ಮೊದಲ ಭೇಟೆಯಾಡಿದ ನಮೀಬಿಯಾ ಚೀತಾಗಳು..!
ಶಿಯೋಪುರ್(ಮಧ್ಯಪ್ರದೇಶ); ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತಂದಿರುವ ನಮೀಬಿಯಾ ಚೀತಾಗಳಲ್ಲಿ ಎರಡು ಗಂಡು ಚೀತಾಗಳು ಮೊದಲ ಭೇಟೆಯಾಡಿವೆ. ಕ್ವಾರಂಟೀನ್ನಲ್ಲಿದ್ದ ಅವುಗಳನ್ನು ಕಾಡಿಗೆ ಬಿಟ್ಟ ದಿನವೇ ಜಿಂಕೆಯೊಂದನ್ನು ಭೇಟೆಯಾಡಿ ತಿಂದಿವೆ. ಆ ದೃಶ್ಯಗಳು ಸಿಸಿಟಿಯಲ್ಲಿ ದಾಖಲಾಗಿವೆ.
ನಮೀಬಿಯಾದಿಂದ ತಂದಿರುವ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ತರಲಾಗಿತ್ತು. ಆದ್ರೆ ಅವುಗಳನ್ನೆಲ್ಲಾ ಕ್ವಾರಂಟೀನ್ನಲ್ಲಿ ಇರಿಸಲಾಗಿತ್ತು. ಇದರಲ್ಲಿ ಎರಡು ಗಂಡು ಚೀತಾಗಳನ್ನು ನವೆಂಬರ್ 5 ರಂದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಮೊದಲ ದಿನವೇ ಬೇಟೆಯಾಡಿವೆ.