ್ಪ ಅವರ ಪರವಾಗಿ ಕೆಲಸ ಮಾಡಿದ್ದರು.. ಆದರೂ ಕೂಡಾ ಅಪ್ಪನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ.. ಈಗ ಬಂಗಾರಪ್ಪ ಅವರ ಮಗಳು ಗೀತಾ ಶಿವರಾಜ್‌ಕುಮಾರ್‌ ಅಖಾಡದಲ್ಲಿದ್ದಾರೆ.. ಬಂಗಾರಪ್ಪ ಅವರ 2009 ಸೋಲಿನ ಸೇಡು ತೀರಿಸಿಕೊಳ್ಳಲು ಗೀತಾ ಶಿವರಾಜ್‌ಕುಮಾರ್‌ ಪಣ ತೊಟ್ಟಿದ್ದಾರೆ.. ಬಂಗಾರಪ್ಪ ಅಭಿಮಾನಿಗಳು ಕೂಡಾ ಈ ನಿಟ್ಟಿನಲ್ಲಿ ಸೈಲೆಂಟ್‌ ಕಾರ್ಯಾಚರಣೆ ಶುರು ಮಾಡಿದ್ದಾರೆ..

ಇದನ್ನೂ ಓದಿ; ಚಾಮರಾಜನಗರದಲ್ಲಿ 98 ಕೋಟಿ ಮೌಲ್ಯದ ಮದ್ಯ ಪತ್ತೆ; ಯಾರಿಗೆ ಸೇರಿದ್ದು ಗೊತ್ತಾ..?

ಕ್ಷೇತ್ರ ಮರುವಿಂಗಡಣೆ ಬಳಿಕ ಬಂಗಾರಪ್ಪ ಕುಟುಂಬಕ್ಕೆ ಸಮಸ್ಯೆ;

2008ಕ್ಕೂ ಮೊದಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಗಾರಪ್ಪ ಕುಟುಂಬಕ್ಕೆ ಒಳ್ಳೆಯ ವಾತಾವರಣವಿತ್ತು.. ಬಂಗಾರಪ್ಪ ಅವರು ಯಾವುದೇ ಪಾರ್ಟಿಯಿಂದ ಸ್ಪರ್ಧೆ ಮಾಡಿದರೂ ಅನಾಯಾಸವಾಗಿ ಗೆಲ್ಲುತ್ತಿದ್ದರು.. ಯಾರೇ ಎದುರಾಳಿಯಾದರೂ ಬಂಗಾರಪ್ಪ ಅವರು ಸುಲಭವಾಗಿ ಗೆಲುವು ಸಾಧಿಸುತ್ತಿದ್ದರು.. ಆದ್ರೆ 2008ರಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾಯಿತು.. ಈ ವೇಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರಗಳನ್ನು ಸೇರಿಸಲಾಯಿತು.. ಈ ಭಾಗದಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ಬಂಗಾರಪ್ಪ ಕುಟುಂಬಕ್ಕೆ ಮುಳುವಾಗುತ್ತಾ ಬಂತು.. ಆದರೂ ಕೂಡಾ ಬಂಗಾರಪ್ಪ ಫ್ಯಾಮಿಲಿ ನಿರಂತರವಾಗಿ ಬಿಗ್‌ ಫೈಟ್‌ ನೀಡುತ್ತಲೇ ಬಂದಿದೆ.. 2009ರಲ್ಲಿ ಬಂಗಾರಪ್ಪ ಅವರು ಕೇವಲ 50 ಸಾವಿರ ಮತಗಳ ಅಂತರದಿಂದ ಸೋತಿದ್ದರು.. 2018ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿಯೂ ಮಧು ಬಂಗಾರಪ್ಪ ಅವರು ರಾಘವೇಂದ್ರ ವಿರುದ್ಧ ದೊಡ್ಡ ಸೆಣಸಾಟ ನಡೆಸಿದ್ದರು.. ಆದ್ರೆ ಆಗಲೂ ಮಧು ಬಂಗಾರಪ್ಪ ಕೇವಲ 52 ಸಾವಿರ ಮತಗಳ ಅಂತರದಿಂದ ಸೋತಿದ್ದರು.. ಬಂಗಾರಪ್ಪ ಕುಟುಂಬ ಎದುರಿಸಲೆಂದೇ ಯಡಿಯೂರಪ್ಪ ಅವರು ಕ್ಷೇತ್ರ ಮರು ವಿಂಗಡಣೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿರುವ ಕ್ಷೇತ್ರಗಳನ್ನು ಶಿವಮೊಗ್ಗಕ್ಕೆ ಕ್ಷೇತ್ರಕ್ಕೆ ಸೇರಿಸುವಂತೆ ಮಾಡಿದ್ದರು ಎಂಬ ಆರೋಪವೂ ಇದೆ..

