ತಡವಾಗಿ ಮನೆಗೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಗುಂಡು ಹಾರಿಸಿದ ಸಹೋದರ
ಬೆಂಗಳೂರು: ಹೊರಹೋಗಿದ್ದ ತಮ್ಮ ತಡವಾಗಿ ಮನೆಗೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಆತ ಸಿಟ್ಟಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಬಿಬಿಎಂಪಿ ಮಾಜಿ ಸದಸ್ಯ ಸಮೀವುಲ್ಲಾ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಮೀವುಲ್ಲಾ ಅವರ ಕಿರಿಯ ಮಗ ಸಲ್ಮಾನ್ ಭಾನುವಾರ ಮನೆಯಿಂದ ಹೊರಹೋದವನು, ಸೋಮವಾರ ಬೆಳಗಿನ ಜಾವ ಮನೆಗೆ ಬಂದಿದ್ದ. ಇದನ್ನು ಹಿರಿಯ ಸಹೋದರ ಅಮಿನ್ ದಾದ ಪ್ರಶ್ನೆ ಮಾಡಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಸಲ್ಮಾನ್, ಗಾಳಿಯಲ್ಲಿ ಗುಂಡು ಹಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸಹೋದರರಿಬ್ಬರ ನಡುವೆ ಜೋರು ಜಗಳ ನಡೆದಿದೆ. ಇದನ್ನು ನೋಡಿದ ಸ್ನೇಹಿತ ಫೈಜಲ್ ಜಗಳ ಬಿಡಿಸಲು ಬಂದಿದ್ದಾನೆ. ಈ ವೇಳೆ ಫೈಸಲ್‌ಗೆ ಗಾಯಗಳಾಗಿವೆ. ಅಣ್ಣ ಬುದ್ಧ ಹೇಳಿದ್ದಕ್ಕೆ ಕೆರಳಿದ ಸಲ್ಮಾನ್ ಪಿಸ್ತೂಲ್ನಿಂದ ಮೂರು ಬಾರಿ ಫೈರ್ ಮಾಡಿದ್ದಾನೆ. ಮೊದಲ ಗುಂಡು ಗೋಡೆಗೆ, ಎರಡನೇ ಗುಂಡು ಮನೆಯ ಛಾವಣಿಗೆ ತುಗಲಿದೆ. ಮೂರನೆ ಗುಂಡು ತನ್ನ ತಲೆಗೆ ಇಟ್ಟುಕೊಂಡು ಶೂಟ್ ಮಾಡಿಕೊಳ್ಳಲು ಸಲ್ಮಾನ್ ಮುಂದಾಗಿದ್ದಾನೆ. ಈ ವೇಳೆ ಸ್ನೇಹಿತ ಫೈಜಲ್ ಬಿಡಿಸಲು ಬಂದಿದ್ದು, ಪಿಸ್ತೂಲ್‌ನ್ನು ಬೇರೆ ಕಡೆ ತಿರುಗಿಸಲು ಹೋಗಿದ್ದಾರೆ. ಈ ವೇಳೆ ಫೈಸಲ್ ಬಲಗೈಗೆ ಗುಂಡು ಬಿದ್ದಿದೆ. ಸದ್ಯ ಫೈಜಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಲ್ಮಾನ್ನನ್ನ ವಶಕ್ಕೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.