ಬಿಡದಿ ತೋಟದ ಮನೆಯಲ್ಲಿ 25 ತಲೆ ಬರುಡೆ ಪತ್ತೆ; ಎಲ್ಲಿಂದ ಬಂದವು ಇವು..?
ರಾಮನಗರ; ಅದು ತೋಟದ ಮನೆ.. ಯಾವಾಗಲೂ ವ್ಯಕ್ತಿಗಳು ಬಂದು ಹೋಗುತ್ತಾರೆ.. ಹೀಗಾಗಿ ಅದು ಪಾಳುಬಿದ್ದ ಮನೆ ಅಂತೂ ಅಲ್ಲ… ದೆವ್ವದ ಮನೆ ಅಂತೂ ಅಲ್ವೇ ಅಲ್ಲ… ಯಾಕಂದ್ರೆ ಈ ಮನೆ ಅಂದ್ರೆ ಯಾರಿಗೂ ಭಯವೂ ಇಲ್ಲ.. ಆದ್ರೆ ಇನ್ಮೇಲಿನಿಂದ ಈ ಮನೆ ಬಳಿಗೆ ಹೋಗೋದಕ್ಕೆ ಜನಕ್ಕೆ ಭಯ, ಭೀತಿ ಶುರುವಾಗಬಹುದು.. ಯಾಕಂದ್ರೆ ಈ ಮನೆಯಲ್ಲಿ ಬರೋಬ್ಬರಿ 25 ತಲೆಬರುಡೆಗಳು ಸಿಕ್ಕಿವೆ.. ಎಲ್ಲವೂ ಮನುಷ್ಯರದ್ದೇ..!
ಇದನ್ನೂ ಓದಿ;Breaking; ನಾಳೆಯೇ ಚುನಾವಣಾ ಬಾಂಡ್ ವಿವರ ಬೇಕು; ಎಸ್ಬಿಐಗೆ ಸುಪ್ರೀಂ ಖಡಕ್ ಸೂಚನೆ
ತೋಟದ ಮನೆಯಲ್ಲಿ 25 ತಲೆಬುರುಡೆಗಳು!;
ತೋಟದ ಮನೆಯಲ್ಲಿ 25 ತಲೆಬುರುಡೆಗಳು!; ಬೆಂಗಳೂರು ಹೊರವಲಯದ ಬಿಡದಿ ಬಳಿ ಜೋಗನಹಳ್ಳಿ ಗ್ರಾಮದ ಸಮೀಪ ತೋಟದ ಮನೆ ಇದೆ.. ಈ ಮನೆಗೆ ಕಾಲಿಟ್ಟಾಕ್ಷಣ ಸಿಗೋದು ಮನುಷ್ಯರ ತಲೆ ಬುರುಡೆಗಳು.. ಅದೂ ಒಂದೆರಡಲ್ಲ.. ಬರೋಬ್ಬರಿ 25 ತಲೆ ಬರುಡೆಗಳಿವೆ.. ಇವನ್ನು ಸ್ಮಶಾಸನದಿಂದ ತಂದರೋ, ನರಬಲಿ ಕೊಟ್ಟು ತಂದಿದ್ದೋ ಗೊತ್ತಿಲ್ಲ.. ಆದ್ರೆ ವ್ಯಕ್ತಿಯೊಬ್ಬ ಬರೋಬ್ಬರಿ 25 ಮನುಷ್ಯರ ತಲೆಬರುಡೆಯನ್ನು ಸಂಗ್ರಹಿಸಿದ್ದಾನೆ.. ಇದನ್ನು ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ; Loksabha; ರಾಜ್ಯಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ; ಮಾರ್ಚ್ 15-19ರವರೆಗೆ ಭರ್ಜರಿ ಕ್ಯಾಂಪೇನ್
ಬಲರಾಮ್ ಎಂಬಾತನಿಂದ ತಲೆಬುರುಡೆ ಸಂಗ್ರಹ;
