HealthUncategorized

ವೈದ್ಯರನ್ನು ಕಾಡುತ್ತಿದೆ ಕೊರೊನಾ; ಮಹಾರಾಷ್ಟ್ರದಲ್ಲಿ 216 ವೈದ್ಯರಿಗೆ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ವೈದ್ಯರನ್ನೇ ಹೆಚ್ಚು ಕಾಡುತ್ತಿದೆ. ಕಳೆದ ಮೂರು ದಿನಗಳಿಂದ ಸುಮಾರು 216 ವೈದ್ಯರಿಗೆ ಕೊರೊನಾ ಪಾಸಿಟಿವ್‌ ಆಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರನ್ನೂ ಐಸೋಲೇಷನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ನೀಡಬೇಕಾದರ ವೈದ್ಯರಿಗೇ ಕರೊನಾ ವಕ್ಕರಿಸುತ್ತಿರುವುದು ಮಹಾರಾಷ್ಟ್ರ ಸರ್ಕಾರದ ನಿದ್ದೆಗೆಡಿಸಿದೆ. ನಿನ್ನೆ ಸುಮಾರು 139 ನಿವಾಸಿ ವೈದ್ಯರಿಗೆ ಕೊರೊನಾ ಸೋಂಕು ತಗುಲಿತ್ತು. ಇಂದು ಮತ್ತೆ 61 ನಿವಾಸಿ ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಒಟ್ಟು 139 ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 ಯಾವ ಆಸ್ಪತ್ರೆಯಲ್ಲಿ ಎಷ್ಟು ವೈದ್ಯರಿಗೆ ಸೋಂಕು..?

  1. 216 ನಿವಾಸಿ ವೈದ್ಯರಿಗೆ ಕೊರೊನಾ ಪಾಸಿಟಿವ್‌
  2. ಮುಂಬೈ ನಗರದ ಆಸ್ಪತ್ರೆ ವೈದ್ಯರಿಗೇ ಹೆಚ್ಚು ಸೋಂಕು
  3. ಜೆಜೆ ಆಸ್ಪತ್ರೆಯ 59 ನಿವಾಸಿ ವೈದ್ಯರಿಗೆ ಕೊರೊನಾ ದೃಢ
  4. ಸಿಯಾನ್‌ ಆಸ್ಪತ್ರೆಯ 50 ವೈದ್ಯರಿಗೆ ಸೋಂಕು ದೃಢ
  5. ನಾಯರ್‌ ಆಸ್ಪತ್ರೆ 40 ನಿವಾಸಿ ವೈದ್ಯರಿಗೆ ಕೊರೊನಾ ಸೋಂಕು
  6. ಕೆಇಎಂ ಆಸ್ಪತ್ರೆಯ 40 ವೈದ್ಯರಿಗೂ ಕೊರೊನಾ ಸೋಂಕು
  7. ಥಾಣೆಯಲ್ಲಿ 8, ಧುಲೆಯಲ್ಲಿ 8 ವೈದ್ಯರಿಗೆ ಕೊರೊನಾ ಸೋಂಕು
  8. ಕುಪರ್‌ ಆಸ್ಪತ್ರೆಯ 7 ವೈದ್ಯರು, ಸಸೂನ್‌ನ 5 ವೈದ್ಯರಿಗೆ ಸೋಂಕು
  9. ಲಾತೂರ್‌ನ  1, ಮೀರಜ್‌ನಲ್ಲಿ ಒಬ್ಬ ವೈದ್ಯರಿಗೆ ಸೋಂಕು ದೃಢ
  10. ಔರಂಗಾಬಾದ್‌ 1, ನಾಗ್ಪುರದಲ್ಲಿ ಒಬ್ಬ ವೈದ್ಯರಿಗೆ ಸೋಂಕು
Share Post