Politics

11 ಲಕ್ಷ ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ!; ನೋಟಾಗೆ ಎರಡನೇ ಸ್ಥಾನ!

ಇಂದೋರ್‌; ಇಂದೋರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದರಾಗಿದ್ದ ಶಂಕರ್ ಲಾಲ್ವಾನಿ ಅವರು ಬರೋಬ್ಬರಿ 11 ಲಕ್ಷ 75 ಸಾವಿರದ 092 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.. ಇದು ದೇಶದಲ್ಲೇ ಅತಿಹೆಚ್ಚು ಅಂತರದ ಗೆಲುವಾಗಿದೆ.. ಆದ್ರೆ ಇವರ ಪ್ರತಿಸ್ಪರ್ಧಿ ಅಭ್ಯರ್ಥಿ ಬೇರೆ ಯಾರೂ ಅಲ್ಲ ನೋಟಾ.. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಬಿಜೆಪಿಗೆ ಬೆಂಬಲ ಕೊಟ್ಟಿದ್ದರು.. ಹೀಗಾಗಿ ಕಾಂಗ್ರೆಸ್‌ ನೋಟಾಗೆ ಮತ ಹಾಕುವಂತೆ ಪ್ರಚಾರ ಮಾಡಿತ್ತು.. ಇಲ್ಲಿ ನೋಟಾಗೆ ಬರೋಬ್ಬರಿ 2 ಲಕ್ಷ 18 ಸಾವಿರ ಮತಗಳು ಬಂದಿವೆ.. ಹೀಗಾಗಿ ನೋಟಾ ವಿರುದ್ಧ ಬಿಜೆಪಿ ಅಭ್ಯರ್ಥಿ 11 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಹೇಳಬಹುದು..

ಗಾಂಧಿನಗರ ಕ್ಷೇತ್ರದಿಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ 7.44 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದರೆ, ಇವರನ್ನು ಮೀರಿಸಿ ಶಂಕರ್ ಲಾಲ್ವಾನಿ ಅವರು ಬರೋಬ್ಬರಿ 11 ಲಕ್ಷ 75 ಸಾವಿರದ 092 ಮತಗಳ ಅಂತರದಿಂದ ಇಂದೋರ್‌ನಲ್ಲಿ ಗೆಲುವು ಸಾಧಿಸಿದ್ದಾರೆ.. ದೇಶದ ಲೋಕಸಭಾ ಚುನಾವಣೆ ಇತಿಹಾಸದಲ್ಲೇ ಇದು ಅತಿದೊಡ್ಡ ಅಂತರದ ಗೆಲುವಾಗಿದೆ.. ಇಲ್ಲಿ ಟಿಕೆಟ್‌ ಪಡೆದಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೊನೇ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದು, ಬಿಜೆಪಿಗೆ ಬೆಂಬಲ ಕೊಟ್ಟಿದ್ದರು.. ಹೀಗಾಗಿ ಕಾಂಗ್ರೆಸ್‌ ವಿಧಿ ಇಲ್ಲದೆ ನೋಟಾಗೆ ಮತ ಹಾಕುವಂತೆ ತಮ್ಮ ಕಾರ್ಯಕರ್ತರನ್ನು ಕೋರಿತ್ತು.. ಹೀಗಾಗಿ ನೋಟಾಗೆ 2 ಲಕ್ಷಕ್ಕೂ ಹೆಚ್ಚು ಮತಗಳು ಬಂದಿವೆ..

 

Share Post