BengaluruDistricts

HIJAB ROW: ಮುಂದುವರಿದ ಹಿಜಾಬ್‌ ವಿವಾದ; ಇಂದೂ ಹಲವೆಡೆ ಗೊಂದಲ

ಬೆಂಗಳೂರು: ಹಿಜಾಬ್‌ ವಿವಾದ ತಣ್ಣಗಾಗೋ ಲಕ್ಷಣ ಕಂಡುಬರುತ್ತಿಲ್ಲ. ಇವತ್ತೂ ಕೂಡಾ ರಾಜ್ಯದ ಹಲವಾರು ಕಡೆ ಗೊಂದಲ ಮುಂದುವರೆದಿದೆ. ಹಲವು ವಿದ್ಯಾರ್ಥಿನಿಯರು ಹಿಜಾಬ್‌ ಹಾಕಿಕೊಂಡು ಶಾಲಾ-ಕಾಲೇಜಿಗೆ ಬಂದಿದ್ದಾರೆ. ಹಿಜಾಬ್‌ ಹಾಕಿಕೊಂಡೇ ತರಗತಿ ಪ್ರವೇಶಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಕೆಲವೆಡ ಪೋಷಕರು ಕೂಡಾ ಕಾಲೇಜು ಬಳಿ ಆಗಮಿಸಿ, ಆಡಳಿತ ಮಂಡಳಿ ಜೊತೆ ವಾಗ್ವಾದಕ್ಕಿಳಿದ್ದಾರೆ.

ವಿಜಯಪುರ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇವತ್ತೂ ಕೂಡಾ ಹಿಜಾಬ್‌ ವಿಚಾರವಾಗಿ ಗೊಂದಲ ಮುಂದುವರೆದಿದೆ. ಕೆಲವೆಡೆ ಪರೀಕ್ಷೆಗಳು ನಡೆಯುತ್ತಿದ್ದರೂ, ವಿದ್ಯಾರ್ಥಿನಿಯರು ಹಿಜಾಬ್‌ ಗೆ ಅವಕಾಶ ಕೊಡದಿದ್ದರೆ ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Share Post