Districts

ವಿಜಯಪುರದಲ್ಲಿ ಹೆಚ್ಚಾದ ಕೊರೋನಾ ಸೋಂಕು

ವಿಜಯಪುರ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೋನಾ ಸ್ಫೋಟಗೊಂಡಿದೆ. ಜಿಲ್ಲೆಯಲ್ಲಿ ೪೮ ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇವರೆಗೆ ಕೊರೋನಾ ಸೋಂಕಿತರ ಸಂಖ್ಯೆ ೧೪೫ಕ್ಕೆ ಏರಿಕೆ ಕಂಡಿದೆ. ಇದ್ದರಿಂದ ಅಲ್ಲಿನ ಜನರು ಭಯಭೀತರಾಗಿದ್ದಾರೆ.ಸದ್ಯ 15 ಮಂದಿ ಸೋಂಕಿತರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂಳಿದ 130 ಜನರಿಗೆ ಹೋಮ್ ಐಸೋಲೇಶನ್ ಇರಿಸಲಾಗಿದೆ. ಇನ್ನು
9 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ನಗರದಲ್ಲೇ 21 ಜನರಿಗೆ ಕೋವಿಡ್‌ ದೃಢಪಟ್ಟಿದೆ.
ಇತ್ತ ಕೂಡಗಿ NTPCಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಇಂದು 18 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮುಂಬೈಯಿಂದ ನಗರಕ್ಕೆ ಜನರು ಬಂದಿದ್ದರು. ಈ ವೇಳೆ ಕೊರೋನಾ ಆರ್ ಟಿಪಿಸಿಆರ್‌ ಟೆಸ್ಟ್‌ ಮಾಡಲಾಗಿತ್ತು. ಅದರಲ್ಲಿ ೬ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೀಗ ನಗರದಲ್ಲಿ ಅವರಿಂದಲೇ ಕೊರೋನಾ ಸೋಂಕು ಹರಡುತ್ತಿದೆ ಎಂದು ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದಾರೆ.

 

Share Post