Big Breaking; ವೆಂಕಟಮ್ಮನಹಳ್ಳಿ ನಕ್ಸಲ್ ನರಮೇಧ ಪ್ರಕರಣ; 19 ವರ್ಷದ ನಂತರ ಪ್ರಮುಖ ಆರೋಪಿ ಅರೆಸ್ಟ್
ತುಮಕೂರು; ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿಯಲ್ಲಿ 19 ವರ್ಷಗಳ ಹಿಂದೆ ನಕ್ಸಲರು ಅಟ್ಟಹಾಸ ಮೆರೆದಿದ್ದರು.. ಪೊಲೀಸರ ಬಿಡಾರದ ಮೇಲೆ ದಾಳಿ ನಡೆಸಿ ಸುಮಾರು ಏಳು ಮಂದಿ ಪೊಲೀಸ್ ಅಧಿಕಾರಿಗಳ ಸಾವಿಗೆ ಕಾರಣರಾಗಿದ್ದರು.. ಈ ಪ್ರಕರಣದ ಪ್ರಮುಖ ಆರೋಪಿ ಕೊತ್ತಗೆರೆ ಶಂಕರ ಅಲಿಯಾಸ್ ಸುಬ್ಬರಾಯುಡು 19 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ..
ಅರೋಪಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ. 2005ರ ಅಕ್ಟೋಬರ್ 2ರಂದು ರಾತ್ರಿ 10.30ರ ವೇಳೆ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ನಡೆದಿತ್ತು. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದರು.. ಟೆಂಟ್ ಹಾಕಿಕೊಂಡು ರಾತ್ರಿ ಮಲಗಿದ್ದಾಗ ಅದರ ಮೇಲೆ ಬಂದೂಕುಗಳು, ಹ್ಯಾಂಡ್ ಗ್ರೈನೇಡ್ಗಳೊಂದಿಗೆ 300 ನಕ್ಸಲೀಯರು ದಾಳಿ ಮಾಡಿದ್ದರು.. ಘಟನೆಯಲ್ಲಿ ಕರ್ತವ್ಯದ ಮೇಲಿದ್ದ 7 ಮಂದಿ ಪೊಲೀಸರು ಸಾವನ್ನಪ್ಪಿದ್ರು. 5 ಮಂದಿ ಪೊಲೀಸರಿಗೆ ಗಾಯಗಳಾಗಿದ್ದವು.
ಖಾಸಗಿ ಬಸ್ನ ಕ್ಲೀನರ್ನನ್ನೂ ಇದೇ ವೇಳೆ ಕೊಲೆ ಮಾಡಲಾಗಿತ್ತು. ಜೊತೆಗೆ ಪೊಲೀಸ್ ಕ್ಯಾಂಪ್ನಲ್ಲಿ ಬಂದೂಕುಗಳು, ಗುಂಡುಗಳನ್ನೂ ದೋಚಲಾಗಿತ್ತು. ಈ ಸಂಬಂಧ ಪಾವಗಡ ತಾಲ್ಲೂಕಿನ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 32 ಮಂದಿ ಆರೋಪಿಗಳ ಮೇಲೆ ಜಾಮೀನು ರಹಿತ ಬಂಧನದ ವಾರಂಟ್ನ್ನ ಹೊರಡಿಸಲಾಗಿತ್ತು. ಪಾವಗಡದ ಜೆಎಂಎಫ್ಸಿ ನ್ಯಾಯಾಲಯದಿಂದ ವಾರೆಂಟ್ ಜಾರಿ ಮಾಡಲಾಗಿತ್ತು.
ತುಮಕೂರು – ಬೆಂಗಳೂರು ಆಂತರಿಕ ಭದ್ರತಾ ವಿಭಾಗ ಹಾಗೂ ಸಿ.ಐ ತಂಡದಿಂದ ಶೋಧ ಕಾರ್ಯ ನಡೆದಿತ್ತು. ಆದ್ರೆ ಬೆಂಗಳೂರಿನ ಬಿಬಿಎಂಪಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಂತಹ ಕೊತ್ತಗೆರೆ ಶಂಕರ 19 ವರ್ಷಗಳಿಂದ ಸಿಕ್ಕಿರಲಿಲ್ಲ. ಕೊನೆಗೂ ಈಗ ಆತ ಸಿಕ್ಕಿಬಿದ್ದಿದ್ದಾರೆ..