CrimeDistricts

ಮಾದುವೆಯಾಗ್ತೀನಿ ಅಂತ ಪ್ರೀತಿಸಿದ; 18 ಲಕ್ಷ ರೂ. ಪೀಕಿ ಕೈಕೊಟ್ಟ ಪೊಲೀಸಪ್ಪ!

ಕಾರವಾರ; ಯುವತಿಯೊಬ್ಬಳ ಜೊತೆ ಪ್ರೀತಿಸುವ ನಾಟಕವಾಡಿ, ಮದುವೆಯಾಗುತ್ತೇನೆಂದು ನಂಬಿಸಿದ್ದ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬ ಈಗ ಕೈಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ.. ಸಾಲದೆಂಬಂತೆ ಹುಡುಗಿ ಕಡೆಯಿಂದ ಸುಮಾರು 18 ಲಕ್ಷ ರೂಪಾಯಿ ಪೀಕಿ ವಂಚನೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಈ ಘಟನೆ ನಡೆದಿದ್ದು, ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ..

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸುಚಿತ್ರ ಎಂಬ ಯುವತಿಯೇ ದೂರು ಕೊಟ್ಟವಳು.. ಮುಂಡಗೋಡು ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ಗಿರೀಶ್‌ ಲವ್‌ ಮಾಡುತ್ತೇನೆ.. ಮದುವೆಯಾಗುತ್ತೇನೆ ಎಂದು ನಂಬಿಸಿದ್ದನಂತೆ.. ನಂತರ ಕಷ್ಟ ಇದೆ ಎಂದು ಹೇಳಿಕೊಂಡು ಯುವತಿಯಿಂದ 18 ಲಕ್ಷ ರೂಪಾಯಿ ಪಡೆದಿದ್ದನಂತೆ.. ಆದ್ರೆ ಮದುವೆಯೂ ಆಗದೆ, ಹಣವೂ ವಾಪಸ್‌ ಕೊಡದೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ..

ಸುಚಿತ್ರ ಮೊದಲಿಗೆ ಎಸ್‌ಪಿ ವಿಷ್ಣವರ್ದನ್‌ ಅವರಿಗೆ ದೂರು ಕೊಟ್ಟಿದ್ದರು.. ಈ ವೇಳೆ ಆರೋಪಿಯನ್ನು ಕರೆಸಿ ಮಾತನಾಡಿದ್ದಾರೆ.. ಹಣ ತೆಗೆದುಕೊಂಡಿರುವ ನಿಜ.. ವಾಪಸ್‌ ಕೊಡುತ್ತೇನೆ ಎಂದು ಹೇಳಿದ್ದಳಂತೆ.. ಆದ್ರೆ ಹಣ ಇದುವರೆಗೂ ಕೊಟ್ಟಿಲ್ಲ.. ಜೊತೆಗೆ ಮದುವೆಯಾಗದೇ ವಂಚಿಸಿದ್ದಾನೆಂದು ಸುಚಿತ್ರ ಕಳೆದ ರಾತ್ರಿ ಮುಂಡಗೋಡು ಪೊಲೀಸ್‌ ಠಾಣೆಯಲ್ಲಿ 420ರ ಅಡಿ ಕೇಸ್‌ ದಾಖಲಿಸಿದ್ದಾರೆ..

 

Share Post