ಅಕ್ರಮ ಡ್ರಗ್ಸ್ ಸಾಗಾಟ; ಮೇಘಾಲಯ ಗಡಿಯಲ್ಲಿ ನಿಷೇಧಿತ ಸಿರಪ್ ವಶ
ಮೇಘಾಲಯ: ಗಡಿ ಭಾಗದಲ್ಲಿ ಅಕ್ರಮ ಡ್ರಗ್ಸ್ ದಂಧೆ ಜೋರಾಗಿ ನಡೆಯುತ್ತಿದೆ. ಕಳೆದ ಎರಡು ಮೂರು ತಿಂಗಳಿಂದ ಬಿಎಸ್‌ಎಫ್ ಸಿಬ್ಬಂದಿ, ಹಲವಾರು ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಇಂದು ಮತ್ತೆ ಮೇಘಾಲಯದ ದಕ್ಷಿಣ ಗಾರೊ ಹಿಲ್ಸ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ೫೯೭ ಬಾಟಲಿ ನಿಷೇಧಿತ ಕೆಮ್ಮು ಸಿರಪ್ ‘ಫೆನ್ಸೆಡೈಲ್’ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಿರಫ್‌ಗಳನ್ನು ಬಾಂಗ್ಲಾದೇಶಕ್ಕೆ ರವಾನೆ ಮಾಡಲು ಸಿದ್ಧತೆ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. ಆದ್ರೆ ಇದರ ಹಿಂದೆ ಯಾರಿದ್ದಾರೆ..? ಯಾರು ಇವುಗಳನ್ನು ಸಾಗಣೆ ಮಾಡುತ್ತಿದ್ದರು..? ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.