ಕೋಚಿಂಗ್ ಸೆಂಟರ್‌ನಲ್ಲಿ ಕುಸಿದುಬಿದ್ದು ಯುವಕ ಸಾವು!
ಮಧ್ಯಪ್ರದೇಶ; ಕೋಚಿಂಗ್ ಸೆಂಟರ್ ನಲ್ಲಿ ಪಾಠ ಕೇಳುತ್ತಾ ಕುಳಿತಿದ್ದ ಯುವಕನೋರ್ವನಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.
ಲೋಕಸೇವಾ ಆಯೋಗದ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದ ಯುವಕ ಸಾವನ್ನಪ್ಪಿದ್ದಾನೆ. ಈ ದೃಶ್ಯ ಕೋಚಿಂಗ್ ಸೆಂಟರ್‌ನಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವಕ ಕುಸಿದುಬಿದ್ದಾಗ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೃತ ಯುವಕನಿಗೆ 18 ವರ್ಷ ವಯಸ್ಸಾಗಿತ್ತೆಂದು ತಿಳಿದುಬಂದಿದೆ.