Cinema

ಪುನೀತ್‌ ನಿರ್ಮಾಣದ ಫ್ಯಾಮಿಲಿ ಪ್ಯಾಕ್‌ ಇಂದಿನಿಂದ ಪ್ರೈಮ್‌ನಲ್ಲಿ

ಬೆಂಗಳೂರು : ಅಮೆಜಾನ್‌ ಪ್ರೈಮ್‌ ಓಟಿಟಿಯಲ್ಲಿ ಪುನೀತ್‌ ನಿರ್ಮಾಣದ ಮೂರು ಸಿನಿಮಾಗಳು ಇದೇ ಫೆಬ್ರುವರಿಯಲ್ಲಿ ತೆರೆಕಾಣಲಿವೆ ಎಂದು ಪ್ರೈಮ್‌ ಘೋಷಿಸಿತ್ತು. ಈಗ ಎರಡನೇ ಸಿನಿಮಾ ಫ್ಯಾಮಿಲಿ ಪ್ಯಕ್‌ ಸಿನಿಮಾ ಇಂದಿನಿಂದ ಸ್ಟ್ರೀಮಿಂಗ್‌ ಆಗುತ್ತಿದೆ.

ಪಿ ಆರ್‌ಕೆ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿದ್ದ ಮೂರು ಚಿತ್ರಗಳು ನೇರವಾಗಿ ಅಮೆಜಾನ್‌ ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಮೊದಲನೇಯದಾಗಿ ದ್ಯಾನಿಶ್‌ ಸೇಠ್‌ ಅಭಿನಯದ ಒನ್‌ ಕಟ್‌ ಟು ಕಟ್‌ ಬಿಡುಗಡೆ ಆಗಿದೆ. ಈಗ ಫ್ಯಾಮಿಲಿ ಪ್ಯಾಕ್‌ ಸ್ಟ್ರೀಮ್‌ ಆಗ್ತಿದೆ.

ಈ ಸಿನಿಮಾದಲ್ಲಿ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕಾಮಿಡಿ ಜಾನರ್‌ ಸಿನಿಮಾ ಆಗಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಫ್ಯಾಮಿಲಿ ಪ್ಯಾಕ್‌ ಕುರಿತು ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಕೂಡ ಟ್ವೀಟ್‌ ಮಾಡಿದ್ದಾರೆ.

Share Post