Districts

ನಾಳೆಯಿಂದ ಮೈಸೂರಿನಲ್ಲಿ ಯುವ ದಸರಾ; ಶಿವರಾಜ್‌ಕುಮಾರ್‌ರಿಂದ ಉದ್ಘಾಟನೆ

ಮೈಸೂರು; ನಾಳೆಯಿಂದ ಮೈಸೂರಿನಲ್ಲಿ ಯುವ ದಸರಾ ನಡೆಯಲಿದ್ದು, ಅದರ ಕಾರ್ಯಕ್ರಮಗಳ ಪಟ್ಟಿ ರಿಲೀಸ್‌ ಮಾಡಲಾಗಿದೆ. ಅಕ್ಟೋಬರ್​ 18 ರಿಂದ 21ರವರೆಗೆ 4 ದಿನಗಳ ಕಾಲ ಯುವದಸರಾ ನಡೆಯಲಿದ್ದು, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಇದನ್ನು ಉದ್ಘಾಟನೆ ಮಾಡಲಿದ್ದಾರೆ.

ಅ.​​18ರಂದು ಯುವದಸರಾವನ್ನು ನಟ ಶಿವರಾಜ್​​ ಕುಮಾರ್​ ಉದ್ಘಟಿಸಲಿದ್ದಾರೆ. ಅ.18ರ ಸಂಜೆ 7 ಗಂಟೆಗೆ ಸ್ಯಾಂಡಲ್‌ವುಡ್ ನೈಟ್ಸ್ ನಡೆಯಲಿದೆ. ಅ19ರಂದು ಸಂಜಿತ್​​ ಹೆಗ್ಡೆ ತಂಡ, ಶಿಲ್ಪಾರಾವ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಅ.20ರಂದು ಆಲ್ ಓಕೆ ಮತ್ತು ಸುಲೈಮಾನ್ ತಂಡದಿಂದ ಕಾರ್ಯಕ್ರಮಗಳು ನಡೆಯಲಿವೆ. ಅ.21ಕ್ಕೆ ಮೋಹನ್ ಸಿಸ್ಟರ್ಸ್, ಬೆನ್ನಿ ದಯಾಳ್ ತಂಡದಿಂದ ಕಾರ್ಯಕ್ರಮ ನಡೆಲಿದೆ.

Share Post