ಇದನ್ನೂ ಓದಿ; ತೀವ್ರ ಜ್ವರದಿಂದ ಬಳಲುತ್ತಿರುವ ಪವನ್‌ ಕಲ್ಯಾಣ್‌; ಪ್ರಚಾರ ಮುಂದೂಡಿಕೆ

ಸೇಡು ತೀರಿಸಿಕೊಳ್ಳಲು ಬಂಗಾರಪ್ಪ ಅಭಿಮಾನಿಗಳ ಒಗ್ಗಟ್ಟು;

2009ರಲ್ಲಿ ಬಂಗಾರಪ್ಪ ಅವರು ರಾಘವೇಂದ್ರ ಅವರ ವಿರುದ್ಧ ಸೋಲು ಕಂಡಿದ್ದರು.. ಈ ಸೋಲನ್ನು ಬಂಗಾರಪ್ಪ ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ.. ಹೀಗಾಗಿ ಸೂಕ್ತ ಸಮಯಕ್ಕೆ ಕಾಯುತ್ತಿದ್ದರು.. ಈ ಬಾರಿ ಉತ್ತಮ ವಾತಾವರಣ ನಿರ್ಮಾಣವಾಗುತ್ತಿರುವಂತೆ ಕಾಣುತ್ತಿದೆ.. ಸೈಲೆಂಟಾಗಿ ಬಂಗಾರಪ್ಪ ಅಭಿಮಾನಿಗಳು ಒಗ್ಗಟ್ಟಾಗುತ್ತಿದೆ.. ಬಂಗಾರಪ್ಪ ಅವರ ಸೋಲಿನ ಸೇಡನ್ನು ಈ ಬಾರಿ ತೀರಿಸಿಕೊಳ್ಳಲೇಬೇಕೆಂದು ಮೌನವಾಗಿಯೇ ಸಂಘಟನೆಯಲ್ಲಿ ತೊಡಗಿದ್ದಾರೆ ಎನ್ನಲಾಗ್ತಿದೆ.. ಅದ್ರಲ್ಲೂ ಕೂಡಾ ಸೊರಬ, ಸಾಗರ, ತೀರ್ಥಹಳ್ಳಿ, ಬೈಂದೂರು ಮುಂತಾದ ಕಡೆ ಈಡಿಗರು, ಬಿಲ್ಲವರು ಹೆಚ್ಚಿದ್ದಾರೆ.. ಗೀತಾ ಶಿವಮರಾಜ್‌ಕುಮಾರ್‌ ಅವರು ಇದೇ ಸಮುದಾಯಕ್ಕೆ ಸೇರಿದವರಾಗಿದ್ದು, ಈಡಿಗರನ್ನು ಒಗ್ಗಟ್ಟು ಮಾಡಿದರೆ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ.. ಯಾಕಂದ್ರೆ ಬಂಗಾರಪ್ಪ ಕುಟುಂಬದಕ್ಕೆ ದಲಿತರು, ಮುಸಲ್ಮಾನರು ಹಾಗೂ ಇತರೆ ಹಿಂದುಳಿದ ವರ್ಗದವ ಸಪೋರ್ಟ್‌ ಮೊದಲಿನಿಂದಲೂ ಇದೆ.. ಆದ್ರೆ ಈಡಿಗ ಮತಗಳ ಒಡೆದು ಹಂಚಿಹೋಗುತ್ತಿದ್ದವು.. ಈ ಕಾರಣದಿಂದ ಬಂಗಾರಪ್ಪ ಕುಟುಂಬಕ್ಕೆ ಇತ್ತೀಚೆಗೆ ಸೋಲುಗಳು ಹೆಚ್ಚಾಗುತ್ತಿದ್ದವು.. ಆದ್ರೆ ಈ ಬಾರಿ ಹಾಗಾಗದಂತೆ ಬಂಗಾರಪ್ಪ ಅಭಿಮಾನಿಗಳು ಸೈಲೆಂಟಾಗಿ ಕಾರ್ಯಾಚರಣೆ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಯುಗಾದಿ ನಂತರ ಈ ಐದು ರಾಶಿಗಳವರಿಗೆ ಮುಟ್ಟಿದ್ದೆಲ್ಲಾ ಚಿನ್ನ..

