ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುತ್ತಂತೆ ಬೆಳ್ಳುಳ್ಳಿ!
ಅನೇಕ ಜನರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.. ಹಲವಾರು ಔಷಧಿಗಳನ್ನು ತೆಗೆದುಕೊಂಡರೂ ಸಮಸ್ಯೆ ನಿವಾರಣೆಯಾಗುವುದಿಲ್ಲ.. ಇಂತಹವರಿಗೆ ಮನೆಮದ್ದುಗಳು ಒಮ್ಮೊಮ್ಮೆ ಕೆಲಸ ಮಾಡುತ್ತವೆ.. ಮಾಹಿತಿ ಪ್ರಕಾರ ಹಸಿ ಬೆಳ್ಳುಳ್ಳಿ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದಂತೆ.. ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ಹಸಿ ಬೆಳ್ಳುಳ್ಳಿಯನ್ನು ಜಗಿಯುವ ಅಭ್ಯಾಸ ಮಾಡಿಕೊಳ್ಳಬೇಕು.. ಹೀಗೆ ಮಾಡುವುದರಿಂದ ಹಲವಾರು ಆರೋಗ್ಯಕರ ಲಾಭಗಳಾಗಲಿವೆ ಎಂದು ಹೇಳಲಾಗಿದೆ..
ಬೆಳ್ಳುಳ್ಳಿಯಲ್ಲಿರುವ ‘ಅಲಿಸಿನ್’ ಎಂಬ ಅಂಶ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಬೆಳ್ಳುಳ್ಳಿ ರಂಜಕ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳನ್ನು ಹೊಂದಿದೆ.. ಪ್ರತಿದಿನ ಇದರ ಒಂದು ಎಸಳನ್ನು ಬೆಳಗ್ಗೆ ಜಗಿಯುವ ಅಭ್ಯಾಸ ಮಾಡೊಕೊಳ್ಳಬೇಕು. ಇದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಹಸಿ ಬೆಳ್ಳುಳ್ಳಿ ಉತ್ತಮ ಜೀರ್ಣಕ್ರಿಯೆಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಗ್ಯಾಸ್, ಹೊಟ್ಟೆಯುಬ್ಬರ, ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ. ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅವು ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ.
ಈ ಹಸಿ ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಸೆಲೆನಿಯಮ್ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದೆ. ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.