InternationalUncategorized

ಭಾರತದ ಕರಾವಳಿಯಲ್ಲಿ ಪಾಕ್‌ ದೋಣಿ; 10 ಮಂದಿ ಪಾಕಿಸ್ತಾನಿಯರ ಅರೆಸ್ಟ್‌

ಅಹಮದಾಬಾದ್‌: ಹತ್ತು ಮಂದಿ ಪಾಕಿಸ್ತಾನದ ಪ್ರಜೆಗಳಿದ್ದ ದೋಣಿಯನ್ನು ಗುಜರಾತ್‌ ಕರಾವಳಿ ಪ್ರದೇಶದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಭಾರತದ ಕರಾವಳಿ ಪ್ರವೇಶಿಸಿದ್ದ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ದೋಣಿಯಲ್ಲಿದ್ದ ಹತ್ತು ಮಂದಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಕರಾವಳಿ ಕಾವಲು ಪಡೆಯ ಅಂಕಿತ್‌ ಎಂಬ ಹಡಗು ಅಂಕಿತ್‌ ಗುಜರಾತ್‌ನ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಪಾಕಿಸ್ತಾನದ ಯಾಸಿನ್‌ ಎಂಬ ದೋಣಿ ಪತ್ತೆಯಾಗಿದೆ. ಆ ದೋಣಿ ಯಾಕೆ ಭಾರತದ ಕರಾವಳಿ ವ್ಯಾಪ್ತಿಗೆ ಬಂತು ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಈ ಹಿಂದೆ ಅಂದರೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲೂ 12 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಇತ್ತೀಚೆಗೆ ಭಾರಿ ಪ್ರಮಾಣದ ಹೆರಾಯಿನ್‌ ತುಂಬಿದ್ದ ದೋಣಿಯೊಂದು ಸಿಕ್ಕಿಬಿದ್ದಿತ್ತು. 2009 ರಲ್ಲಿ ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಉಗ್ರರು ದೋಣಿಯ ಮೂಲಕವೇ ಭಾರತ ಪ್ರವೇಶಿಸಿದ್ದರು. ಹೀಗಾಗಿ, ದೋಣಿಯಲ್ಲಿ ಬಂದವರು ಯಾರು..? ಎಂಬುದರ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ.

Share Post