ಸೋಲಿನ ಸೇಡಿನ ಬಗ್ಗೆ ಮಾತನಾಡುತ್ತಿರುವ ಮಧು ಬಂಗಾರಪ್ಪ;

ಇನ್ನು ಸಚಿವ ಮಧು ಬಂಗಾರಪ್ಪ ಅವರು ಈ ಬಾರಿ ಹೆಚ್ಚು ಕಾರ್ಯಪ್ರವೃತ್ತರಾಗಿದ್ದಾರೆ.. ಹೇಗಾದರೂ ಮಾಡಿ ಸಹೋದರಿ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದಾರೆ.. ಮಧು ಬಂಗಾರಪ್ಪ ಅವರು ಸಚಿವರಾಗಿರುವುದರಿಂದ ಜನ ಬೆಂಬಲ ಕೂಡಾ ಸಾಕಷ್ಟು ಸಿಗುತ್ತಿದೆ.. ಇನ್ನೊಂದೆಡೆ ಮಧು ಬಂಗಾರಪ್ಪ ಅವರು ಪದೇ ಪದೇ ಬಂಗಾರಪ್ಪ ಅವರ 2009ರ ಸೋಲಿನ ಬಗ್ಗೆ ಮಾತನಾಡುತ್ತಿದ್ದಾರೆ.. ಅಂದಿನ ಸೋಲಿನ ಸೋಲಿನ ಸೇಡು ತೀರಿಸಿಕೊಳ್ಳುವುದು ಬೇಡವೇ ಎಂದು ಮಧು ಬಂಗಾರಪ್ಪ ಪ್ರಶ್ನಿಸುತ್ತಿದ್ದಾರೆ.. ಬಂಗಾರಪ್ಪ ಅಭಿಮಾನಿಗಳಿಗೆ ಪದೇ ಪದೇ 2009ರ ಸೋಲಿನ ಬಗ್ಗೆ ಪ್ರಸ್ತಾಪಿಸುತ್ತಾ, ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.. ಇದು ವರ್ಕೌಟ್‌ ಆಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ..

ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!

ಕುಮಾರ ಬಂಗಾರಪ್ಪರಿಂದಲೂ ಬೆಂಬಲ ಸಾಧ್ಯತೆ;

2009ರಲ್ಲಿ ವೈಮನಸ್ಯ ಮರೆತು ಮಧು ಬಂಗಾರಪ್ಪ ಹಾಗೂ ಕುಮಾರ ಬಂಗಾರಪ್ಪ ಒಂದಾಗಿ ಬಂಗಾರಪ್ಪ ಪರ ಕೆಲಸ ಮಾಡಿದ್ದರು.. ಈ ಬಾರಿ ಕುಮಾರ ಬಂಗಾರಪ್ಪ ಅವರೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಅವಕಾಶವಿತ್ತು.. ಆದ್ರೆ ಕೊನೇ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ.. ಆದರೂ ಕೂಡಾ ಗೀತಾ ಶಿವರಾಜ್‌ಕುಮಾರ್‌ ಘೋಷಣೆಯಾದ ಮೇಲೆ ಕುಮಾರ ಬಂಗಾರಪ್ಪ ಅವರು ಸೈಲೆಂಟ್‌ ಆಗಿದ್ದಾರೆ.. ಬಿಜೆಪಿಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿವೆ.. ಇಂಡೈರೆಕ್ಟಾಗಿ ಕುಮಾರ ಬಂಗಾರಪ್ಪ ಅವರು ಕೂಡಾ ಗೀತಾ ಶಿವರಾಜ್‌ಕುಮಾರ್‌ ಅವರ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಕೊನೆ ಕ್ಷಣದಲ್ಲಿ ಕುಮಾರ್‌ ಬಂಗಾರಪ್ಪ ಅವರು ಕಾಂಗ್ರೆಸ್‌ಗೆ ಬಂದರೂ ಅಚ್ಚರಿ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.. ಆದ್ರೆ ಕುಮಾರ್‌ ಬಂಗಾರಪ್ಪ ಇನ್ನೂ ಈ ಬಗ್ಗೆ ಯಾವುದೇ ಕ್ಲೂ ಕೊಟ್ಟಿಲ್ಲ.. ಮಧು ಬಂಗಾರಪ್ಪ ಕೂಡಾ ಈ ಬಗ್ಗೆ ಎಲ್ಲೂ ಮಾತನಾಡಿಲ್ಲ.. ಆದ್ರೆ ಬಂಗಾರಪ್ಪ ಅಭಿಮಾನಿಗಳ ಮಾತ್ರ ಸೋಲಿನ ಸೇಡು ತೀರಿಸಿಕೊಳ್ಳುವುದಕ್ಕಾದರೂ ಬಂಗಾರಪ್ಪ ಅವರ ಮಕ್ಕಳು ಒಂದಾಗಬೇಕು ಎಂದು ಹೇಳುತ್ತಿದ್ದಾರೆ..

ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

ರಾಘವೇಂದ್ರದ ಅತಿಯಾದ ಆತ್ಮವಿಶ್ವಾಸ ಮುಳುವಾಗುತ್ತಾ..?

ಇನ್ನು ಮೂರು ಬಾರಿ ಸಂಸದರಾಗಿರುವ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.. ಇದರಿಂದಾಗಿ ಆರಾಮಾಗಿ ಗೆಲ್ಲುತ್ತೇನೆ ಎಂದುಕೊಂಡಿದ್ದಾರೆ.. ಆದ್ರೆ ಒಮ್ಮೊಮ್ಮೆ ಮಾಡಿದ ಕೆಲಸಗಳು ಕೂಡಾ ಕೈಹಿಡಿಯುವುದಿಲ್ಲ.. ಹೀಗಾಗಿ ರಾಘವೇಂದ್ರ ಅವರ ಅತಿಯಾದ ಆತ್ಮವಿಶ್ವಾಸ ಮುಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಚನ್ನಪಟ್ಟಣದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

ಡಮ್ಮಿ ಕ್ಯಾಂಡಿಡೇಟ್‌ ಮಾತು ಗೀತಾಗೆ ವರವಾಗುತ್ತಾ..?

ಗೀತಾ ಶಿವರಾಜ್‌ಕುಮಾರ್‌ ಅವರನ್ನು ಡಮ್ಮಿ ಕ್ಯಾಂಡಿಡೇಟ್‌ ಎಂದು ಬಿಜೆಪಿ ನಾಯಕರು ಹಾಗೂ ಈಶ್ವರಪ್ಪ ಹೇಳುತ್ತಿದ್ದಾರೆ.. ಬಿಜೆಪಿ ನಾಯಕರು ಹಾಗೆ ಹೇಳಿದಷ್ಟೂ ಬಹುಸಂಖ್ಯಾತ ಈಡಿಗರು ಹಾಗೂ ಮುಸ್ಲಿ ಹಾಗೂ ಹಿಂದುಳಿದ ವರ್ಗಗಳ ಬಂಗಾರಪ್ಪ ಅಭಿಮಾನಿಗಳು ಒಂದಾಗುತ್ತಾರೆ ಎಂದು ಹೇಳಲಾಗುತ್ತಿದೆ.. ಈ ಹೇಳಿಕೆಯ ಕಾರಣದಿಂದಲೇ ಹಲವು ಬಂಗಾರಪ್ಪ ಅಭಿಮಾನಿಗಳ ಈ ಚುನಾವಣೆಯನ್ನು ಚಾಲೆಂಜಾಗಿ ತೆಗೆದುಕೊಂಡಿದ್ದಾರೆ.. ಇನ್ನು ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆಯೂ ಕೂಡಾ ಗೀತಾ ಶಿವರಾಜ್‌ಕುಮಾರ್‌ ಅವರಿಗೆ ಅನುಕೂಲ ಮಾಡಿಕೊಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ..

Share Post