Uncategorized

40 ಲಕ್ಷ ರೂಪಾಯಿ ಲೂಟಿ ಪ್ರಕರಣ ; ಆರೋಪಿಗಳು ಅಂದರ್‌

ಗಾಜಿಯಾಬಾದ್: ಮಸ್ಸೂರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಂದ ಲೂಟಿ ಮಾಡಲಾಗಿದ್ದ 40 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಏಳು ಆರೋಪಿಗಳನ್ನು ಮಸ್ಸೂರಿ ಠಾಣೆ ಪೊಲೀಸರು ಬಂಧಿಸಿದ್ದು, ಇಂದು ಅವರನ್ನು ಮಾಧ್ಯಮದ ಮುಂದೆ ಹಾಜರುಪಡಿಸಿದರು.

ಡಿಸೆಂಬರ್‌ 28ರಂದು ಸಂಜೆ ಸಸೌದಿ ಅರೇಬಿಯಾದಿಂದ ಹವಾಲಾ ರೂಪದಲ್ಲಿ 40 ಲಕ್ಷ ರೂಪಾಯಿ ಹಣವನ್ನು ತರಲಾಗಿತ್ತು. ರೂಪ್‌ ಸಿಂಗ್‌ ಎಂಬುವವರಿಗೆ ಸೇರಿದ ಹಣ ಇದಾಗಿದ್ದು, ಇದನ್ನು ಏಳು ಆರೋಪಿಗಳು ಲೂಟಿ ಮಾಡಿದ್ದರು. ಈ ಸಂಬಂಧ ರೂಪ್‌ ಸಿಂಗ್‌ ಮಸ್ಸೂರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸೌದಿ ಹಣ ಹೇಗೆ ಬಂತು, ಅದಕ್ಕೆ ದಾಖಲೆ ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share Post