Loksabha; 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಟಿಕೆಟ್ ಗೊಂದಲ ಯಾಕೆ..?
ಬೆಂಗಳೂರು; ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.. ಉಳಿದ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿದೆ.. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದು, ನಾಯಕರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಸರತ್ತು ನಡೆಸುತ್ತಿದ್ದಾರೆ.. ಹಾಗಾದ್ರೆ ಕ್ಷೇತ್ರವಾರು ಸಮಸ್ಯೆಗೆ ಕಾರಣಗಳೇನು..? ಯಾರಿಗೆ ಟಿಕೆಟ್ ಸಿಗಬಹುದು ನೋಡೋಣ..
ಇದನ್ನೂ ಓದಿ; ರಸ್ತೆಯಲ್ಲೇ ಮಹಿಳೆಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ!
ಕೋಲಾರದಲ್ಲಿ ಅಳಿಯನಿಗೆ ಟಿಕೆಟ್ ಕೇಳ್ತಿರುವ ಮುನಿಯಪ್ಪ;
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಗೆದ್ದುಕೊಂಡು ಬರುತ್ತಿದ್ದ ಸಚಿವ ಕೆ.ಹೆಚ್.ಮುನಿಯಪ್ಪ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು.. ಕಾಂಗ್ರೆಸ್‌ನಲ್ಲೇ ಇದ್ದ ಬಣವೊಂದು ಮುನಿಯಪ್ಪ ಸೋಲಿಗೆ ಕಾರಣವಾಗಿತ್ತು.. ಈಗ ಮುನಿಯಪ್ಪ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ.. ಆದ್ರೆ ಅವರೀಗ, ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.. ಆದ್ರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಬಣ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಕೋಲಾರದಲ್ಲಿ ಕಗ್ಗಂಟಾಗಿದೆ.. ಕೊನೆಗೆ ರಮೇಶ್ ಕುಮಾರ್ ಬಣವನ್ನು ಸಮಾಧಾನಪಡಿಸಿ ಚಿಕ್ಕಪೆದ್ದಣ್ಣಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; ಬರೀ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿದರೆ ಏನಾಗುತ್ತೆ ಗೊತ್ತಾ..?
ಚಾಮರಾಜನಗರದಲ್ಲಿ ಸುನಿಲ್ ಬೋಸ್‌ಗೆ ಟಿಕೆಟ್ ಕೊಡಿಸಲು ಕಸರತ್ತು!
ಇನ್ನು ಚಾಮರಾಜ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸಚಿವ ಹೆಚ್.ಸಿ.ಮಹಾದೇವಪ್ಪರನ್ನು ಕಣಕ್ಕಿಳಿಯುವಂತೆ ನಾಯಕರು ಹೇಳುತ್ತಿದ್ದಾರೆ.. ಆದ್ರೆ ಮಹಾದೇವಪ್ಪ ಅವರು ನನಗೆ ಬದಲು ನನ್ನ ಮಗ ಸುನೀಲ್ ಬೋಸ್‌ಗೆ ಟಿಕೆಟ್ ನೀಡಿ ನಾನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದಾರೆ.. ಇದರಿಂದಾಗಿ ಗೊಂದಲ ಉಂಟಾಗಿದೆ… ಇದಲ್ಲದೆ ಇನ್ನೂ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ… ಆರ್.ಧ್ರುವನಾರಾಯಣ್ ಮಗನಿಗೇ ಟಿಕೆಟ್ ಕೊಟ್ಟರೆ ಗೆಲ್ಲುವುದು ಸುಲಭ ಎಂಬ ಮಾತುಗಳೂ ಇವೆ.. ಆದ್ರೆ ಹೈಕಮಾಂಡ್ ಅಳೆದೂತೂಗಿ ಸುನಿಲ್ ಬೋಸ್‌ಗೇ ಟಿಕೆಟ್ ನೀಡುವ ಸಾಧ್ಯತೆ ಇದೆ..
ಇದನ್ನೂ ಓದಿ; ಗನ್ ಹಿಡಿದುಬಂದ ಆಗಂತುಕನಿಗೆ ಬುದ್ಧಿ ಕಲಿಸಿದ ತಾಯಿ, ಮಗಳು!
ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಫೈಟ್;
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಎರಡು ಬಾರಿ ಸಂಸದರಾಗಿದ್ದರು.. ಕಳೆದ ಬಾರಿ ಸೋಲನುಭವಿಸಿದ್ದರು.. ಇದೀಗ ಮತ್ತೆ ಅವರೇ ಟಿಕೆಟ್ ಕೇಳುತ್ತಿದ್ದಾರೆ… ಆದ್ರೆ ಈ ಬಾರಿ ಅವರಿಗೆ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿಲ್ಲ.. ಅದಕ್ಕೆ ಬದಲಾಗಿದೆ.. ರಕ್ಷಾ ರಾಮಯ್ಯ ಹಾಗೂ ಗೌರಿಬಿದನೂರಿನ ಶಿವಶಂಕರ ರೆಡ್ಡಿ ಟಿಕೆಟ್ ಕೇಳುತ್ತಿದ್ದಾರೆ.. ಆದ್ರೆ ರಕ್ಷಾ ರಾಮಯ್ಯ ಹಾಗೂ ವೀರಪ್ಪ ಮೊಯ್ಲಿ ಅವರ ನಡುವೆ ಫೈಟ್ ಇದೆ… ವೀರಪ್ಪ ಮೊಯ್ಲಿ ಹೈಕಮಾಂಡ್‌ಗೆ ಹತ್ತಿರವಿದ್ದಾರೆ.. ನನಗೆ ಇದು ಕೊನೆಯ ಚುನಾವಣೆ. ಈ ಬಾರಿ ಸ್ಪರ್ಧಿಸಿದೇ ಹೋದರೆ ರಾಜಕೀಯವಾಗಿ ಏನೂ ಇಲ್ಲದಂತಾಗುತ್ತೇನೆ. ಹೀಗಾಗಿ ಟಿಕೆಟ್ ಕೊಡಿ ಎಂದು ಅವರು ಕೇಳುತ್ತಿದ್ದಾರೆ ಎನ್ನಲಾಗಿದೆ.. ಆದ್ರೆ ಈ ಬಾರಿ ಯುವಕರಿಗೆ ಹೆಚ್ಚು ಮಣೆ ಹಾಕುತ್ತಿರುವುದರಿಂದ ವೀರಪ್ಪ ಮೊಯ್ಲಿಯವರಿಗೆ ಸಮಾಧಾನ ಮಾಡಿ, ರಕ್ಷಾ ರಾಮಯ್ಯಗೆ ಟಿಕೆಟ್ ನೀಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಅರೆಸ್ಟ್
ಬಳ್ಳಾರಿ ಕ್ಷೇತ್ರದಲ್ಲಿ ಈ.ತುಕಾರಾಂಗೆ ಟಿಕೆಟ್ ಬಹುತೇಕ ಖಚಿತ;
ಇನ್ನು ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಕಣಕ್ಕಿಳಿದಿದ್ದಾರೆ.. ಶ್ರೀರಾಮುಲು ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿ ಬೇಕು.. ಅದಕ್ಕಾಗಿ ಹುಡುಕಾಟ ನಡೆದಿದೆ.. ವಿ.ಎಸ್.ಉಗ್ರಪ್ಪ ಹಾಗೂ ಸಚಿವ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು.. ಆದ್ರೆ ಕಾಂಗ್ರೆಸ್ ನಾಯಕರಿಗೆ ಇವರಿಬ್ಬರ ಬಗ್ಗೆ ಅಷ್ಟೊಂದು ವಿಶ್ವಾಸವಿಲ್ಲ.. ಸಂಡೂರು ಹಾಲಿ ಶಾಸಕ ಈ.ತುಕಾರಾಂ ಅಥವ ಸಚಿವ ನಾಗೇಂದ್ರ ಅವರನ್ನು ಕಣಕ್ಕಿಳಿಸೋದಕ್ಕೆ ನಾಯಕರು ಒಲವು ತೋರಿಸಿದ್ದರು.. ಇದೀಗ ಶಾಸಕ ಈ ತುಕಾರಾಂ ಅವರನ್ನು ಒಪ್ಪಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.. ಈ ತುಕಾರಂ ಅವರು ಸಚಿವ ಸಂತೋಷ್ ಲಾಡ್ ಅವರ ಪರಮಾಪ್ತರೂ ಆಗಿರುವುದರಿಂದ ಶ್ರೀರಾಮುಲು ವಿರುದ್ಧ ಹೋರಾಡಲು ಸೂಕ್ತ ಅಭ್ಯರ್ಥಿ ಎಂದು ಹೇಳಲಾಗಿದೆ.. ಒಂದು ವೇಳೆ ತುಕಾರಂ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ, ಸಂಡೂರು ವಿಧಾನಸಭಾ ಕ್ಷೇತ್ರವನ್ನು ಅವರ ಪುತ್ರಿ ಸೌಪರ್ಣಿಕಾಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆಯಾಗಿದೆ ಎಂದು ತಿಳಿದುಬಂದಿದೆ.
ತುಕಾರಾಂ ಅವರು ಮ್ಯಾಸ ನಾಯಕ ಸಮುದಾಯಕ್ಕೆ ಸೇರಿದವರು. ಸಂಡೂರು, ಕೂಡ್ಲಿಗಿ ಭಾಗದಲ್ಲಿ ಈ ಸಮುದಾಯದ ಮತಗಳು ಗರಿಷ್ಠ ಸಂಖ್ಯೆಯಲ್ಲಿವೆ. ಈ ನೆಲದ ಮೂಲ ನಿವಾಸಿಗಳು ಎಂಬ ಖ್ಯಾತಿಯೂ ಅವರಿಗೆ ಇದೆ. ಹೀಗಾಗಿ ತುಕಾರಾಂಗೆ ಟಿಕೆಟ್ ಕೊಟ್ಟರೆ, ಆಂಧ್ರದಿಂದ ವಲಸೆ ಬಂದ ಬಿ.ಶ್ರೀರಾಮುಲುಗೆ ಠಕ್ಕರ್ ಕೊಡಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು.
ಇದನ್ನೂ ಓದಿ; ಒಟ್ಟು 24 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್; 12 ಕಡೆ ಮಕ್ಕಳು, ಸಂಬಂಧಿಕರಿಗೇ ಮಣೆ!