NationalUncategorized

ಹಳಿತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್:‌ ಪ್ರಯಾಣಿಕರು ಸೇಫ್

ಗೋವಾ: ಗೋವಾದ ವಾಸ್ಕೊದಿಂದ ಹೌರಾಗೆ ಹೋಗುತ್ತಿದ್ದ ಅಮರಾವತಿ ಎಕ್ಸ್​ಪ್ರೆಸ್ ರೈಲು ಜನವರಿ 18 ರಂದು  ದೂಧ್​ಸಾಗರ-ಕಾರಂಜೋಲ್ ಮಾರ್ಗದಲ್ಲಿ ಹಳಿತಪ್ಪಿದೆ. ಬೆಳಗ್ಗೆ 6.30ಕ್ಕೆ ವಾಸ್ಕೋದಿಂದ ಹೊರಟಿದ್ದ ರೈಲು ಕಾರಂಜೋಲ್‌ ಬಳಿ ಎಂಜಿಬ್‌ ಮುಂಭಾಗದ ಗಾಲಿಗಳು ಹಳಿ ತಪ್ಪಿವೆ. ದುರಂತದಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹಳಿ ತಪ್ಪಿದ ವಿಚಾರ ತಿಳಿದ ಕೂಡಲೇ ಲೋಕೊಪೈಲೆಟ್‌ ಗಮನಕ್ಕೆ ಬರುತ್ತಿದ್ದಂತೆ ರೈಲನ್ನು ನಿಲ್ಲಿಸಿದ್ದಾರೆ.

ಪರಿಹಾರ ರೈಲುಗಳು ಸ್ಥಳ ತಲುಪಲು ತುಂಬಾ ಸಮಯಬೇಕಾಯಿತು. ಅಷ್ಟರಲ್ಲಿ ಪರಿಹಾರ ರೈಲುಗಳನ್ನು ಕರೆಸಿ ಪ್ರಯಾಣಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಯಿತು. ಬೇರೊಂದು ಎಂಜಿನ್‌ ಬಂದ ಮೇಲೆ ಅಮರಾಔತಿ ಎಕ್ಸ್‌ಪ್ರೆಸ್‌ ಮತ್ತೆ ಸಂಚಾರವನ್ನು ಪ್ರಾರಂಭ ಮಾಡಿತು. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಕ್ಷೇಮವಾಗಿದ್ದು, ಯಾರಿಗೂ ಏನೂ ತೊಂದರೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಹಳಿ ತಪ್ಪಿದ್ದರಿಂದ ಆ ಮಾರ್ಗದಲ್ಲಿ ಸಂಚರಿಸಬೇಕಿದ್ದ ಎಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕ್ಯಾಸಲ್​ರಾಕ್ ಮತ್ತು ಹುಬ್ಬಳ್ಳಿಯಿಂದ ಅಪಘಾತ ಪರಿಹಾರ ರೈಲುಗಳನ್ನು ಕರೆಸಿ ಹಳಿತಪ್ಪಿದ್ದ ಎಂಜಿನ್​ ಅನ್ನು ಮತ್ತೆ ಹಳಿಯ ಮೇಲೆ ಕೂರಿಸುವಲ್ಲಿ ಯಶಸ್ವಿಯಾದ್ರು. ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ನೇತೃತ್ವದ ತಂಡ  ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದ ಉಸ್ತುವಾರಿಯನ್ನು ವಹಿಸಿದ್ರು.

Share Post