DistrictsHealthUncategorized

ಎರಡೂ ವ್ಯಾಕ್ಸಿನ್‌ ಪಡೆದಿದ್ದರೂ ಧಾರವಾಡದ 66 ವಿದ್ಯಾರ್ಥಿಗಳಿಗೆ ಕೊವಿಡ್‌ ಪಾಸಿಟಿವ್

ಧಾರವಾಡ: ಎರಡೂ ವ್ಯಾಕ್ಸಿನ್‌ ಪಡೆದಿದ್ದರೂ ಧಾರವಾಡದ ಎಸ್‌ಡಿಎಂ ಮೆಡಿಕಲ್‌ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊವಿಡ್‌ ಪಾಸಿಟಿವ್‌ ಬಂದಿರುವುದು ಬೆಳಕಿಗೆ ಬಂದಿದೆ.

ಧಾರವಾಡದ ಎಸ್‌ಡಿಎಂ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನಲ್ಲಿ ಒಟ್ಟು 400 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 300 ವಿದ್ಯಾರ್ಥಿಗಳಿಗೆ ಕೊವಿಡ್‌ ಟೆಸ್ಟ್‌ ಮಾಡಲಾಗಿದ್ದು, ಇದರಲ್ಲಿ 66 ವಿದ್ಯಾರ್ಥಿಗಳಿಗೆ ಕೊವಿಡ್‌ ಪಾಸಿಟಿವ್‌ ಬಂದಿದೆ.

ಪಾಸಿಟಿವ್‌ ಬಂದಿರುವ ಎಲ್ಲಾ ವಿದ್ಯಾರ್ಥಿಗಳೂ ಈಗಾಗಲೇ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಿದ್ದರೂ ಕೊವಿಡ್‌ ಪಾಸಿಟಿವ್‌ ಬಂದಿರುವುದರಿಂದ ಕಾಲೇಜಿನಲ್ಲಿ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ಎರಡೂ ಹಾಸ್ಟೆಲ್‌ಗಳನ್ನು ಲಾಕ್‌ ಡೌನ್‌ ಮಾಡಲಾಗಿದೆ. ವಿದ್ಯಾರ್ಥಿಗಳು ಯಾರೂ ಹಾಸ್ಟೆಲ್‌ನಿಂದ ಹೊರಬರದಂತೆ ಸೂಚಿಸಲಾಗಿದೆ.

Share Post