ಪೇಜಾವರ ಶ್ರೀ ಬಗ್ಗೆ ಅವಹೇಳನ ಭಾಷಣ ; ಹೇಳಿಕೆ ದಾಖಲಿಸಿದ ಹಂಸಲೇಖ
ಬೆಂಗಳೂರು: ಪೇಜಾವರ ಶ್ರೀಗಳು ದಲಿತ ಮನೆಗೆ ಹೋಗುತ್ತಿದ್ದರು. ಆದರೆ, ಅವರಿಗೆ ಕೋಳಿ ಕೊಟ್ಟಿದ್ದಿದ್ದರೆ ತಿನ್ನುತ್ತಿದ್ದರೇ ಎಂದು ಪ್ರಶ್ನಿಸಿ ವಿವಾದಕ್ಕೀಡಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಇಂದು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
ಇಂದು ತಮ್ಮ ವಕೀಲರ ಜೊತೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ ಸಂಗೀತ ನಿರ್ದೇಶಕ ಹಂಸಲೇಖ, ತಮ್ಮ ಹೇಳಿಕೆಯನ್ನು ಪೊಲೀಸರ ಮುಂದೆ ದಾಖಲಿಸಿದರು. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದ ಹಂಸಲೇಖಾ, ಪೇಜಾವರ ಶ್ರೀಗಳು ದಲಿತ ಮನೆಯಲ್ಲಿ ಕೋಳಿ ತಿನ್ನುತ್ತಿದ್ದರಾ..? ರಕ್ತ ಫ್ರೈ ಮಾಡಿಕೊಟ್ಟಿದ್ದರೆ ಸ್ವೀಕರಿಸುತ್ತಿದ್ದರಾ..? ಎಂದು ಪ್ರಶ್ನಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಾದ ಮೇಲೆ ಹಂಸಲೇಖ ಅವರು ಕ್ಷಮಾಪಣೆ ಕೇಳಿದ್ದರು.
ಆದರೆ, ಅದಾಗಲೇ ಪೇಜಾವರ ಶ್ರೀ ಭಕ್ತರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುವಂತೆ ಪೊಲೀಸರು ಹಂಸಲೇಖ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಅನಾರೋಗ್ಯದ ಕಾರಣ ಹಂಸಲೇಖ ಎರಡು ಬಾರಿ ಪೊಲೀಸ್ ಠಾಣೆಗೆ ಹೋಗಿರಲಿಲ್ಲ. ಕೊನೆಯದಾಗಿ ಅವರು, ಠಾಣೆಗೆ ಭೇಟಿ ನೀಡಿ, ಹೇಳಿಕೆ ದಾಖಲಿಸಿ ಬಂದಿದ್ದಾರೆ.
ಇನ್ನು ಇದೇ ವೇಳೆ ಹಂಸಲೇಖ ಜೊತೆ ನಟ ಚೇತನ್ ಅಹಿಂಸಾ ಕೂಡಾ ಠಾಣೆಗೆ ಆಗಮಿಸಿದ್ದರು. ಚೇತನ್ ಅಹಿಂಸಾ ಬಂದಿದ್ದಕ್ಕೆ ಭಜರಂಗದಳದ ಕಾರ್ಯಕರ್ತರು ವಿರೋಧಿಸಿದರು. ಹೀಗಾಗಿ ನಟ ಚೇತನ್ ಠಾಣೆಯ ಮುಂದೆ ಧರಣಿ ನಡೆಸಿದ ಘಟನೆಯೂ ನಡೆದಿದೆ.
ಬಸವನಗುಡಿ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