ನಕಲಿ ನಂದಿನಿ ತುಪ್ಪಕ್ಕೆ ಬ್ರೇಕ್: ಗ್ರಾಹಕರಿಗೆ ನೆಮ್ಮದಿ
ಬೆಂಗಳೂರು: ನಂದಿನಿ ತುಪ್ಪದ ಹೆಸರಲ್ಲಿ ಕೆಲವು ಕಿಡಿಗೇಡಿಗಳು ನಕಲಿ ತುಪಪ್ವನನು ತಯಾರಿಸಿ ಗ್ರಾಹಕರನ್ನು ವಂಚಿಸುವ ಕಾರ್ಯವನ್ನು ತಡೆಯಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಎಲ್ಲಾ ನಂದಿನಿ ಉತ್ಪಾದನೆ ಮೇಲೆ ಕ್ಯೂಏರ್ ಕೋಡ್ ಮತ್ತು ಹೊಲೊಗ್ರಾಂ ಅಳವಡಿಸಲು ಈಗಾಗಲೇ ತೀರ್ಮಾನ ಮಾಡಿದೆ. ಮೊನ್ನೆ ಮೈಸೂರಿನ ಹೊಸಹುಂಡಿಯ ಗೋದಾಮಿನಲ್ಲಿ ನಕಲಿ ತುಪ್ಪಕ್ಕೆ ನಂದಿನಿ ಪ್ಯಾಕೆಟ್ ಬಳಸಿ ಗ್ರಾಹಕರನ್ನು ವಂಚಿಸುವ ಕೆಲಸ ನಡೆದಿತ್ತು.
ಈ ವಿಚಾರವನ್ನು ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡು ಗೋದಾಮಿನಲ್ಲಿ ತುಪ್ಪಕ್ಕೆ ಬಳಸುತ್ತಿದ್ದ ಡಾಲ್ಡಾ, ಪಾಮಾಯಿಲ್, ಕಲರ್, ಇತರೆ ವಸ್ತಗಳನ್ನು ವಶಪಡಿಸಿಕೊಂಡು ತನಿಖಾಗಾಘಿ ಲ್ಯಾಬ್‌ಗೆ ಕಳುಹಿಸಲಾಯಿತು. ಜೊತೆಗೆ ಮಾರುಕಟ್ಟೆಯಲ್ಲಿ ಸಿಗುವ ನಂದಿನಿ ತುಪ್ಪದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದೆಲ್ಲವನ್ನು ತಪ್ಪಿಸಲು ಕೆಎಂಎಫ್ ಕ್ಯೂಆರ್ ಕೋಡ್ ಅನ್ನು ಪ್ಯಾಕೆಟ್ ಮೇಲೆ ಬಳಸಲು ಸಮ್ಮತಿ ಸೂಚಿಸಿದೆ. ಅಲ್ಲದೆ ನಂದಿನಿ ತುಪ್ಪದ ಬಗ್ಗೆ ಅನುಮಾನವಿದ್ದಲ್ಲಿ ಗ್ರಾಹಕರು ಅದನ್ನು ಕೆಎಂಎಫ್ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುವುದಕ್ಕೆ ಸೂಚಿಸಿದೆ.