DistrictsPolitics

ಒಬ್ಬರಿಗೆ ಒಂದೇ ಕ್ಷೇತ್ರ; ಫೆ.2ಕ್ಕೆ ಪಟ್ಟಿ ರಿಲೀಸ್‌; ಡಿಕೆಶಿ

ಬಾಗಲಕೋಟೆ: ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿಕೊಂಡಿದ್ದು ಅಂತಿಮ ನಿರ್ಧಾರವನ್ನ ಹೈಕಮಾಂಡ್ ಗೆ ಬಿಟ್ಟಿದ್ದಾರೆ. ಈ ನಡುವೆ ವರುಣಾದಲ್ಲೂ ಸ್ಪರ್ಧಿಸುಂತೆ ಸಿದ್ದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಬ್ಬರಿಗೆ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಎಂದಿದ್ದಾರೆ.

ಈ ಬಗ್ಗೆ ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಬ್ಬರು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲಾ ಎಂದಿದ್ದಾರೆ. ಸಿದ್ದರಾಮಯ್ಯನವರು ಸಹ ಒಂದೇ ಅರ್ಜಿಯನ್ನ ಕೊಟ್ಟಿದ್ದು ಯಾವ ಕ್ಷೇತ್ರ ಎಂದು ತಿಳಿಸಿಲ್ಲ ಎಂದರು. ಫೆ. 2 ರಂದು ಸಬೆ ನಡೆಸಿ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನ ಪ್ರಕಟಿಸಲಾಗುತ್ತದೆ ಎಂದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ನಾನು ಎರಡು ಕಡೆ ಸ್ಪರ್ಧಿಸುತ್ತೆನೆ ಎಂದು ಎಲ್ಲೂ ಹೇಳಿಲ್ಲ, ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟವಾಗಿ ತಿಳಿಸಿದ್ದೆನೆ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನೇನೂ ಅಲೆಮಾರಿಯಲ್ಲ ಈಗಾಗಲೇ ವರುಣಾದಲ್ಲಿ ಎರಡು ಭಾರಿ ಸ್ಪರ್ಧಿಸಿದ್ದೇನೆ. ಚಾಮುಂಡೇಶ್ವರಿಯಲ್ಲಿ ಎಂಟು ಭಾರಿ ಸ್ಪರ್ಧಿಸಿದ್ದೇನೆ. ನನ್ನ ಹುಟ್ಟೂರು ವರುಣಾ ಕ್ಷೇತ್ರದಲ್ಲಿದೆ. ಅದಕ್ಕಾಗಿ ನಾನು ಚಾಮುಂಡೇಶ್ವರಿ ಬಿಟ್ಟು ಹೋಗಿ ವರುಣಾದಲ್ಲಿ ಸ್ಪರ್ಧಿಸಿದೆ. ಮತ್ತೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದೆ. ಆದ್ರೆ ಜನ ಸೋಲಿಸಿದರು. ಬದಾಮಿಯಲಿ ಸ್ಪರ್ಧೆ ಮಾಡಿದೆ ಜನ ಗೆಲ್ಲಿಸಿದರು.

ಎಲ್ಲಿ ಅಲೆಮಾರಿ ತರ ಕ್ಷೇತ್ರ ಹುಡುಕಿ ಕೊಂಡು ಹೋಗಿದ್ದೆ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಬಾದಾಮಿ ದೂರ ಇರೋದ್ರಿಂದ ಕ್ಷೇತ್ರಕ್ಕೆ ಯಾವಾಗಲೂ ಹೋಗಲಿಕ್ಕೆ ಆಗ್ತಿಲ್ಲ ಎಂದು ಹತ್ತಿರದಲ್ಲಿರುವ ಕ್ಷೇತ್ರದಲ್ಲೆ ಸ್ಪರ್ಧಿಸೋಣ ಎಂದು ಕೊಂಡಿದ್ದೆ. ಕೋಲಾರದವರು ಕರೆದಿದ್ದಾರೆ, ಹೈಕಮಾಂಡ್ ಒಪ್ಪಿದ್ರೆ ಸ್ಪರ್ಧೆ ಮಾಡ್ತಿನಿ ಎಂದರು.

ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ಮಾತ್ರ ಲೀಡ್ರಾ….? ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ಅವರು ಲೀಡ್ರಲ್ವಾ…? ನರೇಂದ್ರ ಮೋದಿಯವರು ಎರಡು ಕಡೆ ಸ್ಪರ್ಧಿಸಿದ್ರೆ ಅವರು ದೊಡ್ಡ ಲೀಡ್ರು ಸ್ಪರ್ಧಿಸಬಹುದು. ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸಂಗಿಲ್ವಾ..? ಇದೆಲ್ಲಾ ಬಿಡಬೇಕು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

 

Share Post