International

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸ್ತಾರಂತೆ ಟ್ರಂಪ್‌

ಪಾಮ್ ಬೀಚ್; ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತ್ತೆ ಸ್ಪರ್ಧೆ ಮಾಡಲು ಡೊನಾಲ್ಡ್‌ ಟ್ರಂಪ್‌ ನಿರ್ಧಾರ ಮಾಡಿದ್ದಾರೆ. 2024ರಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿ ಅವರು ಹೇಳಿಕೊಂಡಿದ್ದಾರೆ.

2020ರಲ್ಲಿ ನಡೆದ ಚುನಾವಣೆಯಲ್ಲಿ ಜೋ ಬೈಡೆನ್‌ ವಿರುದ್ಧ ಟ್ರಂಪ್‌ ಸೋಲನುಭವಿಸಿದ್ದರು. ಆದ್ರೆ ಆ ಫಲಿತಾಂಶವನ್ನು ಟ್ರಂಪ್‌ ಒಪ್ಪಿಕೊಂಡಿರಲಿಲ್ಲ. ಇತ್ತ ಮುಂಬರುವ ಚುನಾವಣೆಯೊಲ್ಲಿ ಡೆಮಾಕ್ರಟಿಕ್‌ ಪಕ್ಷದಿಂದ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರೇ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಪಬ್ಲಿಕನ್‌ ಪಾರ್ಟಿಯಿಂದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಟ್ರಂಪ್‌ ಘೋಷಣೆ ಮಾಡಿದ್ದಾರೆ.

ಈಗಿನಿಂದಲೇ ಟ್ರಂಪ್‌ ಪ್ರಚಾರ ಆರಂಭಿಸಿದ್ದು,  ‘ಮೇಕ್ ಅಮೆರಿಕ ಗ್ರೇಟ್ ಅಗೇನ್‘ ಎನ್ನುವ ಘೋಷಣೆಯನ್ನೂ ಮೊಳಗಿಸಿದ್ದಾರೆ.

Share Post