CinemaNational

ಆದಿಪುರುಷ್‌ ರಿಲೀಸ್‌ ಡೇಟ್‌ ಮುಂದಕ್ಕೆ; ಪ್ರಭಾಸ್‌ ಅಭಿಮಾನಿಗಳಿಗೆ ನಿರಾಸೆ

ಹೈದರಾಬಾದ್‌; ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ರಿಲೀಸ್‌ ಡೇಟ್‌ ಮುಂದಕ್ಕೆ ಹೋಗಿದೆ. ಚಿತ್ರತಂಡದ ಎಡವಟ್ಟಿನಿಂದ ಹೀಗೆ ಆಗಿದ್ದು, ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ಓಂ ರಾವತ್ ಟ್ವೀಟ್ ಮಾಡಿದ್ದಾರೆ.

ರಾಮಾಯಣ ಕಥೆ ಆಧಾರವಾಗಿಟ್ಟುಕೊಂಡು ಆದಿಪುರುಷ್ ಸಿನಿಮಾ ತಯಾರಿಸಲಾಗಿದೆ. ರಾಮನಾಗಿ ಪ್ರಭಾಸ್ ನಟಿಸಿದ್ದು, ನಾಯಕಿಯಾಗಿ ಕೃತಿ ಸನೂನ್ ಬಣ್ಣ ಹಚ್ಚಿದ್ದಾರೆ. ರಾವಣನಾಗಿ ಸೈಫ್ ಆಲಿ ಖಾನ್ ನಟನೆ ಮಾಡಿದ್ದಾರೆ. ಚಿತ್ರದ ಟೀಸರ್ ನೋಡಿ ಕಳಪೆ ಗ್ರಾಫಿಕ್ಸ್ ಎಂದು ನೆಟ್ಟಿಗರು ಲೇವಡಿ ಮಾಡಿದ್ದರು. ಹಾಗಾಗಿ ಚಿತ್ರತಂಡ ಮುಂದಿನ ವರ್ಷ ಜೂನ್‌ 16ಕ್ಕೆ ಸಿನಿಮಾ ರಿಲೀಸ್‌ ಮಾಡಲು ನಿರ್ಧರಿಸಿದೆ.

Share Post