ಬಲರಾಮ್ ಎಂಬಾತನಿಂದ ತಲೆಬುರುಡೆ ಸಂಗ್ರಹ; ಬಲರಾಮ್ ಎಂಬಾತ ಈ ಭಾಗದಲ್ಲಿ ಮಾಟ-ಮಂತ್ರಿ ಮಾಡುತ್ತಾನೆ.. ಅದಕ್ಕಾಗಿ ಮನುಷ್ಯರ ತಲೆ ಬುರುಡೆ ಸಂಗ್ರಹ ಮಾಡಿದ್ದಾನೆ ಮಾಡಿದ್ದಾನೆ.. ಇದನ್ನು ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಒದಗಿಸಿದ್ದರು.. ಅದರಂತೆ ಪೊಲೀಸರು ದಾಖಲಿ ನಡೆಸಿದಾಗ ಮನೆಯಲ್ಲಿ ಸುಮಾರು 25 ತಲೆ ಬುರುಡೆಗಳು ಇರುವುದು ಪತ್ತೆಯಾಗಿದೆ. ಈ ತಲೆಬುರುಡೆಗಳನ್ನು ಜೋಡಿಸಿಕೊಂಡು ಬಲರಾಮ್ ಏನೇನೋ ಪೂಜೆಗಳನ್ನು ಮಾಡಿದ್ದಾನೆ. ಇದನ್ನು ನೋಡಿ ಪೊಲೀಸರೇ ಅವಾಕ್ ಆಗಿದ್ದಾರೆ. ಕೂಡಾಲೇ ಪೊಲೀಸರು ಬಲರಾಮ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ;ಬೆಂಗ್ಳೂರಲ್ಲಿ ಪ್ರಭಾಸ್-ಅಲ್ಲು ಅರ್ಜುನ್ ಫ್ಯಾನ್ಸ್ ಕಿತ್ತಾಟ; ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ!
ಶಿವರಾತ್ರಿ ಅಮಾವಾಸ್ಯೆಗೆ ಸ್ಮಶಾನದಲ್ಲಿ ಪೂಜೆ;
ಶಿವರಾತ್ರಿ ಅಮಾವಾಸ್ಯೆಗೆ ಸ್ಮಶಾನದಲ್ಲಿ ಪೂಜೆ; ಮಹಾಶಿವರಾತ್ರಿ ಮುಗಿದ ಮೇಲೆ ಭಾನುವಾರ ಅಮಾವಾಸ್ಯೆ ಬಂದಿತ್ತು.. ಈ ವೇಳೆ ಜೋಗನಹಳ್ಳಿ ಗ್ರಾಮದ ಬಲರಾಮ್ ಎಂಬಾತ ಸ್ಮಶಾನದಲ್ಲಿ ಪೂಜೆ ಮಾಡಿದ್ದಾನೆ. ಇದನ್ನು ಗ್ರಾಮಸ್ಥರು ಗಮನಿಸಿದ್ದಾರೆ.. ಈ ವೇಳೆ ಆತ ತಲೆ ಬುರುಡೆಗಳನ್ನು ಇಟ್ಟು ಪೂಜೆ ಮಾಡಿರುವುದನ್ನು ಕೂಡಾ ಜನ ನೋಡಿದ್ದಾರೆ. ಇದರಿಂದಾಗಿ ಆತಂಕಗೊಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗಿ ಮನುಷ್ಯರ ತಲೆಬುರುಡೆಗಳು ಸಿಕ್ಕಿವೆ. ವಿಚಾರಣೆ ನಡೆಸಿದಾಗ ನಮ್ಮ ತಾತನ ಕಾಲದಿಂದಲೂ ನಾವು ಪೂಜೆ ಮಾಡುತ್ತಿದ್ದೇವೆ. ಅಂದಿನಿಂದಲೂ ನಮ್ಮ ಬಳಿ ಬುರುಡೆಗಳು ಇವೆ ಎಂದು ಬಲರಾಮ್ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; ಮೈಸೂರು-ಕೊಡಗು ಲೋಕಸಭಾ; ಶೃಂಗೇರಿಗೆ ಭೇಟಿ ನೀಡಿದ ಯದುವೀರ್!