Skip to content
ಬೆಳಗಾವಿ; ಕರ್ನಾಟಕ, ಮಹಾರಾಷ್ಟ್ರ ಭಾಷೆ ಬೇರೆಯಾದ್ರೂ ಸಂಸ್ಕೃತಿ ಒಂದೇ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾ.ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ರು.
ಹತ್ತಾರು ವರ್ಷಗಳಿಂದ ಸೌಹಾರ್ದಯುತವಾಗಿ ಇದ್ದೇವೆ ಎಂದರು. ಇನ್ನು ಮಹಾರಾಷ್ಟ್ರ ಸದನದಲ್ಲಿ ಕರ್ನಾಟಕ ಸಿಎಂಗೆ ಅಪಮಾನ ವಿಚಾರಕ್ಕೆ ಸಂಬಂಧಿಸಿ ನಮ್ಮ ಸಿಎಂ ಗೌರವ ಒಂದು ಪರ್ಸೆಂಟ್ ಕೂಡ ಕಡಿಮೆ ಆಗಲ್ಲ. ಜಗಳವಾಡಬೇಕೆಂದು ಬಯಸಿದರೆ ಹೆಜ್ಜೆ ಹೆಜ್ಜೆಗೂ ಜಗಳವಾಗುತ್ತದೆ. ನಾವು ಭಾಷೆ ಭಾಷೆ ಮಧ್ಯೆ ಸಂಬಂಧ ಗಟ್ಟಿಗೊಳಿಸಬೇಕಿದೆ. ರಾಜಕೀಯ ನಿರುದ್ಯೋಗಿಯಾದಾಗ ಉದ್ಯೋಗ ಸೃಷ್ಟಿ ಮಾಡಿಕೊಳ್ತಾರೆ ಎಂದರು.