ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!
ಮುಖ ಮನಸ್ಸಿಗೆ ಕನ್ನಡಿ ಎಂದು ಹೇಳುತ್ತಾರೆ. ಮುಖ ನೋಡಿ ಮನಸ್ಸನ್ನು ಓದಬಹುದು ಎಂದು ಕೆಲವರು ಹೇಳುತ್ತಾರೆ. ಆದರೆ ಪಾದಗಳನ್ನು ನೋಡಿ ದೇಹದಲ್ಲಿನ ಕಾಯಿಲೆಗಳ ಬಗ್ಗೆ ಹೇಳಬಹುದು ಎಂದು ನಿಮಗೆ ತಿಳಿದಿದೆಯೇ?.. ಅನೇಕರು ದೇಹದ ಇತರ ಭಾಗಗಳನ್ನು ಮುಖದಷ್ಟೇ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ. ಆದರೆ ಪಾದಗಳನ್ನು ಹೆಚ್ಚು ನಿರ್ಲಕ್ಷಿಸುತ್ತಾರೆ. ಹೆಚ್ಚಿನ ಜನರು ಇದನ್ನೇ ಮಾಡೋದು.. ಅನೇಕ ಜನರು ತಮ್ಮ ಪಾದಗಳ ಕಡೆ ಗಮನವನ್ನೇ ಕೊಡುವುದಿಲ್ಲ. ಆದರೆ ದೇಹದಲ್ಲಿರುವ ಕಾಯಿಲೆಯ ಕುರುಹುಗಳನ್ನು ಪಾದಗಳನ್ನು ನೋಡಿ ಕಂಡುಹಿಡಿಯಬಹುದು..
ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?
ಗಾಯವಾದರೆ ಬೇಗ ವಾಸಿಯಾಗಲ್ಲ;
ಕೆಲವರಿಗೆ ಕಾಲಿಗೆ ಗಾಯವಾದರೆ ಹಲವಾರು ದಿನಗಳವರೆಗೆ ಅದು ವಾಸಿಯಾಗುವುದಿಲ್ಲ. ಯಾವುದೇ ಔಷಧಗಳನ್ನು ಬಳಸಿದರೂ ಸೋಂಕು ಹೆಚ್ಚಾಗುತ್ತಲೇ ಇರುತ್ತದೆ.. ನಿಮಗೂ ಹೀಗೇ ಆಗುತ್ತಿದ್ದರೆ, ನಿಮಗೆ ಮಧುಮೇಹವಿದೆ ಎಂದರ್ಥ. ಇದರರ್ಥ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಜಾಸ್ತಿಯಾಗಿದೆ. ಇನ್ನು ಪಾದಗಳಲ್ಲಿ ತುರಿಕೆ ಕಂಡುಬಂದರೆ, ದೇಹದಲ್ಲಿ ಶಿಲೀಂಧ್ರಗಳ ಸೋಂಕು ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ..
ಇದನ್ನೂ ಓದಿ; ಸೀರೆ ಕ್ಯಾನ್ಸರ್; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್!
ಪಾದಗಳು ಊದಿಕೊಳ್ಳುವುದು;
ಕೆಲವರಿಗೆ ಪಾದಗಳು ಊದಿಕೊಳ್ಳುತ್ತಿರುತ್ತವೆ.. ನಿಮ್ಮ ಪಾದಗಳು ಎಲ್ಲಾ ಕಾಲದಲ್ಲೂ ತಂಪಾಗಿರುತ್ತವೆಯೇ..? ಹಾಗಾದ್ರೆ ಅದನ್ನು ನಿರ್ಲಕ್ಷ್ಯ ಮಾಡೋದಕ್ಕೆ ಹೋಗಬೇಡಿ.. ಇದು ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ಕಾಲು ನೋವಿಗೆ ವಯಸ್ಸು ಮಾತ್ರ ಕಾರಣವಲ್ಲ. ಯುವಕರಲ್ಲೂ ಈ ಸಮಸ್ಯೆ ಕಂಡು ಬರುತ್ತಿದೆ. ನೀವು ಆಗಾಗ್ಗೆ ಕಾಲು ಮತ್ತು ಪಾದದ ನೋವಿನಿಂದ ಬಳಲುತ್ತಿದ್ದರೆ ಯೂರಿಕ್ ಆಸಿಡ್ ಮಟ್ಟವನ್ನು ಪರೀಕ್ಷೆ ಮಾಡಿಸುವುದು ಒಳ್ಳೆಯದು.
ಇದನ್ನೂ ಓದಿ; ಮೊಸರನ್ನು ಹೀಗೆ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು!
ನಿರಂತರವಾಗಿ ಕಾಲು ನೋವು;
ನಿಮಗೆ ನಿರಂತರವಾಗಿ ಕಾಲು ನೋವು ಕಾಣಿಸಿಕೊಳ್ಳುತ್ತಿದೆಯೇ..? ಹಾಗಾದ್ರೆ ಅದು ಹೈಪೋಥೈರಾಯ್ಡಿಸಮ್ ನ ಲಕ್ಷಣವಾಗಿರಬಹುದು. ದೇಹದಲ್ಲಿನ ಥೈರಾಯ್ಡ್ ಮಟ್ಟವು ತೊಂದರೆಗೊಳಗಾದಾಗ ಇದೇ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಈ ರೀತಿಯ ಸಮಸ್ಯೆ ನಿಮಗೆ ಎದುರಾದರೆ ಕೂಡಲೇ ವೈದ್ಯರ ಬಳಿ ಹೋಗಿ ತೋರಿಸುವುದು ಒಳ್ಳೆಯದು..
ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!
ಯಾವಾಗಲೂ ಪಾದಗಳು ತಣ್ಣಗಿರುತ್ತವಾ..?;
ನಿಮ್ಮ ಪಾದಗಳು ಯಾವಾಗಲೂ ತಣ್ಣಗಿರುತ್ತವೆಯೇ? ಈ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ, ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳಿ. ರಕ್ತಹೀನತೆ ಕಾಲುಗಳಲ್ಲಿ ರಕ್ತ ಪರಿಚಲನೆಯನ್ನು ಕಡಿಮೆ ಮಾಡುತ್ತದೆ. ಆಗ ಪಾದಗಳು ತಣ್ಣಗಾಗುತ್ತವೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ..
ಇನ್ನು ನಾವು ಹೇಳಿದ ಸಮಸ್ಯೆಗಳಿದ್ದರೆ ನೀವೇ ರೋಗ ನಿರ್ಣಯ ಮಾಡುವುದು ಬೇಡ.. ವೈದ್ಯರಿಗೆ ತೋರಿಸಿ ಅವರು ದೃಢಪಡಿಸಿದರೆ ಮಾತ್ರ ನಿರ್ಧಾರಕ್ಕೆ ಬನ್ನಿ.. ವೈದ್ಯರು ಹೇಳಿದಂತೆ ಮಾತ್ರ ನಡೆದುಕೊಳ್ಳಿ.. ಇದು ಮಾಹಿತಿಗಾಗಿ ನೀಡಿದ ವರದಿ ಅಷ್ಟೇ..
ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್!