National

ಹೈದರಾಬಾದ್‌ಗೆ ಭಾಗ್ಯನಗರ ಎಂಬ ಹೆಸರಿಡಲು ಮತ್ತೆ ಜೋರಾಯ್ತು ಕೂಗು

ಹೈದರಾಬಾದ್: ಜನವರಿ ಮೊದಲ ವಾರದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ೩ ದಿನಗಳ ಸಮನ್ವಯ ಸಭೆ ಕರೆದಿದೆ. ಇದರಲ್ಲಿ ಹೈದರಾಬಾದ್​ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡುವ ಕಾರ್ಯಸೂಚಿಯನ್ನು ಮತ್ತೊಮ್ಮೆ ಪರೋಕ್ಷವಾಗಿ ಪ್ರಸ್ತಾಪಿಸಿದೆ.

   ಆರ್​​ಎಸ್​ಎಸ್ ಈ ಕುರಿತು ಟ್ವೀಟ್ ಮಾಡಿದೆ.  ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಎಸ್‌ಎಸ್‌ನಿಂದ ಪ್ರೇರಿತವಾಗಿರುವ ವಿವಿಧ ಸಂಘಟನೆಗಳ ಮುಖ್ಯ ಪದಾಧಿಕಾರಿಗಳ ಸಮನ್ವಯ ಸಭೆ 2022ರ ಜನವರಿ 5 ರಿಂದ 7ರವರೆಗೆ ತೆಲಂಗಾಣದ ಭಾಗ್ಯನಗರದಲ್ಲಿ ನಡೆಯಲಿದೆ ಎಂದು ಸುನಿಲ್ ಅಂಬೇಕರ್ ಎಂಬುವವರ ಹೆಸರಿನಲ್ಲಿ ಟ್ವೀಟ್‌ ಮಾಡಲಾಗಿದೆ.

Share Post