ರಾಜ್ಯದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ; ಮದುವೆಗೆ 500 ಜನಕ್ಕಷ್ಟೇ ಎಂಟ್ರಿ
ಬೆಂಗಳೂರು: ಎರಡೂ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರಷ್ಟೇ ಮಾಲ್, ಸಿನಿಮಾ ಹಾಲ್‌ಗಳಿಗೆ ಎಂಟ್ರಿ ನೀಡಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ಆದ್ರೆ ಸದ್ಯಕ್ಕೆ ನೈಟ್ ಕರ್ಫ್ಯೂ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ. ಸಿಎಂ ನೇತೃತ್ವದಲ್ಲಿ ನಡೆದ ತಜ್ಞರ ಸಭೆ ಬಳಿಕ ಅವರು, ಸಭೆಯಲ್ಲಿ ಆದ ತೀರ್ಮಾನಗಳನ್ನು ವಿವರಿಸಿದ್ದಾರೆ.
ಸಿಎಂ ಸಭೆಯಲ್ಲಿ ಕೈಗೊಂಡ ತೀರ್ಮಾನಗಳೇನು..?
೧. ಶಾಲೆ, ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ ವ್ಯಾಕ್ಸಿನ್ ಕಡ್ಡಾಯ
೨. ವಿಮಾನ ನಿಲ್ದಾಣಗಳಲ್ಲಿ ಟೆಸ್ಟಿಂಗ್ ಕಡ್ಡಾಯ
೩. ವ್ಯಾಕ್ಸಿನೇಷನ್ ಆಗಿದ್ರಷ್ಟೇ ಮಾಲ್, ಥಿಯೇಟರ್‌ಗೆ ಎಂಟ್ರಿ
೪. ಶಾಲಾ, ಕಾಲೇಜುಗಳಲ್ಲಿ ಸಭೆ, ಸಮಾರಂಭಗಳನ್ನು ಮಾಡಬಾರದು
೫. ಸಿನಿಮಾ ಹಾಲ್, ಹೋಟೆಲ್, ಮಾಲ್‌ಗಳಲ್ಲಿ ಕೆಲಸ ಮಾಡುವವರು ಎರಡೂ ಡೋಸ್ ಪಡೆದಿರುವುದು ಕಡ್ಡಾಯ
೬. ಮದುವೆಗಳಲ್ಲಿ ೫೦೦ ಜನರಿಗಷ್ಟೇ ಅವಕಾಶ
೭. ಪ್ರತಿನಿತ್ಯ ೧ ಲಕ್ಷ ಡೋಸ್ ಕೊವಿಡ್ ಟೆಸ್ಟ್ ಮಾಡಲು ಸೂಚನೆ
೮. ಕೊವಿಡ್ ಬೆಡ್, ಐಸಿಯು ಬೆಡ್ ಸಿದ್ದಪಡಿಸಲಾಗುತ್ತದೆ
೯. ಕೊವಿಡ್‌ಗೆ ಸಂಬಂಧಿಸಿದ ಕಮಿಟಿಗಳೆಲ್ಲಾ ಮತ್ತೆ ಆಕ್ಟಿವ್ ಆಗಲಿವೆ
೧೦. ರಾಜ್ಯದಲ್ಲಿ ಮತ್ತೆ ಕೊವಿಡ್ ಕಂಟ್ರೋಲ್ ತೆರೆಯಲು ಸೂಚನೆ
೧೧. ಔಷಧ ಕೊರತೆ ಉಂಟಾಗದಂತೆ ಅಗತ್ಯ ಕ್ರಮಕ್ಕೆ ಸೂಚನೆ